Featured

ತಮಿಳುನಾಡಿನ 52 ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ನಿಷೇಧ -vishwanews24

ತಮಿಳುನಾಡಿನ 52 ಪ್ರಮುಖ ದೇವಾಲಯಗಳಲ್ಲಿ ಮೊಬೈಲ್ ನಿಷೇಧ

ಚೆನ್ನೈ : ತಮಿಳುನಾಡಿನ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವ್ಯಾಪ್ತಿಯ 52 ಪ್ರಮುಖ ದೇಗುಲಗಳಲ್ಲಿ ಮೊಬೈಲ್ ತೆಗೆದುಕೊಂಡು ಹೋಗಲು ಸಂಪೂರ್ಣ ನಿಷೇಧ ಹೇರಲಾಗಿದ್ದು, ಇಂದಿನಿಂದ (ಸೆ.1) ಜಾರಿಗೆ ಬಂದಿದೆ.

ದೇಗುಲಗಳ ಪಾವಿತ್ರ‍್ಯ ಹಾಗೂ ಶಾಂತ ವಾತಾವರಣ ಕಾಪಾಡುವುದು, ಸೆಲ್ಫಿ, ಫೋಟೋ, ವಿಡಿಯೋ ಹಾಗೂ ಸಾಮಾಜಿಕ ಜಾಲತಾಣಗಳ ರೀಲ್ಸ್ ಚಿತ್ರೀಕರಣ ತಡೆಯುವುದು ಇದರ ಉದ್ದೇಶವಾಗಿದೆ.

ದೇಗುಲಗಳಿಗೆ ಬರುವ ಭಕ್ತರು ತಮ್ಮ ಮೊಬೈಲ್‌ಗಳನ್ನು ಪ್ರವೇಶ ದ್ವಾರಗಳ ಬಳಿ ಸ್ಥಾಪಿಸಿರುವ ಸುರಕ್ಷಿತ ಠೇವಣಿ ಕೇಂದ್ರಗಳಲ್ಲಿ 5 ರೂ. ಶುಲ್ಕ ನೀಡಿ ಇಡಬೇಕು. ಮೊಬೈಲ್ ಸ್ವೀಕರಿಸಿದ ಬಳಿಕ ರಸೀದಿ ನೀಡಲಾಗುತ್ತದೆ. ಫೋನ್ ಹಿಂದಿರುಗಿಸುವ ವೇಳೆ ರಸೀದಿಯನ್ನು ಪರಿಶೀಲಿಸಿ, ಸಾಧನವನ್ನು ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗಿದೆ.

ಕಾಂಚೀಪುರಂನ ಪ್ರಸಿದ್ಧ ದೇವರಾಜಸ್ವಾಮಿ ಅತ್ತಿವರದರ್ ದೇಗುಲದಲ್ಲೂ ಮಂಗಳವಾರ (ಸೆ.1) ಬೆಳಗ್ಗೆಯಿಂದಲೇ ವ್ಯವಸ್ಥೆ ಜಾರಿಗೆ ಬಂದಿದೆ. ಭಕ್ತರ ಫೋಟೋ, ಮೊಬೈಲ್ ಮಾದರಿ ಮತ್ತು ಸಂಖ್ಯೆಯಂತಹ ವಿವರಗಳನ್ನು ದಾಖಲಿಸಿ, ಫೋನ್‌ಗಳನ್ನು ಸುರಕ್ಷಿತವಾಗಿ ಸಂಗ್ರಹಿಸಲಾಗುತ್ತಿದೆ. ಮೊಬೈಲ್ ನಿಷೇಧ ಜಾರಿಯಾಗಿರುವ ದೇಗುಲಗಳ ಪೈಕಿ ಮದುರೈ ಮೀನಾಕ್ಷಿ ಅಮ್ಮನ್, ಪಳನಿ ದಂಡಾಯುಧಪಾಣಿ, ರಾಮೇಶ್ವರಂ ರಾಮನಾಥಸ್ವಾಮಿ, ತಿರುಚೆಂದೂರು ಸುಬ್ರಹ್ಮಣ್ಯಸ್ವಾಮಿ, ಶ್ರೀರಂಗಂ ರಂಗನಾಥಸ್ವಾಮಿ, ತಿರುವಣ್ಣಾಮಲೈ ಅರುಣಾಚಲೇಶ್ವರ, ತಿರುವತ್ತಣಿ ಸುಬ್ರಹ್ಮಣ್ಯಸ್ವಾಮಿ, ಚೆನ್ನೈನ ಕಪಾಲೀಶ್ವರ ಮತ್ತು ಪಾರ್ಥಸಾರಥಿ ದೇಗುಲಗಳು ಸೇರಿವೆ.

ಈ ನಿರ್ಧಾರವು 2022ರ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠದ ನಿರ್ದೇಶನಕ್ಕೆ ಅನುಗುಣವಾಗಿ ಕೈಗೊಳ್ಳಲಾಗಿದೆ.

Vishwa News 24

Recent Posts

ರಾಜ್ಯಾದ್ಯಂತ ಆಹಾರ ತಯಾರಿಕಾ ಕೇಂದ್ರಗಳ ತಪಾಸಣೆ: ನಿಯಮ ಮೀರಿದರೆ ಕಠಿಣ ಕ್ರಮದ ಎಚ್ಚರಿಕೆ -vishwanews24

ರಾಜ್ಯಾದ್ಯಂತ ಆಹಾರ ತಯಾರಿಕಾ ಕೇಂದ್ರಗಳ ತಪಾಸಣೆ: ನಿಯಮ ಮೀರಿದರೆ ಕಠಿಣ ಕ್ರಮದ ಎಚ್ಚರಿಕೆ ಮಂಗಳೂರು: ರಾಜ್ಯದಲ್ಲಿ ಆಹಾರ ಸುರಕ್ಷತೆ ಮತ್ತು…

19 minutes ago

ಉಡುಪಿ : ಯುವತಿ ನಾಪತ್ತೆ  -vishwanews24

ಉಡುಪಿ : ಯುವತಿ ನಾಪತ್ತೆ  ಉಡುಪಿ : ಕುಂದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಈಶ್ವರಿ (18) ಎಂಬ ಯುವತಿ…

27 minutes ago

ಮಂಗಳೂರು : ಕೇರಳ ಲಾಟರಿ ಹೆಸರಿನಲ್ಲಿ ಸೈಬರ್ ವಂಚನೆ ; 3 ಲಕ್ಷ ರೂ. ಹಣ ಕಳೆದುಕೊಂಡ ವ್ಯಕ್ತಿ -vishwanews24

ಮಂಗಳೂರು : ಕೇರಳ ಲಾಟರಿ ಹೆಸರಿನಲ್ಲಿ ಸೈಬರ್ ವಂಚನೆ ; 3 ಲಕ್ಷ ರೂ. ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು :…

41 minutes ago

ಸಾಲ ತೀರಿಸಲು ಹಣ ಕೊಟ್ಟಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ -vishwanews24

ಸಾಲ ತೀರಿಸಲು ಹಣ ಕೊಟ್ಟಿಲ್ಲವೆಂದು ತಂದೆಯನ್ನೇ ರಾಡ್‌ನಿಂದ ಹೊಡೆದು ಕೊಂದ ಮಗ ಕೋಲಾರ: ಸಾಲ  ತೀರಿಸಲು ಹಣ ನೀಡಲಿಲ್ಲವೆಂದು ತಂದೆಯನ್ನೇ …

49 minutes ago

ಉಡುಪಿ : ಈ ಬಾರಿ ಕೃಷ್ಣ ಜನ್ಮಾಷ್ಟಮಿ ಗೆ ‘ಮರ್ಮೆನ್’ ಅವತಾರದಲ್ಲಿ ರವಿ ಕಟಪಾಡಿ -vishwanews24

ಉಡುಪಿ : ಈ ಬಾರಿ ಕೃಷ್ಣ ಜನ್ಮಾಷ್ಟಮಿ ಗೆ ‘ಮರ್ಮೆನ್’ ಅವತಾರದಲ್ಲಿ ರವಿ ಕಟಪಾಡಿ ಉಡುಪಿ: ವಿಭಿನ್ನ ವೇಷ ಧರಿಸಿ…

1 hour ago

ಬೆಳ್ತಂಗಡಿ: ಭ್ರಷ್ಟಾಚಾರ ಪ್ರಕರಣ: ಎಸ್‌ಐಟಿ ಸಬ್ ಇನ್ಸ್‌ಪೆಕ್ಟರ್ ವಿನೋದ್ ರೆಡ್ಡಿ ಅಮಾನತು – vishwanews24

ಬೆಳ್ತಂಗಡಿ: ಭ್ರಷ್ಟಾಚಾರ ಪ್ರಕರಣ: ಎಸ್‌ಐಟಿ ಸಬ್ ಇನ್ಸ್‌ಪೆಕ್ಟರ್ ವಿನೋದ್ ರೆಡ್ಡಿ ಅಮಾನತು ಬೆಳ್ತಂಗಡಿ : ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ…

1 day ago