ಡಿಕೆಶಿ ಸಿಎಂ ಆಗಲಿ ಎಂದು ನನಗೂ ಆಸೆ ಇದೆ : ಜಮೀರ್ ಅಹ್ಮದ್ – vishwanews24
ಡಿಕೆಶಿ ಸಿಎಂ ಆಗಲಿ ಎಂದು ನನಗೂ ಆಸೆ ಇದೆ : ಜಮೀರ್ ಅಹ್ಮದ್
ಬೆಳಗಾವಿ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಮುಖ್ಯಮಂತ್ರಿ ಆಗಬೇಕೆಂದು ಆಸೆ ಇದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಶುಕ್ರವಾರ ಹೇಳಿದ್ದಾರೆ.
ಗುರುವಾರ ರಾತ್ರಿ ಬೆಳಗಾವಿಯ ಹೊರವಲಯದಲ್ಲಿರುವ ದೊಡ್ಡಣ್ಣವರ್ ಫಾರ್ಮ್ಹೌಸ್ನಲ್ಲಿ ನಡೆದಿದ್ದ ಡಿನ್ನರ್ ಮೀಟಿಂಗ್ಗೆ ತಮಗೂ ಆಹ್ವಾನ ಇತ್ತು ಎಂದಿರುವ ಅವರು, ಸ್ನೇಹಿತರ ಮನೆಗೆ ತೆರಳಿದ್ದರಿಂದ ಔತಣ ಕೂಟಕ್ಕೆ ಹೋಗಲಾಗಿಲ್ಲ. ಡಿಕೆಶಿ ಸಿಎಂ ಆಗಲಿ ಎಂದು ನನಗೂ ಆಸೆ ಇದೆ. ಆದರೆ, ಅಂತಿಮ ನಿರ್ಧಾರವನ್ನು ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದರು.
ನಮ್ಮ ಅಭಿಪ್ರಾಯಗಳನ್ನು ನಾವು ಹೇಳಬಹುದು, ಆದರೆ ಅಂತಿಮ ತೀರ್ಮಾನ ಹೈಕಮಾಂಡ್ನದ್ದಾಗಿರುತ್ತದೆ. ನಮ್ಮ ಪಕ್ಷ ಹೈಕಮಾಂಡ್ ನಿರ್ದೇಶನದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಮಾಜಿ ಸಚಿವ ಹೆಚ್ ಎಂ. ರೇವಣ್ಣ ಪುತ್ರನ ಕಾರು ಡಿಕ್ಕಿ : ಬೈಕ್ ಸವಾರ ಸಾವು – vishwanews24
