ತಿರುಪತಿ ಲಡ್ಡಿಗೆ ದನದ ಕೊಬ್ಬು, ಮೀನಿನೆಣ್ಣೆ: CBI ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಶಿಕ್ಷೆಗೆ ಶರಣ್ ಪಂಪವೆಲ್ ಆಗ್ರಹ – vishwanews24
ತಿರುಪತಿ ಲಡ್ಡಿಗೆ ದನದ ಕೊಬ್ಬು, ಮೀನಿನೆಣ್ಣೆ: CBI ತನಿಖೆ ನಡೆಸಿ ಹಿಂದೂ ಭಾವನೆಗೆ ಧಕ್ಕೆ ತಂದವರಿಗೆ ಕಠಿಣ ಶಿಕ್ಷೆಗೆ ಶರಣ್ ಪಂಪವೆಲ್ ಆಗ್ರಹ
ಉಡುಪಿ: ವಿಶ್ವ ಹಿಂದೂ ಪರಿಷದ್ ತೀವ್ರ ಖಂಡನೆ. ಈ ಪ್ರಕರಣವನ್ನು CBI ಮೂಲಕ ತನಿಖೆ ನಡೆಸಿ ಹಿಂದೂ ಭಾವನೆಗೆ ಧಕ್ಕೆ ತಂದವರಿಗೆ ಕಠಿಣ ಶಿಕ್ಷೆಗೆ ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಕುಮಾರ ಪಂಪವೆಲ್ ಆಗ್ರಹಿಸಿದ್ದಾರೆ
ಪ್ರಪಂಚದಾದ್ಯಂತ ತಿರುಪತಿ ವೆಂಕಟರಮಣನ ಮೇಲೆ ಅತೀವ ಭಕ್ತಿ ಭಾವ ಇದ್ದು ಅಲ್ಲಿಯ ಪ್ರಸಾದವನ್ನು ತಿರುಪತಿ ದೇವರ ಪ್ರತೀಕದಂತೆ ನೋಡುತ್ತಾರೆ. ಪ್ರಸಾದವನ್ನು ದನದ ಕೊಬ್ಬು ಮತ್ತು ಮೀನಿನೆಣ್ಣೆ ಉಪಯೋಗಿಸಿ ತಯಾರಿಸಿದ್ದು ಸಮಸ್ತ ಹಿಂದೂ ಸಮಾಜಕ್ಕೆ ಅತೀವ ನೋವು ತಂದಿದೆ. ಇದನ್ನು ವಿಶ್ವ ಹಿಂದೂ ಪರಿಷದ್ ತೀವ್ರವಾಗಿ ಖಂಡಿಸುತ್ತದೆ.
ಉಡುಪಿ: ರೈಲು ಹತ್ತುವಾಗ ಬಿದ್ದ ಮಹಿಳೆ : ರಕ್ಷಣೆ ಮಾಡಿದ ಆರ್ಪಿಎಫ್ನ ಮಹಿಳಾ ಸಿಬ್ಬಂದಿ – vishwanews24
ಇದಕ್ಕೆ ಕಾರಣಕರ್ತರಾಗಿದ್ದ ಹಿಂದಿನ ಮುಖ್ಯಮಂತ್ರಿ ಜಗನ್ ರವರ ಸರಕಾರದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆಂದು ಸಿ ಬಿ ಐ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷದ್ ಅಗ್ರಹಿಸುತ್ತದೆ.
ಈ ವಿಚಾರವನ್ನು ಬೆಳಕಿಗೆ ತಂದಿರುವ ಹಾಗೂ ಬದಲಾವಣೆ ತಂದು ದೇವರಿಗೆ ಶುದ್ಧ ಲಾಡು ಅರ್ಪಿಸಲು ವ್ಯವಸ್ಥೆ ಮಾಡಿದ ಈಗಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುರವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ವಿಶ್ವ ಹಿಂದೂ ಪರಿಷದ್ ಸಲ್ಲಿಸುತ್ತದೆ.
ನನಗೆ ಕೊಟ್ಟಿದ್ದನ್ನ ಬಡ್ಡಿ ಸಮೇತ ತೀರಿಸದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ : ಹೆಚ್.ಡಿ ರೇವಣ್ಣ – vishwanews24
