Featured

ಡಬಲ್ ಇಂಜಿನ್ ನಿಂದ ಹೊಗೆ ಬಂತೇ ಹೊರತು ಇಂಜಿನ್ ಮುಂದೆ ಹೋಗಲಿಲ್ಲ: ಡಿಕೆ ಶಿವಕುಮಾರ್ – Vishwanews24

ಡಬಲ್ ಇಂಜಿನ್ ನಿಂದ ಹೊಗೆ ಬಂತೇ ಹೊರತು ಇಂಜಿನ್ ಮುಂದೆ ಹೋಗಲಿಲ್ಲ: ಡಿಕೆ ಶಿವಕುಮಾರ್

ಮೈಸೂರು: ಇವರ ಡಬಲ್ ಇಂಜಿನ್ ಸರ್ಕಾರ ಹೈ ಸ್ಪೀಡಾಗಿ ಹೋಗಿಲ್ಲ. ಅದರಿಂದ ಕೇವಲ ಹೊಗೆ ಬಂತೇ ಹೊರತು, ಇಂಜಿನ್ ಮುಂದೆ ಹೋಗಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಲೇವಡಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳಿನ ರಾಜ್ಯ ಸರ್ಕಾರದ ಬಜೆಟ್ ಅಂತಿಮ‌ ಬಜೆಟ್ ಇರಲಿದೆ.

ಹಿಂದಿನ ವರ್ಷದ ಬಜೆಟ್ ಕೇವಲ ಘೋಷಣೆ, ಭರವಸೆಗಳ ಭಾಷಣದ ಬಜೆಟ್ ಆಗಿತ್ತು. ಕಳೆದ ಬಾರಿಯ ಬಜೆಟ್ ಪುಸ್ತಕ ನನ್ನ ಬಳಿಯಿದೆ. ಜನರಿಗೆ ಎಷ್ಟು ಭರವಸೆ ಕೊಟ್ಟಿದ್ದರು, ಎಷ್ಟು ಅನುಷ್ಠಾನಕ್ಕೆ ತಂದರೆಂದು ಬೊಮ್ಮಾಯಿ ಅವರು ಇಂದು ಸಂಜೆಯೊಳಗೆ ಹೇಳಬೇಕು. ನಾನು ಜನರಿಗೆ ನುಡಿದಂತೆ ನಡೆದಿದ್ದೇನೆ ಅಂತ ಬಸವರಾಜ ಬೊಮ್ಮಾಯಿ ಸಂಜೆಯೊಳಗೆ ಹೇಳಬೇಕು. ಹಿಂದಿನ ಬಜೆಟ್ ಜಾರಿಯಾಗದೆ ಮತ್ತೆ ಬಜೆಟ್ ಮಾಡಿದರೆ ಅದು ಭಾಷಣ ಮಾತ್ರ ಆಗುತ್ತದೆ ಎಂದರು.

ನಿಮ್ಮ ಪ್ರಣಾಳಿಕೆಯ 90% ಜಾರಿಗೆ ತರಲಾಗಿಲ್ಲ. ಯಡಿಯೂರಪ್ಪ ಹಸಿರು ಟವೆಲ್ ಹಾಕೊಂಡು ಪ್ರಮಾಣ ವಚನ ಸ್ವೀಕರಿಸಿದ್ದರು. ರೈತರಿಗೆ ಮೀಸಲಾದ ಕಾರ್ಯಕ್ರಮ ಬಜೆಟ್‌ನಲ್ಲಿ ತರಬೇಕಿತ್ತು. ಆದರೆ ಬರಿ ಸುಳ್ಳು ಹೇಳುತ್ತಿದ್ದೀರಿ. ಯಾವ ರೈತನಿಗೆ ಆದಾಯ ಒಂದುವರೆ ಪಟ್ಟಾಗಿದೆ ಹೇಳಿ? ರೈತ ಬಂಧು ಆವರ್ಥ ನಿಧಿ ಎಲ್ಲಿಟ್ಟಿದ್ದೀರಿ ಹೇಳಿ. ರೈತರ ಪಂಪ್‌ಸೆಟ್‌ಗೆ 10 ಗಂಟೆ ಉಚಿತ ವಿದ್ಯುತ್ ಕೊಟ್ಟಿದ್ದೀರಾ. ನಮಗೆ ಉಚಿತ ವಿದ್ಯುತ್ ಬಗ್ಗೆ ಟೀಕೆ ಮಾಡುತ್ತೀರಿ. ಹಾಗಾದ್ರೆ ನೀವು ಯಾಕೆ ಹೇಳಿದ್ದೀರಿ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಮೈಸೂರು- ಬೆಂಗಳೂರು ಹೈವೇಯಲ್ಲಿ 250 ರೂಪಾಯಿ ಟೋಲ್‌ ನಿಗದಿಗೆ ಆಕ್ರೋಶ ಹೊರಹಾಕಿದ ಅವರು, ಸರ್ವಿಸ್ ರಸ್ತೆ ನೀಡುವವರೆಗೂ ಟೋಲ್ ಸಂಗ್ರಹ ಮಾಡಕೂಡದು. ಟೋಲ್ ಕಟ್ಟಲು ಆಗದವರಿಗೆ ಸರ್ವಿಸ್ ರೋಡ್ ವ್ಯವಸ್ಥೆ ಮಾಡಿದ ನಂತರ ಟೋಲ್ ಸಂಗ್ರಹ ಮಾಡಿ. ಮೋದಿಯವರು ಮೈಸೂರನ್ನು ಪ್ಯಾರಿಸ್ ಮಾಡುತ್ತೇವೆ ಎಂದಿದ್ದರು, ಆದರೆ ಪ್ಯಾರಿಸ್ ಮಾಡೋದು ಬೇಡ. ಪ್ಯಾರಿಸ್ ಮಾದರಿಯಲ್ಲಿ ಒಂದು ರಸ್ತೆಯನ್ನಾದರೂ ನಿರ್ಮಿಸಿಕೊಡಿ ಸಾಕು ಎಂದರು.

Vishwa News 24

Recent Posts

ಉಡುಪಿ: ನಾನು ಕಾಂಗ್ರೆಸ್ ಪಕ್ಷ ಸೇರ್ಪಡೆ ಸುಳ್ಳು ಸುದ್ದಿ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ : ಪ್ರಮೋದ್ ಮಧ್ವರಾಜ್ – vishwanews24

ನನ್ನ ರಾಜಕೀಯ ಜೀವನದ ಮೂಲ ಉದ್ದೇಶ ಜನರ ಸೇವೆ.. ಅಧಿಕಾರ ಸಿಕ್ಕರೆ ಜನರ ಸೇವೆಗೆ ಬಳಸುತ್ತೇನೆ, ಸಿಗದಿದ್ದರೂ ಜನರ ಸೇವೆಯನ್ನು…

8 minutes ago

ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್‌ ಮಾತ್ರ: ಡೀಸೆಲ್‌ ಮಾರಾಟ ಮಿತಿಗೊಳಿಸಿದ ಕೇಂದ್ರ – vishwanews24

ಒಂದು ವಾಹನಕ್ಕೆ ದಿನಕ್ಕೆ 200 ಲೀಟರ್‌ ಮಾತ್ರ: ಡೀಸೆಲ್‌ ಮಾರಾಟ ಮಿತಿಗೊಳಿಸಿದ ಕೇಂದ್ರ ನವದೆಹಲಿ: ಡೀಸೆಲ್‌ ಮಾರಾಟಕ್ಕೆ ಕೇಂದ್ರ ಸರ್ಕಾರ…

15 minutes ago

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭ – vishwanews24

ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಕೆಎಸ್‌ಆರ್‌ಟಿಸಿ ಬಸ್ ಸೇವೆ ಆರಂಭ ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ)…

19 minutes ago

ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಕಾಪು ಶ್ರೀ ಹೊಸ ಮಾರಿಗುಡಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ – vishwanews24

ಉಡುಪಿ ಶ್ರೀ ಕೃಷ್ಣ ಮಠ ಹಾಗೂ ಕಾಪು ಶ್ರೀ ಹೊಸ ಮಾರಿಗುಡಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಉಡುಪಿ:…

24 minutes ago

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ -vishwanews24

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಕಿವೀಸ್ ಲೆಜೆಂಡ್ ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್  ಅಂತರರಾಷ್ಟ್ರೀಯ ಕ್ರಿಕೆಟ್‌ಗೆ…

18 hours ago

ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್‌ – vishwanews24

ಕೊಲ್ಲೂರು ಮೂಕಾಂಬಿಕೆಗೆ 1.6 ಕೆಜಿ ತೂಕದ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್‌ ಉಡುಪಿ: ತಮಿಳುನಾಡಿನ ಮುಖ್ಯಮಂತ್ರಿಯಾದ ಬಳಿಕ…

19 hours ago