ಡಿಕೆಶಿ ಶೀಘ್ರ ಬಿಡುಗಡೆ ಆಗುವಂತೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ; ಲಕ್ಷ್ಮೀ ಹೆಬ್ಬಾಳ್ಕರ್ ಹರಕೆ -Vishwanews24

Featured, ಉಡುಪಿ

ಉಡುಪಿ,: ಇಡಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಶೀಘ್ರ ಬಿಡುಗಡೆ ಆಗುವಂತೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನಡೆಸಲಾಯಿತು.

ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಇಂದು ಬೆಳಿಗ್ಗಿನಿಂದಲೇ ಚಂಡಿಕಾ ಹೋಮ ನಡೆಯುತ್ತಿದೆ.ಇವತ್ತು ಮುಂಜಾನೆಯೇ ಡಿ.ಕೆ.ಶಿ ಕುಟುಂಬದವರಿಂದ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ನಡೆಸಲಾಯಿತು.

ಡಿಕೆಶಿ ಬಿಡುಗಡೆಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಹರಕೆ ಹೊತ್ತಿದ್ದರು. ಯಾಗದಲ್ಲಿ ಡಿ ಕೆ ಶಿವಕುಮಾರ್ ಸಂಬಂಧಿಕರು ಭಾಗಿಯಾಗಿದ್ದರು. ಡಿಕೆಶಿ ಫೋಟೋ ಮುಂದಿಟ್ಟು ಚಂಡಿಕಾ ಹೋಮ ಮಾಡಲಾಗಿದೆ.

ಡಿಕೆಶಿ ತಾಯಿ ಭೇಟಿ ಮಾಡಿ ಧೈರ್ಯ ತುಂಬಿದ ಕುಮಾರಸ್ವಾಮಿ ಡಿಕೆಶಿ ಫೋಟೋ ಮುಂದಿಟ್ಟು ಚಂಡಿಕಾಹೋಮ ನಡೆಸಲಾಗುತ್ತಿದೆ. ರಾಜ್ಯ ಕಾಂಗ್ರೆಸ್ ನ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಸಂಕಷ್ಟಗಳೆಲ್ಲ ಪರಿಹಾರವಾಗಿ ಡಿ.ಕೆ ಶಿವಕುಮಾರ್ ಶೀಘ್ರ ಬಂಧಮುಕ್ತರಾಗುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ನಡೆಸಿದ್ದಾರೆ.

ಶಿವಕುಮಾರ್ ಅವರ ಸಂಕಷ್ಟಗಳೆಲ್ಲ ಪರಿಹಾರವಾಗಿ ಶೀಘ್ರ ಬಂಧಮುಕ್ತರಾಗುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆಯೂ ನಡೆಯಿತು. ರಾಜ್ಯ ಕಾಂಗ್ರೆಸ್‍ನ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.