ನವದೆಹಲಿ: ಪ್ರಖ್ಯಾತ ಟೈಮ್ಸ್‌ ನಿಯಾತಕಾಲಿಕೆ ಬಿಡುಗಡೆ ಮಾಡಿರುವ ‘2019 ರ ಜಗತ್ತಿನ 100 ಅಸಾಧಾರಣ ಸ್ಥಳ’ಗಳ ಪಟ್ಟಿಯಲ್ಲಿ ಗುಜರಾತ್‌ನಲ್ಲಿ ನಿರ್ಮಿಸಲಾಗಿರುವ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಏಕತಾ ಪ್ರತಿಮೆ ಜಾಗ ಪಡೆದಿದೆ.

ಟೈಮ್ಸ್‌ ‘2019 ರ ಜಗತ್ತಿನ ನೂರು ಅಸಾಧಾರಣ ಸ್ಥಳಗಳ ಪೈಕಿ ಏಕತಾ ಪ್ರತಿಮೆ ಜಾಗ ಪಡೆದಿದ್ದು ಒಳ್ಳೆಯ ಸುದ್ದಿ. ಕೆಲ ದಿನಗಳ ಹಿಂದೆ ಒಂದೇ ದಿನದಲ್ಲಿ 34000 ಮಂದಿ ಭೇಟಿ ನೀಡಿ ದಾಖಲೆ ಸೃಷ್ಟಿಯಾಗಿತ್ತು. ಈ ತಾಣವು ಜನಪ್ರೀಯ ಪ್ರವಾಸ ಸ್ಥಳವಾಗಿ ಬೆಳೆಯುತ್ತಿರುವುದು ಸಂತಸ ತಂದಿದೆ ಎಂದು ಟ್ವೀಟ್‌ ಮಾಡಿದ್ದಾರೆ.ಏಕತಾ ಪ್ರತಿಮೆ ಈ ಹಿರಿಮೆಗೆ ಪಾತ್ರವಾಗಿದ್ದಕ್ಕೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.