ಟ್ರಕ್‌ಗೆ ಡಿಕ್ಕಿಯಾದ  ಐಷಾರಾಮಿ ಸ್ಲೀಪರ್ ಬಸ್ : ನಾಲ್ವರು ಸ್ಥಳದಲ್ಲೇ ಸಾವು – vishwanews24

Featured, ರಾಷ್ಟ್ರ ನ್ಯೂಸ್

ಟ್ರಕ್‌ಗೆ ಡಿಕ್ಕಿಯಾದ  ಐಷಾರಾಮಿ ಸ್ಲೀಪರ್ ಬಸ್ ; ನಾಲ್ವರು ಸ್ಥಳದಲ್ಲೇ ಸಾವು

ಲಕ್ನೋ : ಐಷಾರಾಮಿ ಸ್ಲೀಪರ್ ಬಸ್ಸೊಂದು ಟ್ರಕ್‌ಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾರಣಾಸಿ ಬಳಿಯ ಜಾನ್‌ಪುರದಲ್ಲಿ ಸಂಭವಿಸಿದೆ.

ಪ್ರಯಾಣಿಕರನ್ನು ಛತ್ತೀಸ್‌ಗಢದಿಂದ ಅಯೋಧ್ಯೆ ಮತ್ತು ವಾರಣಾಸಿಯ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯುತ್ತಿದ್ದ ವೇಳೆ ಈ ದುರಂತ ನಡೆದಿದೆ. ಅಪಘಾತದ ವೇಳೆ ಬಸ್ ನಲ್ಲಿ 50 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

 ಸೌದಿ ಅರಬಿಯಾದಲ್ಲಿ ರಸ್ತೆ ಅಪಘಾತ : ಉಳ್ಳಾಲದ ಯುವಕ ಮೃತ್ಯು – vishwanews24

ಜಾನ್‌ಪುರದ ಬಳಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಟ್ರಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಬಸ್‌ನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಒಂಭತ್ತು ಮಂದಿ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply