ಡಿ. 25 ಮಾಜಿ ಪ್ರಧಾನಿ ಅಟಲ್ಜೀ 96 ನೇ ಜನ್ಮದಿನಾಚರಣೆ : ಬಿಜೆಪಿ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಬೃಹತ್ರಕ್ತದಾನ ಶಿಬಿರ -Vishwanews24
ಡಿ. 25 ಮಾಜಿ ಪ್ರಧಾನಿ ಅಟಲ್ಜೀ 96 ನೇ ಜನ್ಮದಿನಾಚರಣೆ : ಬಿಜೆಪಿ ವೈದ್ಯಕೀಯ ಪ್ರಕೋಷ್ಠ ವತಿಯಿಂದ ಬೃಹತ್ರಕ್ತದಾನ ಶಿಬಿರ
ಉಡುಪಿ :ದೇಶದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ೯೬ ನೇ ಜನ್ಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲಾ ಬಿಜೆಪಿ ಮತ್ತು ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಇದರಜಂಟಿಆಶ್ರಯದಲ್ಲಿಉಡುಪಿ ಜಿಲ್ಲಾಆಸ್ಪತ್ರೆಯ ಸಹಯೋಗದೊಂದಿಗೆತಾ. ೨೫-೧೨-೨೦೨೦ನೇ ಶುಕ್ರವಾರ ಬೆಳಿಗ್ಗೆ ೯.೦೦ರಿಂದ ಮಧ್ಯಾಹ್ನ೨.೦೦ರವರೆಗೆಜಿಲ್ಲಾ ಬಿಜೆಪಿ ಕಛೇರಿಯಲ್ಲಿ‘ಬೃಹತ್ರಕ್ತದಾನ ಶಿಬಿರ’ವನ್ನು ಆಯೋಜಿಸಲಾಗಿದೆಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದಕುಯಿಲಾಡಿ ಸುರೇಶ್ ನಾಯಕ್ ಹಾಗೂ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾದಡಾ. ಪ್ರದೀಪ್ ವರ್ಣೇಕರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ರಕ್ತದಾನ ಶಿಬಿರದಲ್ಲಿ ಸುಮಾರು೧೨೫ಯುನಿಟ್ರಕ್ತ ಸಂಗ್ರಹದಗುರಿ ಹೊಂದಲಾಗಿದ್ದು ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಮತ್ತು ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂಧುರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸುವಂತೆ ಅವರು ವಿನಂತಿಸಿದ್ದಾರೆ.
