ತಾನು ಮಾದಕ ವ್ಯಸನಿಯಾಗಿದ್ದು, ಆ ಮತ್ತಿನಲ್ಲಿ ಶ್ರದ್ಧಾ ಹತ್ಯೆ ಮಾಡಿದೆ :  ಪೊಲೀಸ್ ತನಿಖೆ ವೇಳೆ ಅಫ್ತಾಬ್ – Vishwanews24

Featured, ರಾಷ್ಟ್ರ ನ್ಯೂಸ್

ತಾನು ಮಾದಕ ವ್ಯಸನಿಯಾಗಿದ್ದು, ಆ ಮತ್ತಿನಲ್ಲಿ ಶ್ರದ್ಧಾ ಹತ್ಯೆ ಮಾಡಿದೆ :  ಪೊಲೀಸ್ ತನಿಖೆ ವೇಳೆ ಅಫ್ತಾಬ್ 

ನವದೆಹಲಿ: ಶ್ರದ್ದಾ ವಾಲ್ಕರ್ ಪ್ರಕರಣದ ಆರೋಪಿ ಅಫ್ತಾಬ್ ವಿಚಾರಣೆ ವೇಳೆ ಒಂದೊಂದೇ ವಿಷಯಗಳು ಬಹಿರಂಗಗೊಳಿಸುತ್ತಿದ್ದು, ಇದೀಗ ತಾನು ಮಾದಕ ವ್ಯಸನಿಯಾಗಿದ್ದು, ಆ ಮತ್ತಿನಲ್ಲಿ ಶ್ರದ್ಧಾಳ ದೇಹವನ್ನು ತುಂಡು, ತುಂಡು ಮಾಡಿರುವುದಾಗಿ ತಿಳಿಸಿದ್ದಾನೆ.

ನಾನು ಗಾಂಜಾ ಸೇವಿಸುತ್ತಿದ್ದೆ, ಈ ಬಗ್ಗೆ ಶ್ರದ್ದಾ ತಗಾದೆ ತೆಗೆಯುತ್ತಿದ್ದಳು ಆಕೆಯನ್ನು ಕೊಂದ ದಿನದಂದು ಇಬ್ಬರು ಹಣಕಾಸಿನ ವಿಚಾರದಲ್ಲಿ ಜಗಳವಾಡಿಕೊಂಡಿರುವುದಾಗಿ ಪೊಲೀಸರ ತನಿಖೆಯ ಸಂದರ್ಭದಲ್ಲಿ ತಿಳಿಸಿದ್ದಾನೆ.

ಬಂಟ್ವಾಳ: ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ನಡೆಸಿ ಗರ್ಭವತಿ ಮಾಡಿದ ಮಲತಂದೆ ಬಂಧನ – Vishwanews24

ಇನ್ನು ಮುಂಬೈನಿಂದ ದೆಹಲಿಗೆ ತಮ್ಮ ಲಗೇಜ್ ಅನ್ನು ಯಾರು ತರುತ್ತಾರೆ ಎಂಬ ವಿಚಾರದಲ್ಲಿ ಇಬ್ಬರ ನಡುವೆಯೂ ಜಗಳ ನಡೆದಿತ್ತು. ಹೀಗೆ ಜಗಳ ವಿಕೋಪಕ್ಕೆ ಹೋದಾಗ ಅಫ್ತಾಬ್ ಫ್ಲ್ಯಾಟ್ ನಿಂದ ಹೊರಬಂದು ಗಾಂಜಾ ಸೇದಿದ ಮತ್ತಿನಲ್ಲಿಯೇ ಅವಳನ್ನು ಕೊಂದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.

ಅಫ್ತಾಬ್​ಗೆ ಫುಲ್ ಡ್ರಿಲ್.. ಶ್ರದ್ಧಾ ಕೊಲೆ ಕೇಸಲ್ಲಿ 10 ಸಾಕ್ಷ್ಯಗಳು ಲಭ್ಯ..

Leave a Reply