ಡಿ.ಕೆ.ಶಿ ಹಾಗೇ ಮಾಡಿರಲಾರರು ಅಂದಿಕೊಂಡಿದ್ದೇನೆ : ಜೆ.ಸಿ.ಮಾಧುಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಡಿ.ಕೆ.ಶಿ ಹಾಗೇ ಮಾಡಿರಲಾರರು ಅಂದಿಕೊಂಡಿದ್ದೇನೆ : ಜೆ.ಸಿ.ಮಾಧುಸ್ವಾಮಿ -Vishwanews24

ಮೈಸೂರು: ನಾನು ಡಿ.ಕೆ.ಶಿವಕುಮಾರ್‌ರನ್ನ ಹಲವು ವರ್ಷದಿಂದ ನೋಡಿದ್ದೇನೆ. ಅವರು ಹಾಗೇ ಮಾಡಿರಲಾರರು ಅಂದಿಕೊಂಡಿದ್ದೇನೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಯುವತಿ ಅವರ ಹೆಸರು ಹೇಳಿದ್ದಾಳೆ. ಅದನ್ನ ಬಿಟ್ಟರೆ ಬೇರೆ ಯಾವ ಗಂಭೀರ ಸಾಕ್ಷ್ಯವನ್ನೂ ಆಕೆ ನೀಡಿಲ್ಲ. ಹಾಗಾಗಿ ಏನಾಗುತ್ತದೆಂದು ನೋಡೋಣ ಎಂದರು.

ಇದನ್ನೂ ಓದಿ : ಸಿಡಿ ಪ್ರಕರಣ : ಧಾರಾವಾಹಿ ರೀತಿಯಲ್ಲಿ ಆಡಿಯೊ, ವಿಡಿಯೋ ಬರುತ್ತಿದೆ : ಬಸವರಾಜ ಬೊಮ್ಮಾಯಿ -Vishwanews24

ಘಟನೆಯಲ್ಲಿ ಏನೋ ಇದೆ ಅಂತ ತನಿಖೆ ಆದೇಶ ಮಾಡಲಾಗಿದೆ. ಬಂಧನ ಮಾಡಲು ಅವಕಾಶ ಇದೆಯೋ ಎಂದು ನೋಡಬೇಕು, ದೂರುದಾರರು ಬರಬೇಕು. ಇವೆಲ್ಲವನ್ನು ನೋಡಿಕೊಂಡು ನಾವು ಮಾತನಾಡಬೇಕಿದೆ ಎಂದರು.

ಈ ಘಟನೆಯಲ್ಲಿ ನರೇಶ್ ಗೊತ್ತಿಲ್ಲ ಎಂದು ಹೇಳೋಕಾಗೋಲ್ಲ. ಆಕೆ ಮಾತನಾಡಿರೋದು, ಡಿಕೆಶಿಯೂ ಹೇಳಿರೋದನ್ನು ಕೇಳಿದ್ದೇವೆ. ಆದರೆ ನರೇಶ್ ಬೇರೆ ಕಥೆ ಹೇಳುತ್ತಿದ್ದಾರೆ ಎಂದು ಮಾಧುಸ್ವಾಮಿ ಹೇಳಿದರು.

ಇದನ್ನೂ ಓದಿ : ಉಡುಪಿ : ಗ್ರಾ.ಪಂ. ಉಪ ಚುನಾವಣೆ; ಸಂತೆ ಜಾತ್ರೆ ನಿಷೇಧ :ಜಿಲ್ಲಾಧಿಕಾರಿ ಜಿ.ಜಗದೀಶ್ -Vishwanews24