ತಾಕತ್ತಿದ್ರೆ ರಾಜ್ಯ ಬಂದ್ ಮಾಡು ನೋಡೋಣ : ವಾಟಾಳ್ ನಾಗರಾಜ್ಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಸವಾಲ್ -Vishwanews24
ತಾಕತ್ತಿದ್ರೆ ರಾಜ್ಯ ಬಂದ್ ಮಾಡು ನೋಡೋಣ : ವಾಟಾಳ್ ನಾಗರಾಜ್ಗೆ ಶಾಸಕ ಎಂ.ಪಿ. ರೇಣುಕಾಚಾರ್ಯ ಸವಾಲ್ -Vishwanews24
ದಾವಣಗೆರೆ: ನಿನಗೆ ತಾಕತ್ತಿದ್ರೆ ರಾಜ್ಯ ಬಂದ್ ಮಾಡು ನೋಡೋಣ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ಗೆ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಸವಾಲೆಸೆದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ”ವಾಟಾಲ್ ನಾಗರಾಜ್ ಒಬ್ಬ ಡೊಂಬರಾಟದ ವ್ಯಕ್ತಿ” ಎಂದು ಹೇಳಿದ್ದು, ”ಅವರು ಬೆಂಗಳೂರಿನಲ್ಲಿ ಎಷ್ಟು ಅಕ್ರಮ ಸೈಟ್ ಮಾಡಿದ್ದಾರೆ ಎಂದು ನನ್ನಲ್ಲಿ ಎಲ್ಲಾ ಮಾಹಿತಿ, ದಾಖಲೆಯಿದೆ. ಮೈಸೂರಿನ ವರುಣ ಕ್ಷೇತ್ರದಲ್ಲಿ 70 ಎಕರೆ ಭೂಮಿ ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ತಮಿಳರು ಅವರ ಜಮೀನಲ್ಲಿ ಕೆಲಸ ಮಾಡುತ್ತಿದ್ದಾರೆ” ಎಂದು ಹೇಳಿದರು.
ಬೆಂಗಳೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡಿದ್ದಾರೆ ಎನ್ನುವುದರ ಬಗ್ಗೆ ನನ್ನ ಕಡೆ ದಾಖಲೆಗಳಿವೆ. ಸಿಎಂ ಬಗ್ಗೆ ಕೆಟ್ಟ ಪದ ಬಳಕೆ ಮಾಡಿದ್ರೆ ಹುಷಾರ್. ಯಾರ್ಯಾರ ಕಾಲು ಹಿಡಿದು ಕೆಲಸ ಮಾಡಿಕೊಂಡಿದ್ದೀರಿ ಎನ್ನುವುದು ಗೊತ್ತಿದೆ. ನಮ್ಮ ಮುಖ್ಯಮಂತ್ರಿಗಳು ಕೆಲಸ ಮಾಡಿಕೊಟ್ಟಾಗ ಕೊಂಡಾಡಿದ್ದೀರಿ ಎಂದು ವಾಟಾಳ್ ವಿರುದ್ಧ ರೇಣುಕಾಚಾರ್ಯ ಸಿಡಿಮಿಡಿಗೊಂಡರು.”
