ತುಳಿತಕ್ಕೊಳಗಾದವರಿಗೆ ರಕ್ಷಣೆ ನೀಡಬೇಕು ; ನಟಿ ಸಾಯಿಪಲ್ಲವಿ ಪರ ನಟಿ ರಮ್ಯಾ – Vishwanews24

Featured, ರಾಜ್ಯ ನ್ಯೂಸ್

ತುಳಿತಕ್ಕೊಳಗಾದವರಿಗೆ ರಕ್ಷಣೆ ನೀಡಬೇಕು ; ನಟಿ ಸಾಯಿಪಲ್ಲವಿ ಪರ ರಮ್ಯಾ 

ಬೆಂಗಳೂರು : ಕಾಶ್ಮೀರಿ ಪಂಡಿತರ ಕುರಿತು ಹೇಳಿಕೆ ನೀಡಿ ವಿವಾದಕ್ಕೊಳಗಾದ ನಟಿ ಸಾಯಿಪಲ್ಲವಿ ಪರ ಸ್ಯಾಂಡಲ್‌ವುಡ್‌ ನಟಿ ರಮ್ಯಾ ಬ್ಯಾಟ್‌ ಬೀಸಿದ್ದು, ‘ನಟಿ ಸಾಯಿಪಲ್ಲವಿ ಸತ್ಯ ಹೇಳಿದ್ದಾರೆ’ ಎಂದಿದ್ದಾರೆ.

ಈ ಕುರಿತು ಟ್ವೀಟ್‌ ನಟಿ ರಮ್ಯಾ, ‘ನಟಿ ಸಾಯಿಪಲ್ಲವಿ ಸತ್ಯ ಹೇಳಿದ್ದಾರೆ. ತುಳಿತಕ್ಕೊಳಗಾದವರಿಗೆ ರಕ್ಷಣೆ ನೀಡಬೇಕು ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ‘ಒಳ್ಳೆಯ ಮನುಷ್ಯರಾಗಿರಿ’, ‘ನ್ಯಾಯದ ಪರವಾಗಿರಿ’, ‘ಇನ್ನೊಬ್ಬ ಮನುಷ್ಯನನ್ನು ನೋಯಿಸಬೇಡಿ’, ‘ನೀವು ನ್ಯಾಯಯುತವಾಗಿರುವಾಗ ಬಲ ಅಥವಾ ಎಡಪಂಥೀಯರು ಮುಖ್ಯವಲ್ಲ’ ಎಂದು ಸಾಯಿಪಲ್ಲವಿ ಹೇಳಿದರು. ಯಾವುದೇ ವಿವೇಕಿ ಮತ್ತು ಸಭ್ಯ ಮನುಷ್ಯನು ತಿಳಿದುಕೊಳ್ಳಬೇಕಾದ ವಿಷಯವಿದು’ ಎಂದಿದ್ದಾರೆ.

Leave a Reply