Featured

ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಸರ್ಕಾರ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ : ಸಿದ್ದರಾಮಯ್ಯ – vishwanews24

ಡಿ.ಕೆ. ಶಿವಕುಮಾರ್‌ ಅವರ ನೇತೃತ್ವದ ಸರ್ಕಾರ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ : ಸಿದ್ದರಾಮಯ್ಯ

ಬೆಂಗಳೂರು:ಡಿ.ಕೆ ಶಿವಕುಮಾರ್‌ ಅವರು ಮುಖ್ಯಮಂತ್ರಿಯಾಗಿ ಅವರ ನೇತೃತ್ವದ ಸರ್ಕಾರವು ಇಂದಿಗೆ 100 ದಿನಗಳನ್ನು ಪೂರೈಸಿದೆ. ಅದರ ಜ್ಞಾಪಕಾರ್ಥವಾಗಿ ಸರ್ಕಾರ ಈ ಆಚರಣೆಯನ್ನು ಮಾಡುತ್ತಿದೆ. 100 ದಿನಗಳು, ಇದೊಂದು ಸಂಭ್ರಮಾಚರಣೆಯಲ್ಲ; ಈ 100 ದಿನಗಳಲ್ಲಿ ನಾವು ಸರಿಯಾದ ದಾರಿಯಲ್ಲಿ ನಡೆಯುತ್ತಿದೆಯೋ ಅಥವಾ ಇಲ್ಲವೋ ಎಂಬುದನ್ನು ಜನರ ಮುಂದಿಡುವಂತಹ ಒಂದು ಜವಾಬ್ದಾರಿಯಾಗಿದೆ. ಆ ಜವಾಬ್ದಾರಿಯನ್ನು ಈ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇಂದು ಆಯೋಜಿಸಿದ್ದ “ದೃಢ ಕರ್ನಾಟಕದ ಸಂಕಲ್ಪ – 100 ದಿನಗಳ ಯಶಸ್ವಿ ಪೂರೈಕೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, ನಾವು ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿದ್ದೇವೆ. ಜನರು ಇಲ್ಲಿ ಮಾಲೀಕರು, ನಾವು ಜನರಿಗೆ ಏನು ವಾಗ್ದಾನಗಳನ್ನು ಕೊಟ್ಟಿದ್ದೇವೆ, ಆ ವಾಗ್ದಾನಗಳನ್ನು ಜಾರಿ ಮಾಡುತ್ತಿದ್ದೇವೆಯೋ? ಇಲ್ಲವೋ? ಎನ್ನುವುದು ಅದು ಬಹಳ ಮುಖ್ಯ. ಸಮಾಜದ ಅಸಮಾನತೆಯನ್ನು ಹೋಗಲಾಡಿಸಬೇಕು. ಸಮ ಸಮಾಜವನ್ನು ನಿರ್ಮಾಣ ಮಾಡಬೇಕು. ನಾವು ಸಮ ಸಮಾಜ ನಿರ್ಮಾಣ ಮಾಡದೆ ಹೋದರೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆಯುತ್ತಿದ್ದೇವೆ ಎಂಬ ಭಾವನೆಯನ್ನು ವ್ಯಕ್ತವಾಗುತ್ತದೆ ಎಂದರು.

ಸಮಾಜದಲ್ಲಿ ಇರುವ ಅಸಮಾನತೆ, ಬಡತನ, ನಿರುದ್ಯೋಗ, ವಿಶೇಷವಾಗಿ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆಯನ್ನು ಹೆಚ್ಚು ಮಾಡುವಂತಹ ಪ್ರಯತ್ನವನ್ನು ಮಾಡಬೇಕು. ನಾವು ಅಧಿಕಾರಕ್ಕೆ ಬಂದು ಸೆಪ್ಟೆಂಬರ್‌ 14ಕ್ಕೆ 3 ವರ್ಷ 4 ತಿಂಗಳು ಪೂರೈಸುತ್ತದೆ. ಡಿ.ಕೆ ಶಿವಕುಮಾರ್‌ ನೇತೃತ್ವದ ಸರ್ಕಾರಕ್ಕೆ ಇಂದಿಗೆ 100 ದಿನಗಳು ಆಗುತ್ತದೆ. 100 ದಿನದಲ್ಲಿ ಏನು ಮಾಡಿದ್ದೇನೆ ಎಂಬ ಕೈಪಿಡಿ ಇಂದು ಬಿಡುಗಡೆಯಾಗಿದೆ. ಮುಖ್ಯವಾದಂತಹ ಇಲಾಖೆಗಳಲ್ಲಿ ಮಾಡಿರುವಂತಹ ಸಾಧನೆಗಳಳನ್ನು ಒಳಗೊಂಡಿರುವಂತಹ ಕೈಪಿಡಿಯನ್ನು ಜನರ ಮುಂದಿಟ್ಟಿದ್ದಾರೆ ಎಂದರು.

ಯಾವುದೇ ಸರ್ಕಾರ ಜನರಿಗೆ ಉತ್ತರದಾಯಿಯಾಗಿ ನಡೆದುಕೊಳ್ಳಬೇಕು. ಅದು ಸರ್ಕಾರದ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೂಲ ಆಶಯ. ನಾವು 2023ರ ಮೇ 20ರಂದು ಅಧಿಕಾರಕ್ಕೆ ಬಂದೆವು. ಅದಕ್ಕಿಂತ ಮುಂಚೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಿ.ಕೆ ಶಿವಕುಮಾರ್‌ ಹಾಗೂ ನಾವೆಲ್ಲರೂ ಜನತೆಯ ಮುಂದೆ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದೆವು. ಈ ವೇಳೆ ವಿರೋಧ ಪಕ್ಷದವರು ಟೀಕೆ ಮಾಡಿದ್ದರು. ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ, ಒಂದು ವೇಳೆ ಜಾರಿ ಮಾಡಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗುತ್ತದೆ ಎಂದಿದ್ದರು. ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇರುವುದಿಲ್ಲ ಎಂದು ಬಹಳ ಟೀಕೆಗಳನ್ನು ಮಾಡಿದ್ದರು. ಪ್ರಧಾನ ಮಂತ್ರಿ ಆದಿಯಾಗಿ ಎಲ್ಲರೂ ಕೂಡ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದರು.

Vishwa News 24

Recent Posts

ರಾಜ್ಯ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಮನೆಗೆ ಹೋಗಲಿದೆ , ಬಿಜೆಪಿಗೆ ಜನಾಶ್ರೀರ್ವಾದ ಸಿಗಲಿದೆ : ಬಿ.ವೈ. ವಿಜಯೇಂದ್ರ – vishwanews24

ಯುದ್ಧ ಆರಂಭವಾಗಿದೆ, ರಣರಂಗದಲ್ಲಿ ಗೆಲುವು ನಮ್ಮದೇ .. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮುಂದಿನ ಒಂದೂವರೆ ವರ್ಷಗಳ ಕಾಲ ಮುಂದುವರಿಯಲಿದೆ…

34 minutes ago

ಉಡುಪಿ : 28 ಗಂಟೆಗಳ ನಿರಂತರ ಗಾಯನದ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾದ ಖ್ಯಾತ ಗಾಯಕ ವಿದ್ವಾನ್ ಯಶವಂತ್ ಎಂ.ಜಿ. – vishwanews24

ಉಡುಪಿ : 28 ಗಂಟೆಗಳ ನಿರಂತರ ಗಾಯನದ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಮುಂದಾದ ಖ್ಯಾತ ಗಾಯಕ ವಿದ್ವಾನ್ ಯಶವಂತ್…

1 hour ago

ಕರ್ನಾಟಕದ ಗ್ಯಾರಂಟಿ ಮಾಡೆಲ್ ದೇಶದ ಎಲ್ಲೆಲ್ಲೂ ಇದೆ : ಸಿಎಂ ಡಿಕೆ ಶಿ – vishwanews24

ಕರ್ನಾಟಕದ ಗ್ಯಾರಂಟಿ ಮಾಡೆಲ್ ದೇಶದ ಎಲ್ಲೆಲ್ಲೂ ಇದೆ : ಸಿಎಂ ಡಿಕೆ ಶಿ ಬೆಂಗಳೂರು: ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಪ್ರಧಾನ…

1 hour ago

ಬೈಂದೂರು:  ಸರಣಿ ಅಪಘಾತ ; ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು – ಪೊಲೀಸ್ ವಾಹನ ಸಹಿತ ನಾಲ್ಕು ಬೈಕ್ ಗಳು ಜಖಂ – vishwanews24

ಬೈಂದೂರು:  ಸರಣಿ ಅಪಘಾತ ; ಲಾರಿ ಢಿಕ್ಕಿಯಾಗಿ ಬೈಕ್ ಸವಾರ ಮೃತ್ಯು - ಪೊಲೀಸ್ ವಾಹನ ಸಹಿತ ನಾಲ್ಕು ಬೈಕ್…

4 hours ago

ಮುಲ್ಕಿ:  ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು – vishwanews24

ಮುಲ್ಕಿ:  ಯುವಕ ಮೃತ್ಯು ಪ್ರಕರಣ; ಕೊಲೆ ಶಂಕಿಸಿ ತಂದೆಯಿಂದ ದೂರು ದಾಖಲು ಮುಲ್ಕಿ : ತಿಂಗಳ ಹಿಂದೆ ತನ್ನ ಕೆಲಸದ…

4 hours ago

ಮಂಗಳೂರಿನಿಂದ ಕುವೈಟ್‌ ವಿಮಾನಯಾನ  6 ತಿಂಗಳುಗಳಿಂದ ಸ್ಥಗಿತ : ಕರಾವಳಿ ಪ್ರಯಾಣಿಕರ ಸಂಕಷ್ಟ – vishwanews24

ಮಂಗಳೂರಿನಿಂದ ಕುವೈಟ್‌ ವಿಮಾನಯಾನ  6 ತಿಂಗಳುಗಳಿಂದ ಸ್ಥಗಿತ : ಕರಾವಳಿ ಪ್ರಯಾಣಿಕರ ಪರದಾಟ ಮಂಗಳೂರು: ಮಂಗಳೂರಿನಿಂದ ಕುವೈಟ್‌ಗೆ ನೇರ ವಿಮಾನಯಾನ…

4 hours ago