ಜೋಕಾಲಿ ಆಡುವ ವೇಳೆ ಚೂಡಿದಾರ್ ವೇಲ್ ಸಿಲುಕಿ 12ರ ಬಾಲಕಿ ಸಾವು – vishwanews24

Featured, ರಾಜ್ಯ ನ್ಯೂಸ್

ಜೋಕಾಲಿ ಆಡುವ ವೇಳೆ ಚೂಡಿದಾರ್ ವೇಲ್ ಸಿಲುಕಿ 12ರ ಬಾಲಕಿ ಸಾವು

ಕಾರವಾರ: ಚೂಡಿದಾರ ವೇಲ್ ಸಿಲುಕಿ 12 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಭಟ್ಕಳ ತಾಲೂಕಿನ ತೆರ್ನಮಕ್ಕಿಯ ಸಬ್ಬತ್ತಿಯಲ್ಲಿ ನಡೆದಿದೆ.

ತೆರ್ನಮಕ್ಕಿ ಸಬ್ಬತ್ತಿ ನಿವಾಸಿ ಪ್ರಣಿತಾ ಜಗನ್ನಾಥ ನಾಯ್ಕ(12) ಮೃತ ಬಾಲಕಿ. ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ಮನೆಯಲ್ಲಿ ಜೋಕಾಲಿ ಆಟ ಆಡುತ್ತಿದ್ದಳು.

ಆಡುವಾಗ ಪ್ರಣಿತಾ ಕುತ್ತಿಗೆಯಲ್ಲಿದ್ದ ವೇಲ್‌ ಜೋಕಾಲಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಳು. ಕೂಡಲೇ ಸ್ಥಳೀಯ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗಲೇ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ. ಈ ಕುರಿತು ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಉದ್ಯಮಿ, ಶ್ರೀಮಂತ ವ್ಯಕ್ತಿಗಳಿಗೆ ಕೋಟ್ಯಂತರ ರೂ. ವಂಚಿಸಿದ ಆರೋಪಿ ಬಂಧನ – vishwanews24

Leave a Reply