ಮಂಗಳೂರು: ರಾಜ್ಯದ ಸಮ್ಮಿಶ್ರ ಸರಕಾರವನ್ನು ಅಭದ್ರಗೊಳಿಸಿ ಉತ್ತಮ ಆಡಳಿತ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಬಿಜೆಪಿ- ಆರೆಸ್ಸೆಸ್ ಮಧ್ಯೆ ತಿಕ್ಕಾಟ ಆರಂಭಗೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದರು.
ಸಿಎಂ ಅಧಿಕಾರ ವಹಿಸಿದ ಒಂದು ತಿಂಗಳ ಬಳಿಕ ಸಚಿವ ಸಂಪುಟ ರಚನೆಯಾಗಿದೆ. ಈ ಹಿಂದೆ ಇಬ್ಬರು ಡಿಸಿಎಂ ಮಾಡಿದ್ದ ಬಿಜೆಪಿ, ಇದೀಗ ರಾಜ್ಯದ ಇತಿಹಾಸದಲ್ಲಿಪ್ರಥಮ ಬಾರಿ ತ್ರೀಡಿ ಡಿಸಿಎಂಗಳನ್ನು ಮಾಡಿ ನಗೆಪಾಟಲಿಗೀಡಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಸಚಿವ ಸಿ.ಟಿ.ರವಿ ರಾಜೀನಾಮೆಗೆ ಮುಂದಾಗುವ ಮೂಲಕ ಬಿಜೆಪಿ ಬಂಡವಾಳ ಬಯಲಾಗುತ್ತಿದೆ ಎಂದು ಐವನ್ ಹೇಳಿದರು. ಆರು ತಿಂಗಳ ತನಕ ಸಮಸ್ಯೆ ಇಲ್ಲಎಂದವರಿಗೆ ಭ್ರಮನಿರಸನವಾಗಿದೆ. ಅಧಿಕಾರ ಪಡೆದ ತಕ್ಷಣ ದ್ವೇಷದ ರಾಜಕೀಯ ಆರಂಭಿಸಿದ್ದು, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಮುಚ್ಚಲು ಹುನ್ನಾರ ನಡೆಸುತ್ತಿದೆ ಎಂದರು.
ನಮ್ಮಲ್ಲಿಸಮ್ಮಿಶ್ರ ಸರಕಾರ ಮಾತ್ರ ಇತ್ತು. ಬಿಜೆಪಿಯಲ್ಲಿ ತೃಪ್ತರು, ಅತೃಪ್ತರು, ಅನರ್ಹರ ಗುಂಪುಗಳಿವೆ. ಇಂಥವರಿಂದ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ. ಸರ್ವಪಕ್ಷದ ನಿಯೋಗವನ್ನಾದರೂ ಕೇಂದ್ರಕ್ಕೆ ಕೊಂಡೊಯ್ಯುವ ಕೆಲಸ ಸರಕಾರದಿಂದ ಆಗಲಿ ಎಂದು ಐವನ್ ಆಗ್ರಹಿಸಿದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…