ತರಕಾರಿ ಮಳಿಗೆಗೆ ನುಗ್ಗಿದ ಕಳ್ಳರು ಹಣ ಬಿಟ್ಟು ಈರುಳ್ಳಿಯನ್ನು ಕದ್ದೊಯ್ದರು -Vishwanews24
ಕೋಲ್ಕತ್ತಾ:ತರಕಾರಿ ಮಳಿಗೆಗೆ ನುಗ್ಗಿದ ಕಳ್ಳರು ಹಣ ಬಿಟ್ಟು ಈರುಳ್ಳಿಯನ್ನು ಕಳ್ಳತನ ಮಾಡಿದ್ದಾರೆ.
ಈರುಳ್ಳಿ ಅಂಗಡಿಯನ್ನು ಹೊಂದಿರುವ ಅಕ್ಷಯ್ ಎಂಬ ವ್ಯಾಪರಿಯೊಬ್ಬರು ಬುಧವಾರ ಬೆಳಗ್ಗೆ ಅಂಗಡಿಗೆ ಬಂದು ನೋಡಿದಾಗ ವಸ್ತುಗಳೆಲ್ಲಾ ಚದುರಿಕೊಂಡಿದ್ದು ಈರುಳ್ಳಿ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಸುಮಾರು 50 ಸಾವಿರ ಬೆಳೆಬಾಳುವ ಈರುಳ್ಳಿಯೊಂದಿಗೆ ಬೆಳ್ಳುಳ್ಳಿ ಮತ್ತು ಶುಂಠಿಯೂ ಕಳ್ಳತನವಾಗಿದೆ.
ಈ ಬಗ್ಗೆ ಅಚ್ಚರಿಯಿಂದ ಪ್ರತಿಕ್ರಿಯಿಸಿದ ಮಾಲೀಕ, ಮಂಗಳವಾರ ಮಳೆಗೆಗೆ ಬಂದು ನೋಡಿದಾಗ ಶಾಕ್ ಆಯ್ತು. ತಕ್ಷಣ ಗಲ್ಲಾ ಪೆಟ್ಟಿಗೆ ತೆರೆದು ನೋಡಿದರೆ ಅದರಲ್ಲಿದ್ದ ಹಣವೆಲ್ಲಾ ಹಾಗೆಯೇ ಇದೆ. ಆದರೆ ಮಳಿಗೆಯಲ್ಲಿ ಜೋಡಿಸಿಟ್ಟಿದ್ದ ಈರುಳ್ಳಿ ನಾಪತ್ತೆಯಾಗಿತ್ತು. ಅದರ ಜೊತೆಗೆ ಶುಂಠಿ, ಬೆಳ್ಳುಳ್ಳಿ ಕೂಡ ಕಳ್ಳತನವಾಗಿತ್ತು. ಸುಮಾರು 50 ಸಾವಿರ ರೂ. ಮೌಲ್ಯದ ಈರುಳ್ಳಿ ಜೊತೆಗೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಕಳ್ಳರು ಹೊತ್ತೊಯ್ದಿದ್ದಾರೆ. ಆದರೆ ಒಂದು ನಯಾಪೈಸೆ ಹಣವನ್ನು ಕಂಡೊಯ್ದಿಲ್ಲ ಎಂದು ತಿಳಿಸಿದ್ದಾರೆ.
ಈರುಳ್ಳಿ ಬೆಲೆ ಏರಿಕೆಯಾಗಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈರುಳ್ಳಿ ಕೈಗೆ ಸಿಗದ ನಕ್ಷತ್ರವಾಗಿದೆ. ಬೆಂಗಳೂರಿನ ನಗರದ ಹಾಪ್‍ಕಾಮ್ಸ್, ಯಶವಂತಪುರ ಸೇರಿದಂತೆ ಇತರೆ ಮಾರುಕಟ್ಟೆಗಳಲ್ಲಿ ಗುಣಮಟ್ಟದ ಈರುಳ್ಳಿ ಬೆಲೆ ಒಂದು ಕೆಜಿಗೆ 120 ರೂಪಾಯಿ ಆಗಿದೆ. ಮಧ್ಯಮ ಮತ್ತು ಸಣ್ಣ ಗಾತ್ರದ ಈರುಳ್ಳಿ ಬೆಲೆ 50 ರಿಂದ 60 ರೂಪಾಯಿ ಇದೆ.
