ನವದೆಹಲಿ: ಟೂಲ್‍ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ ಹೋರಾಟಗಾರ್ತಿ ಬೆಂಗಳೂರಿನ ದಿಶಾ ರವಿಗೆ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ಜಾಮೀನು ನೀಡಿದೆ.
ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಜಾಮೀನು ನೀಡಿದೆ. ಹೆಚ್ಚುವರಿ ಸೆಶನ್ ಕೋರ್ಟ್ ಜಡ್ಜ್ ಧರ್ಮೇಂದ್ರ ರಾಣಾ ಅವರು ಜಾಮೀನು ನೀಡಿದ್ದು, ಇಬ್ಬರು ಶ್ಯೂರಿಟಿ ನೀಡಬೇಕು ಮತ್ತು 1 ಲಕ್ಷ ರೂ. ಬಾಂಡ್ ಪಾವತಿಸಬೇಕು ಎಂದು ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ್ದಾರೆ.
ಉಡುಪಿ: ಏರ್ಪೋರ್ಟ್ ನಿಂದ ಬರುತ್ತಿದ್ದ ಕಾರು ಚಾಲಕನಿಗೆ ಹೃದಯಾಘಾತ -Vishwanews24
ಸ್ವಿಡನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‍ಬರ್ಗ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದಿಶಾ ರವಿಯನ್ನ ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ನ್ಯಾಯಾಲಯ ಬಂಧಿತ ಆರೋಪಿಯನ್ನು ಐದು ದಿನ ಪೊಲೀಸರ ವಶಕ್ಕೆ ನೀಡಿತ್ತು. ಇದೀಗ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದರಿಂದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಜಾಮೀನು ನೀಡಿದೆ.
21 ವರ್ಷದ ದಿಶಾ ರವಿ ಓರ್ವ ಪರಿಸರ ಹೋರಾಟಗಾರ್ತಿಯಾಗಿದ್ದು, ಭಾರತದಲ್ಲಿ ಫ್ರೈಡೆ ಫಾರ್ ಫ್ಯೂಚರ್ ಹೆಸರಿನ ಸರ್ಕಾರೇತರ ಸಂಸ್ಥೆಯನ್ನು ಸ್ಥಾಪಿಸಿದ್ದರು. ದಿಶಾ ರವಿ ತಂದೆ ಮೈಸೂರಿನಲ್ಲಿ ಅಥ್ಲೆಟಿಕ್ಸ್ ಕೋಚ್ ಆಗಿದ್ದು ತಾಯಿ ಗೃಹಿಣಿಯಾಗಿದ್ದಾರೆ. ಈ ಟ್ವೀಟ್ ಮಾಡಿ ಬೆಂಬಲ ನೀಡಲು ಟೂಲ್ ಕಿಟ್ ಮುಖಾಂತರ ಹಣ ಪಡೆದ ಆರೋಪ ದಿಶಾ ರವಿ ಮೇಲಿದೆ.
ಉಚ್ಚಿಲ : ಖಾಸಗಿ ಬಸ್ ಟೈಮಿಂಗ್ ವಿಚಾರ : ಹೊಡೆದಾಡಿಕೊಂಡ ಬಸ್ ಚಾಲಕರು -Vishwanews24
ನಾನು ಯಾವುದಕ್ಕೂ ಹೆದರುವುದಿಲ್ಲ ; ಡಿಸೆಂಬರ್‌ನಲ್ಲಿ ತಾಯ್ನಾಡಿಗೆ ಮರಳಲಿದ್ದೇನೆ : ಶೇಖ್ ಹಸೀನಾ ನವದೆಹಲಿ,:ನನ್ನನ್ನು ಬಂಧಿಸಬಹುದು ಅಥವಾ ಕೊಲ್ಲಬಹುದು, ಯಾವುದಕ್ಕೂ ನಾನು…
ಕೊಟೇಶ್ವರ ರಸ್ತೆ ಅಪಘಾತ : ಅತಿವೇಗ ಅಜಾಗರೂಕತೆಯ ಚಾಲನೆ ; ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನ ಬಂಧನ ಉಡುಪಿ:…
ಮೈಸೂರು : ಅಕ್ಟೋಬರ್ 11ರಂದು ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಬೆಂಗಳೂರು/ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಕೊನೆಗೂ ದಿನಾಂಕ…
ಚೆಕ್ ಬೌನ್ಸ್ ಪ್ರಕರಣ : ಬಾಲಿವುಡ್ ನಟ ರಾಜ್‌ಪಾಲ್ ಯಾದವ್‌ಗೆ 3 ತಿಂಗಳ ಜೈಲು ಶಿಕ್ಷೆ ನವದೆಹಲಿ: ಚೆಕ್ ಬೌನ್ಸ್…
ರೈಲಿನಲ್ಲಿ ಸಂಚರಿಸುವ ಮುನ್ನ ಹೊಸ ನಿಯಮ ತಿಳ್ಕೊಳ್ಳಿ : ಇನ್ಮುಂದೆ ಮೊಬೈಲ್ನಲ್ಲಿ ಟಿಕಟ್ ತೋರಿಸಿದರೆ ದಂಡ ಫಿಕ್ಸ್ ನವದೆಹಲಿ :ಡಿಜಿಟಲ್…
ಸುರತ್ಕಲ್ : ಅಕ್ರಮವಾಗಿ ನೆಲೆಸಿದ್ದ 6 ಮಂದಿ ಬಾಂಗ್ಲಾದೇಶಿಗರ ಪತ್ತೆ , ಗಡಿಪಾರಿಗೆ ಪೊಲೀಸರ ಸಿದ್ಧತೆ ಮಂಗಳೂರು: ನಗರದ ಸುರತ್ಕಲ್ ಪೊಲೀಸ್…