ಉಡುಪಿ : ಉಡುಪಿ ಕರಾವಳಿ ಬೈಪಾಸ್ ಮೇಲ್ ಸೇತುವೆಯಲ್ಲಿ ಕಾರೊಂದು ಮೇಲಿನಿಂದ ಕೆಳಗೆ ಕೆಳಗೆ ರಸ್ತೆಯಲ್ಲಿ ಸಂಚರಿಸಸುತ್ತಿದ್ದ ಬೈಕ್ ನ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಸಾವನ್ನಪ್ಪಿದ ಯುವಕ ಬಾಗಲಕೋಟೆಯ ಮೂಲದ ಸುನೀಲ್ ಕುಮಾರ್ (24) ಎಂದು ತಿಳಿದು ಬಂದಿದೆ. ಕಾರು ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದು ತಾಯಿ ಮತ್ತು ಮಗ ಇದ್ದರು ಎಂದು ತಿಳಿದು ಬಂದಿದೆ.
ರಾಷ್ಟ್ರೀಯ ಹೆದ್ದಾರಿ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಕಾರು ಮೇಲ್ ಸೇತುವೆಯಲ್ಲಿ ಮಂಗಳೂರಿನತ್ತ ಪ್ರಯಾಣಿಸುತಿತ್ತು. ಆಗ ಚಾಲಕನ ನಿಯಂತ್ರಣ ತಪ್ಪಿ ಕಾರು ಕೆಳಗೆ ರಸ್ತೆಗೆ ಉರುಳಿ ಬಿದ್ದಿದೆ. ಉರುಳಿ ಬಿದ್ದ ಕಾರು ಕೆಳ ರಸ್ತೆಯಲ್ಲಿ ಬೈಕ್ ಸವಾರನ ಮೈಮೇಲೆ ಬಿದ್ದು,ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಕಾರಿನಲ್ಲಿದ್ದ ಮಹಿಳೆ ಮತ್ತು ಅವರ ಮಗನಿಗೆ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸ್ಥಳಕ್ಕೆ ಉಡುಪಿಯ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿದ್ದಾರೆ. ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉಡುಪಿ : ಆ. 20 ರಂದು ನೇರ ಸಂದರ್ಶನ ಉಡುಪಿ : ನಗರದ ಅಂಬಲಪಾಡಿ ಕರಾವಳಿ ಬೈಪಾಸ್ ಬಳಿಯ ರೀಗಲ್…
ಉಡುಪಿ: ಗೃಹ ಜ್ಯೋತಿ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸಿಕೊಳ್ಳಿ: ರಮೇಶ್ ಕಾಂಚನ್ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆಗಳ ಮರುಪರಿಶೀಲನೆಗೆ…
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹ: ಆ.22ರಂದು ಉಡುಪಿಯಲ್ಲಿ ಸಭೆ ಉಡುಪಿ: ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ…
ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಹೆಚ್ಚುವರಿ ಸಂಚಾರ ಉಡುಪಿ: ಗಣಪತಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಬೇಡಿಕೆಗೆ ಅನುಸಾರ…
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…