ತನ್ನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿರುವಾಗ ಕುಸಿದು ಬಿದ್ದು ಯುವತಿ ಸಾವು – vishwanews24

Featured, ರಾಷ್ಟ್ರ ನ್ಯೂಸ್

ತನ್ನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿರುವಾಗ  ಕುಸಿದು ಬಿದ್ದು ವಧು ಸಾವು

ಉತ್ತರಾಖಂಡ: ಮದುವೆ ಸಂಭ್ರಮದಲ್ಲಿರುವಾಗಲೇ ವಿಧಿ ವಿಪರ್ಯಾಸವೆಂಬಂತೆ ಕೊನೆ ಉಸಿರೆಳೆದಿದ್ದಾಳೆ. ಮದುವೆಯ ಹಿಂದಿನ ದಿನ ತನ್ನ ಮೆಹೆಂದಿ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡುತ್ತಿರುವಾಗ ಯುವತಿ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ಈ ಘಟನೆ ಉತ್ತರಾಖಂಡದ ಡೆಹ್ರಾಡೂನ್​​ನಲ್ಲಿ ನಡೆದಿದೆ. ಮೃತ ಯುವತಿ ಶ್ರೇಯಾ ಜೈನ್(28) ಎಂದು ಗುರುತಿಸಲಾಗಿದೆ. ದೆಹಲಿ ಮೂಲದವರಾದ ಶ್ರೇಯಾ ಕುಟುಂಬ ಡೆಹ್ರಾಡೂನ್‌ನ ಐಷಾರಾಮಿ ರೆಸಾರ್ಟ್‌ ಒಂದರಲ್ಲಿ ಮದುವೆಯ ಸಂಭ್ರಮಾಚರಣೆಗಾಗಿ ಬುಕ್​​​ ಮಾಡಿತ್ತು. ಹೀಗಾಗಿ ಮದುವೆಗೂ ಎರಡು ದಿನಗಳ ಹಿಂದೆ ರೆಸಾರ್ಟ್​​​ಗೆ ತೆರಳಿದ್ದರು.

108 ದಿನ 108 ಕ್ಷೇತ್ರ ಪ್ರದಕ್ಷಿಣೆ : 6ನೇ ದಿನದ ಶ್ರೀ ಕ್ಷೇತ್ರ ಕಡಿಯಾಳಿ ಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಶ್ರೀ ಸಾಯಿ ಈಶ್ವರ್ ಗುರೂಜಿ – vishwanews24

ಮದುವೆಯ ಹಿಂದಿನ ದಿನ ಅದ್ದೂರಿಯಾಗಿ ಮೆಹಂದಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ವಧು ಮೆಹಂದಿ ದಿನ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಆನ್‌ಲೈನ್‌ನಲ್ಲಿ 15 ಸಾವಿರ ರೂ. ವಂಚನೆ:  ಕಾಲೇಜು ಹಾಸ್ಟೆಲ್‍ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು – vishwanews24

Leave a Reply