ತಮ್ಮ ಮಗುವಿನ ಒಂದನೇ ವರ್ಷದ ಹುಟ್ಟುಹಬ್ಬವನ್ನು ದೇವರ ಮಕ್ಕಳೊಂದಿಗೆ ಆಚರಿಸಿ ಮಾನವೀಯತೆ ಮೆರೆದ ಪಡುಬಿದ್ರಿ ಭಗವತಿ ಗ್ರೂಪಿನ ಸದಸ್ಯರಾದ ಶ್ರೀ ಸುಹಾಸ್ ಶೆಟ್ಟಿ ನಟವರ್ಯ ದಂಪತಿಗಳು- Vishwanews24

Featured, ಉಡುಪಿ

ಪಡುಬಿದ್ರಿ :ಪಡುಬಿದ್ರಿ ಹಿಂದೂ ಜಾಗರಣ ವೇದಿಕೆ‌ ಸಹಸಂಚಾಲಕ, ನಂದಿಕೂರು ಶಾಲಾ‌ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಪಡುಬಿದ್ರಿ ಭಗವತಿ ಗ್ರೂಪಿನ ಸದಸ್ಯರಾದ ಶ್ರೀ ಸುಹಾಸ್ ಶೆಟ್ಟಿ ನಟವರ್ಯ ಮತ್ತು ಶ್ರೀಮತಿ ಜಯಶ್ರೀ ಇವರ ಸುಪುತ್ರ ಮಾ|ಹರ್ಷಿಲ್ ಇವರ ಒಂದನೇ ವರ್ಷದ ಹುಟ್ಟು ಹಬ್ಬವನ್ನು ವಿಜೇತ ವಿಶೇಷ ಶಾಲೆಯಲ್ಲಿ ದೇವರ ಮಕ್ಕಳೊಂದಿಗೆ ಆಚರಿಸಿ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಿದರು ಮತ್ತು ಶಾಲೆಗೆ ಮಗನ ಹುಟ್ಟುಹಬ್ಬದ ಪ್ರಯುಕ್ತ ರೂ 5000‌ ದೇಣಿಗೆಯಾಗಿ ನೀಡಿದರು.

ಹಲವಾರು ಸಮಾಜಮುಖಿ ಕಾರ್ಯಗಳೊಂದಿಗೆ ಗುರುತಿಸಿಕೊಂಡಿರುವ ಸುಹಾಸ್ ಶೆಟ್ಟಿಯವರೂ ಹಿಂದಿನಿಂದಲೂ ವಿಜೇತ ವಿಶೇಷ ಶಾಲೆಯ ದೇವರ ಮಕ್ಕಳಿಗೆ ಸಹಾಯಹಸ್ತಿಗಳಾಗಿದ್ದು,ಪ್ರಸ್ತುತ ತಮ್ಮ ಸ್ವಂತ ಮಗನ ಹುಟ್ಟು ಹಬ್ಬವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸುವ ಮೂಲಕ ಆಡಂಬರದ ಆಚರಣೆಗೆ ವಿಮುಕ್ತಿ ನೀಡಿ ಮಾನವೀಯ ಮೌಲ್ಯಕ್ಕೆ ಮನ್ನಣೆ ನೀಡಿದ್ದು,ಸರ್ವರ ಶ್ಲಾಘನೆಗೆ ಪಾತ್ರರಾಗಿದ್ದರೆ.

ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಭಗವತಿ ಗ್ರೂಪಿನ ಸದಸ್ಯರಾದ ಯುವರಾಜ್ ಕುಲಾಲ್, ಸಂದೇಶ್ ಪಾದೆಬೆಟ್ಟು, ಸಂತೋಷ ನಂದಿಕೂರು, ಸುಜಿತ್ ಕುಲಾಲ್ , ಅಕ್ಷಿತ್ ಭಂಡಾರಿ, ಸಂತೋಷ ಶೆಟ್ಟಿ ಪಾದೆಬೆಟ್ಟು, ದಿಲೀಪ್ ಕುಮಾರ್ ಕಾಸರಗೋಡು, ಮನೋಹರ್ ಬಾಲು ಉಪಸ್ಥಿತರಿದ್ದರು.