ಕುಂದಾಪುರ: ವಿಜಯದಶಮಿಯ ದಿವಸ ಅ. 10ರಂದು ಮುರ್ಡೇಶ್ವರಕ್ಕೆ ವಿಸ್ತರಣೆ ಗೊಂಡ ಹೈದರಾಬಾದ್ ತಿರುಪತಿ (ರೇಣಿಗುಂಟ)- ಮಂಗಳೂರು ರೈಲು 3 ತಿಂಗಳಲ್ಲೇ ಜನಪ್ರಿಯತೆ ಗಳಿಸಿದೆ. ಉಡುಪಿ, ಕುಂದಾಪುರದಿಂದ ಮಂಗಳೂರು ನಗರಕ್ಕೆ ತೆರಳಿ ಅಲ್ಲಿಂದ ತಿರುಪತಿ ರೈಲು ಹತ್ತುತ್ತಿದ್ದ ಜನರಿಗೆ ಈಗ ಮನೆ ಬಾಗಿಲಿನಲ್ಲೇ ತಿರುಪತಿ ರೈಲು ಏರುವ ಅವಕಾಶ ಸಿಕ್ಕಿದೆ.
ಮೊದಲು ಕಾಸರಗೋಡಿನ ನಂತರ ತುಂಬುತ್ತಿದ್ದ ರೈಲು ಈಗ ಉಡುಪಿ ತಲುಪುವಷ್ಟರಲ್ಲಿ ಕನಿಷ್ಠ ಶೇ 40-50 ಮೀಸಲು ಸೀಟು ತುಂಬಿ ಓಡುತ್ತಿದ್ದು ಜನರಲ್ ಬೋಗಿಗಳೂ ಕೂಡ ತುಂಬಿಯೇ ಇರುತ್ತವೆ. ರೈಲಿನ ಬುಕ್ಕಿಂಗ್ ವೆಬ್ ಸೈಟುಗಳಲ್ಲಿ ಮುರುಡೇಶ್ವರ ರೇಣಿಗುಂಟ ತಿರುಪತಿ ನಡುವೆ ವೇಟಿಂಗ್ ಲಿಸ್ಟ್ ತೋರಿಸುತ್ತಿದೆ. ಮುರುಡೇಶ್ವರ, ಮಂಗಳೂರು ನಡುವೆ ಫೆಬ್ರವರಿ ತಿಂಗಳ ಬುಕ್ಕಿಂಗ್ ಗಮನಿಸಿದರೆ, ಪ್ರತೀ ಪ್ರಯಾಣಕ್ಕೂ ಕೇವಲ 40-50 ಸೀಟುಗಳು ಮಾತ್ರ ಖಾಲಿ ಇರುವುದು ಕಂಡು ಬರುತ್ತಿದೆ.
ಐದು ರಾಜ್ಯಗಳ ಸಂಪರ್ಕ: ಭಾರತದ ದಕ್ಷಿಣ ಭಾಗದ ಎಲ್ಲಾ ಐದೂ ರಾಜ್ಯಗಳ ಮೂಲಕ ಹಾದು ಹೋಗುವ ಈ ರೈಲಿನಿಂದ ಗಾರ್ಮೆಂಟ್ ಉದ್ಯಮದ ತಿರುಪುರ್, ಆದಿಯೋಗಿ ಕೇಂದ್ರವಾದ ಕೊಯಮತ್ತೂರು, ಗಿರಿಧಾಮ ಊಟಿ, ತೆಲಂಗಾಣದ ಪ್ರಮುಖ ನಗರಗಳ ಸಂಪರ್ಕ ಲಭಿಸಿದೆ. ಈ ರೈಲನ್ನು ಕಾರವಾರಕ್ಕೂ ವಿಸ್ತರಿಸಬೇಕೆಂಬ ಬೇಡಿಕೆ ಕೇಳಿಬಂದಿದೆ.
ಈ ರೈಲಿನ ಅನುಕೂಲ ಹೇಗೆ?
-ಕರಾವಳಿಯಿಂದ ತಿರುಪತಿಗೆ ಬೆಂಗಳೂರು ಮೂಲಕ ರೈಲು ಓಡಿಸಿದರೆ ಕನಿಷ್ಠ 16ರಿಂದ 20 ಗಂಟೆ ಪ್ರಯಾಣದ ಅವಧಿ ಇದೆ.
-ರೇಣಿಗುಂಟ ರೈಲು ಸಂಜೆ ಕುಂದಾಪುರದಿಂದ ಹೊರಟರೆ ಮರುದಿನ ಬೆಳಗ್ಗೆ 11.40ಕ್ಕೆ ರೇಣಿಗುಂಟ ತಲುಪುತ್ತದೆ. ಅಲ್ಲಿಂದ ತಿರುಪತಿ ಪಟ್ಟಣದ 9 ಕಿ.ಮೀ. ದೂರದಲ್ಲಿದೆ.
-ಪ್ರತೀ ಬುಧವಾರ ಮತ್ತು ಶನಿವಾರ ರೈಲು ಹೊರಡುತ್ತದೆ. ಬುಧವಾರ ಹೊರಟವರಿಗೆ ಗುರುವಾರ ತಿರುಪತಿ ತಲುಪಿ, ಶುಕ್ರವಾರ ಸಂಜೆ 4.45ಕ್ಕೆ ರೇಣಿಗುಂಟದಿಂದ ರೈಲು ಹತ್ತಲು ಅವಕಾಶವಿದೆ. ಶನಿವಾರ ಹೊರಟ ವರಿಗೆ ಮರಳಿ ಬರುವ ರೈಲು ಇರುವುದು ಮಂಗಳವಾರ ಸಂಜೆ.
ಕರಾವಳಿಯಿಂದ ತಿರುಪತಿಗೆ ತೆರಳುವ ಭಕ್ತರ ಜತೆಗೆ, ಮಧ್ಯ ಕೇರಳ ಹಾಗು ತಮಿಳುನಾಡಿನಿಂದ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಬರುವ ಭಕ್ತಾದಿ ಗಳಿಂದಲೂ ರೈಲಿಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.
– ಗಣೇಶ್ ಪುತ್ರನ್, ಅಧ್ಯಕ್ಷರು, ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ ಸದಸ್ಯರು, ಕೊಂಕಣ ರೈಲ್ವೇ ಸಲಹಾ ಸಮಿತಿ
ಕಾರ್ಕಳ: ಅಪಘಾತದಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ರಮಾನಾಥ್ ರೈ ಡಿಸ್ಚಾರ್ಜ್ ; 15 ದಿನ ವಿಶ್ರಾಂತಿಗೆ ವೈದ್ಯರ ಸಲಹೆ ಮಂಗಳೂರು…
ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ ಕುಂದಾಪುರ: ತಾಲೂಕಿನ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ…
ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ…
ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ ನವದೆಹಲಿ/ಉಡುಪಿ: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ…
ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಉಳ್ಳಾಲ: ವಿವಾಹಿತನೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ…
ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ : ಕೇಂದ್ರಕ್ಕೆ ಸುಪ್ರೀಂ ಮಹತ್ವದ ಸೂಚನೆ ನವದೆಹಲಿ : ವಂದೇ…