ಡಿ . 18 ರಂದು ಬೆಂಗಳೂರಿನಲ್ಲಿ ಕರ್ನಾಟಕ ತುಳು ಅಕಾಡೆಮಿಯಿಂದ ತುಳುವ ಐಸಿರ – 2021
ಡಿ . 18 ರಂದು ಕರ್ನಾಟಕ ತುಳು ಅಕಾಡೆಮಿಯಿಂದ ಬೆಂಗಳೂರಿನಲ್ಲಿ ತುಳುವ ಐಸಿರ – 2021
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವರ ವಿಶೇಷ ಸಹಕಾರದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಂಯೋಜನೆಯಲ್ಲಿ ದಿನಾಂಕ: 18.12.2021ನೇ ಶನಿವಾರ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಗೌರವ ಚಾವಡಿ ಪ್ರಶಸ್ತಿ ಪ್ರದಾನ ಹಾಗೂ ದತ್ತಿ ಪುರಸ್ಕಾರ ಸಮಾರಂಭ “ತುಳುವ ಐಸಿರ – 2021” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಬೆಳಿಗ್ಗೆ 10.30 ಗಂಟೆಗೆ ಪರಮಪೂಜ್ಯ ರಾಜರ್ಷಿ ಡಾ| ವಿರೇಂದ್ರ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾನ್ಯ ಇಂಧನ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ವಿ.ಸುನಿಲ್ ಕುಮಾರ್ ರವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮೀನುಗಾರಿಕಾ ಹಾಗೂ ಬಂದರುಗಳ ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಶ್ರೀ ಎಸ್. ಅಂಗಾರ ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಅರವಿಂದ ಲಿಂಬಾವಳಿ ರವರು ಶುಭಾಶಯದ ನುಡಿಗಳನ್ನು ಆಡಲಿದ್ದಾರೆ.
ಬೆಂಗಳೂರು ಸೆಂಟ್ರಲ್ ಸಂಸದರಾದ ಸನ್ಮಾನ್ಯ ಶ್ರೀ ಪಿ.ಸಿ. ಮೋಹನ್, ಮುಖ್ಯ ಮಂತ್ರಿಯವರ ಸಲಹೆಗಾರರಾದ ಸನ್ಮಾನ್ಯ ಶ್ರೀ ಬೇಳೂರು ಸುದರ್ಶನ್, ಕನ್ನಡ ಮತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಸನಾನ್ಯ ಶ್ರೀ ಎಸ್. ರಂಗಪ್ಪ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷರಾದ ಶ್ರೀ ಧರ್ಮಪಾಲ ಯು. ದೇವಾಡಿಗ,ಸಾಹಿತಿ ಶ್ರೀಮತಿ ಉಷಾ ಪಿ. ರೈ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ದಯಾನಂದ ಜಿ. ಕತ್ತಲ್‍ಸಾರ್ ರವರು ಪ್ರಸ್ತಾವನೆ ಮಾಡಲಿರುವರು.
ಡಾ| ಉದಯ ಧರ್ಮಸ್ಥಳ ರವರಿಗೆ ಚಾವಡಿ ತಮ್ಮನ, ಶ್ರೀ ಜಯಪ್ರಕಾಶ್ ಶೆಟ್ಟಿ ರವರಿಗೆ ಮಾಧ್ಯಮ ಪ್ರಶಸ್ತಿ, ಶ್ರೀ ಮಾಧವ ಕುಲಾಲ್ ರವರಿಗೆ ದಿ|ಪ್ರಭಾಕರ ರೈ ದತ್ತಿನಿಧಿ ಪ್ರಶಸ್ತಿ, ಶ್ರೀ ವಿಶ್ವನಾಥ ಶೆಟ್ಟಿ ರವರಿಗೆ ಯುವ ಸಂಘಟನಾ ಪ್ರಶಸ್ತಿ, ಕು.ಅದಿತಿ ರವರಿಗೆ ಬಾಲ ಪ್ರಶಸ್ತಿ ಮತ್ತು ತುಳುವೆರೆಂಕುಲು (ರಿ) ಬೆಂಗಳೂರು ವಿಶೇಷ ಸಂಘಟನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ತುಳು ಭಾಷೆ ಹಾಗೂ ಕೋವಿಡ್ ಸಂಕಷ್ಟದಲ್ಲಿ ವಿಶೇಷವಾಗಿ ಸಹಕಾರ ನೀಡಿದ ಎಂ.ಆರ್.ಜಿ. ಗ್ರೂಪ್‍ನ ಕೆ. ಪ್ರಶಾಶ್ ಶೆಟ್ಟಿ, ಸೆಂಚುರಿ ಬಿಲ್ಡರ್ಸ್‍ನ ದಯಾನಂದ ಪೈ, ಬಜಪೆಯ ದಿವ್ಯರೂಪ ಕನ್ಸ್‍ಟ್ರಕ್ಷನ್‍ನ ಯಾದವ ಕೋಟ್ಯಾನ್ ಪೆರ್ಮುದೆ, ವಿದೇಶದಲ್ಲಿ ತುಳು ಸಂಘಟಕರಾದ ಸರ್ವೋತ್ತಮ ಶೆಟ್ಟಿ ದುಬೈ, ಮಂಗಳೂರಿನ ಎಂ. ಸುಧೀರ್ ಪೈ, ತುಳು ಲಿಪಿಗೆ ವಿಶೇಷ ಸಹಕಾರ ನೀಡಿದ ಕಡಂದಲೆ ಸುರೇಶ್ ಭಂಡಾರಿ ಅವರನ್ನು “ತುಳುವ ಐಸಿರ” ಪ್ರಶಸ್ತಿ ನೀಡಿ ಗೌರವಿಸಲಾಗುವುದು.
ಬೆಳಿಗ್ಗೆ 9.30 ರಿಂದ 10.30 ವರೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಂಗಳೂರು ಇದರ ಸ್ವಸಹಾಯ ಸಂಘದ ಸದಸ್ಯರಿಂದ “ನೃತ್ಯ ವೈಭವ”, ನಡೆಯಲಿದೆ.
ಬೆಳಿಗ್ಗೆ 10.30 ರಿಂದ 12.00 ಗಂಟೆಯವರೆಗೆ ಉದ್ಘಾಟನಾ ಸಮಾರಂಭ, ಚಾವಡಿ ಪ್ರಶಸ್ತಿ ಪುರಸ್ಕಾರ, ದತ್ತಿ ಪುರಸ್ಕಾರ ಹಾಗೂ ತುಳುವ ಐಸಿರ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಮದ್ಯಾಹ್ನ 12.00 ರಿಂದ 1.00 ಗಂಟೆಯವರೆಗೆ ಪ್ರಶಸ್ತಿ ವಿಜೇತರಿಂದ “ಪಾತೆರಕತೆ” ನಡೆಯಲಿದ್ದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಶ್ರೀ ಸರ್ವೋತ್ತಮ ಶೆಟ್ಟಿ ದುಬೈ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೂ ಸಾಹಿತಿ, ಸಮಾಜ ಚಿಂತಕರಾದ ದಿ| ಪ್ರಭಾಕರ ರೈ ರವರ ಸಂಸ್ಕರಣಾ ಕಾರ್ಯಕ್ರಮ ನಡೆಯಲಿದ್ದು ಡಾ| ಕೆ.ಎನ್ ಅಡಿಗ ರವರು ಸಂಸ್ಕರಣಾ ನುಡಿ ನುಡಿಯಲಿದ್ದಾರೆ.
ಮದ್ಯಾಹ್ನ 1.00 ರಿಂದ 3.00 ಗಂಟೆಯವರೆಗೆ “ತುಳುವ ಐಸಿರ -2021” ಸ್ಪರ್ಧೆ ನಡೆಯಲಿದ್ದು ಶ್ರೀಮತಿ ಉಷಾ ಪಿ. ರೈ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು.
ಮದ್ಯಾಹ್ನ 3.00 ರಿಂದ 4.00 ಗಂಟೆಯವರೆಗೆ ಅಂತರಾಷ್ಟ್ರೀಯ ಖ್ಯಾತಿಯ ಜಾದೂಗಾರ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ಮತ್ತು ತಂಡದಿಂದ “ವಿಸ್ಮಯ ಜಾದೂ” ನಡೆಯಲಿದೆ.
ಸಂಜೆ 4.00 ರಿಂದ 5.30 ರವರೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಉಡುಪಿಯ ಪೇಜಾವರ ಮಠದ ಪರಮ ಪೂಜ್ಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ರವರು ಆಶೀರ್ವಚನ ನೀಡಲಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾದ ಸನ್ಮಾನ್ಯ ಶ್ರೀ ಬಿ.ಸಿ ನಾಗೆಶ್ ರವರು “ತುಳುವ ಐಸಿರ -2021” ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‍ಸಾರ್ ರವರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಬೆಂಗಳೂರಿನ ಚಿಕ್ಕಪೇಟೆಯ ಶಾಸಕರಾದ ಡಾ| ಉದಯ್ ಬಿ. ಗರುಡಾಚಾರ್ ಮತ್ತು ಜನಸೇವಾರತ್ನ ಪ್ರಶಸ್ತಿ ಪುರಸ್ಕøತರಾದ ಡಾ| ರಾಮಕೃಷ್ಣ ಕುಲಾಲ್ ರವರು ಅತಿಥಿಗಳಾಗಿ ಭಾಗವಹಿಸಲಿರುವರು. ಹಾಗೂ ಬೆಂಗಳೂರಿನ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸಮಾರಂಭದಲ್ಲಿ ಭಾಗವಹಿಸಲಿರುವರು. ಈ ಸಂದರ್ಭದಲ್ಲಿ ತುಳು ಲಿಪಿ ಮಾನ್ಯತಾ ಪತ್ರ ವಿತರಿಸಲಾಗುವುದು.
ಸಂಜೆ 5.30 ರಿಂದ 6.00 ಗಂಟೆಯವರೆಗೆ ಬಹುಭಾಷಾ ತಾರಾ ಗಾಯಕರಾದ ಶ್ರೀ ರಮೇಶ್‍ಚಂದ್ರ, ತುಳುನಾಡಿನ ಗಾನಕೋಗಿಲೆ ಶ್ರೀಮತಿ ಕಲಾವತಿ ದಯಾನಂದ, ಕಲರ್ಸ್ ಕನ್ನಡ ಖ್ಯಾತಿಯ ಸಂದೇಶ್ ನೀರುಮಾರ್ಗ, ಛಾಯಾಪತಿ ಕಂಚಿಬೈಲು, ಸುಧಾಕರ ಶೆಟ್ಟಿ ಕಡಲ್‍ದ ಉಡಲ್, ಡಾ| ಸುಶೀಲಾ ವಿದ್ಯಾರಣ್ಯ, ಪ್ರಶಾಂತ್ ಎಸ್.ಕೆ, ಪ್ರಕಾಶ್ ಪಾವಂಜೆ, ಮಾ| ಭುವನ್ ಶೆಟ್ಟಿ ರವರು “ಪದರಂಗಿತ” ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಸಂಜೆ 6.00 ರಿಂದ ರಾತ್ರಿ 8.30 ವರೆಗೆ ಶರತ್ ಶೆಟ್ಟಿ ನೇತ್ರತ್ವದ ಕಿನ್ನಿಗೋಳಿಯ ವಿಜಯಾ ಕಲಾವಿದರಿಂದ “ಕೇರಿಗೊರಿ ಕೇಸರಿ” ಹೃದಯಸ್ಪರ್ಶಿ ರಂಜನಾತ್ಮಕ ತುಳು ನಾಟಕ ಆಯೋಜಿಸಲಾಗಿದೆ.
ತುಳು ಭಾಷಾಭಿಮಾನಿಗಳು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್‍ಸಾರ್, ರಿಜಿಸ್ಟ್ರಾರ್ ಕವಿತಾ ಮತ್ತು ಸದಸ್ಯ ಸಂಚಾಲಕರಾದ ಕಾಂತಿ ಶೆಟ್ಟಿ ರವರು ಪ್ರಟಕಣೆಯಲ್ಲಿ ತಿಳಿಸಿದ್ದಾರೆ.
