ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ.
ತುಳುನಾಡ ಕಂಬಳದಲ್ಲಿ ಮಿಂಚುತ್ತಿರುವ ಕಾಪು ಕಲ್ಯಾದ ಯುವಕರ ತಂಡ,ಕಟಪಾಡಿ ಕಂಬಳದಲ್ಲೂ ಭಾಗವಹಿಸುವ ನಿರೀಕ್ಷೆ.
ಕಾಪು: ದೇಶ ವಿದೇಶದಲ್ಲಿ ಹೆಸರು ಪಡೆದಿರುವ ತುಳುನಾಡಿನ ಕಂಬಳ ಕೂಟಗಳಲ್ಲಿ ಒಂದಿಷ್ಟು ಯುವಕರ ತಂಡ ಕೋಣ ಓಡಿಸುವ ಮೂಲಕ ಹೊಸ ಮುನ್ನುಡಿ ಬರೆಯುತ್ತಿದ್ದಾರೆ ಹಾಗದರೇ ಆ ಯುವಕರು ಯಾರು ಎಂಬುದರ ಡೀಟೆಲ್ಸ್ ಇಲ್ಲಿದೆ.
ಹೌದು ಕಾಪು ಕಲ್ಯಾದ ಯುವಕರ ತಂಡವೊಂದು ಹಿರಿಯರ ಮಾರ್ಗದರ್ಶನದೊಂದಿಗೆ ತುಳುನಾಡಿನ ಕಂಬಳ ಕೂಟಗಳಲ್ಲಿ ಭಾಗವಹಿಸಿ ಕೋಣ ಓಡಿಸುವ ಮೂಲಕ ಸಂಪ್ರದಾಯವನ್ನ ಮುಂದುವರಿಸುತ್ತಿರುವುದು ಎಲ್ಲೆಡೆ ಸುದ್ದಿಯಾಗುತ್ತಿದೆ.
ಕಾಪು ಕಲ್ಯಾ ಜವನೆರ್ ನಾಮಾಕಿಂತದೊಂದಿಗೆ ಕಟಪಾಡಿ ಬೀಡು ಮೂಡು-ಪಡು ಕಂಬಳ ಕೂಟದಲ್ಲಿಯೂ ನೇಗಿಲು ಹಿರಿಯ A ಮತ್ತು B ವಿಭಾಗದಲ್ಲಿ ಕೋಣ ಓಡಿಸುವ ಇರಾದೆಯನ್ನು ಇಟ್ಟುಕೊಂಡಿದ್ದಾರೆ.
ಹದಿಹರೆಯ ಯುವಕರು ಸಾಮಾನ್ಯವಾಗಿ ನಗರದ ಜೀವನಕ್ಕೆ ಹೊಂದಿಕೊಂಡು ಸಾಂಪ್ರದಾಯ ಕ್ರೀಡೆಯನ್ನ ಮರೆಯುತ್ತಿರುವ ಈ ಯುಗದಲ್ಲಿ ತುಳುನಾಡ ಕಂಬಳವನ್ನ ಉಳಿಸಿ ಬೆಳೆಸುವ ನಿರ್ಧಾರದಿಂದ ಈ ರೀತಿಯ ಕಾರ್ಯಗಳು ನಡೆಯುತ್ತಿರುವುದು ಎಲ್ಲೆಡೆ ಶ್ಲಾಘನೀಯವಾಗಿದೆ.
ಈ ಬಗ್ಗೆ ಹಿರಿಯ ಕಂಬಳ ಕೋಣಗಳ ಯಜಮಾನರಾಗಿದ್ದ ದಿವಂಗತ ಮುಂಡ್ಕೂರು ಯತೀಶ್ ಶೆಟ್ಟಿಯವರ ಪುತ್ರ ನಡಿಕರೆ ಸಚಿನ್ ಶೆಟ್ಟಿ ಹೀಗೆ ಅನ್ನುತ್ತಾರೆ ” ತುಳುನಾಡಿನ ಸಾಂಪ್ರದಾಯಿಕ ಕಂಬಳಕೂಟವು ಮುಂದುವರಿಯಬೇಕು ಮತ್ತು ಯುವಕರಿಗೂ ಅದರ ಬಗ್ಗೆ ಮಾಹಿತಿ ಹಾಗೂ ಆಸಕ್ತಿಮೂಡಬೇಕು ಅನ್ನುವ ಉದ್ದೇಶದಿಂದ ಯುವಕರೆಲ್ಲ ಒಗ್ಗಟ್ಟಾಗಿ ಕಂಬಳ ಕೂಟದಲ್ಲಿ ಭಾಗವಹಿಸುತ್ತಿದ್ದೇವೆ,ಈ ಭಾರಿಯ ಕಟಪಾಡಿ ಕಂಬಳದಲ್ಲಿ ಕೂಡ ಭಾಗವಹಿಸುವ ಇಚ್ಛೆಯನ್ನ ಇಟ್ಟುಕೊಂಡಿದ್ದೇವೆ ಮತ್ತು ಬಹುಮಾನ ಪಡೆಯುವುವ ಗುರಿಯಿದೆ .
ಒಟ್ಟಾರೆಯಾಗಿ ಪೇಟಾ ನಿರ್ಧಾರದಿಂದ ತೂಗುಕತ್ತಿಯಲ್ಲಿರುವ ಕಂಬಳಕೂಟವು ನಿಂತುಹೋಗುವ ಸಮಯದಲ್ಲೂ ಯುವಕರ ಪಡೆ ಕಂಬಳದಲ್ಲಿ ಆಸಕ್ತಿ ತೋರಿಸುತ್ತಿರುವುದು ಮತ್ತು ಸಕ್ರಿಯವಾಗಿ ಭಾಗವಹಿಸುತ್ತಿರುವುದು ಶ್ಲಾಘನೀಯವೆ ಸರಿ.









