ತೆರದ ಲಾರಿ ಟಿಪ್ಪರ್ಗಳಲ್ಲಿ ಕಲ್ಲು ಬಂಡೆ ಸಾಗಾಟ ಹಿಂಬದಿ ವಾಹನ ಸವಾರರಿಗೆ ಪ್ರಾಣ ಸಂಕಟ ಕಣ್ಮುಚ್ಚಿ ಕುಳಿತ ಗಣಿ, ಪೋಲಿಸ್ ಇಲಾಖೆ.
ಉಡುಪಿ: ಕರಾವಳಿ ಭಾಗದಲ್ಲಿ ಕಡಲ್ಕೊರೆತ ತಪ್ಪಿಸಲು ಕಲ್ಲು ಹಾಕುವ ಕಾರ್ಯ ಅಲ್ಲಲ್ಲಿ ನಡೆಯುತ್ತಿರುವ ಕಾರಣ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಲ್ಲುಗಳ ಸಾಗಾಟ ನಡೆಯುತ್ತಿದ್ದು ಗುಜರಿ ಟಿಪ್ಪರ್ಗಳು ಅಪಾಯಕಾರಿಯಾಗಿದ್ದು ಇವುಗಳಿಗೆ ಬ್ರೇಕ್ ಹಾಕಲು ಒತ್ತಾಯ ಕೇಳಿ ಬರುತ್ತಿದೆ.
ಕಳೆದ ಹಲಾವಾರು ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಯಮಧೂತರಂತೆ ತೆರೆದ ಟಿಪ್ಪರ್ ವಾಹನಗಳಲ್ಲಿ ಕಲ್ಲುಬಂಡೆಗಳ ಸಾಗಾಟ ಹೆಚ್ಚಾಗುತ್ತಿದ್ದು ಯಾವುದೇ ಮುಜಾಗ್ರತೆ ಕ್ರಮ ಕೈಗೊಳ್ಳದೆ ಈ ರೀತಿ ಸಾಗುತ್ತಿರುವುದು ಘನವಾಹನಗಳ ಹಿಂಬದಿ ಸವಾರರಿಗೆ ಪ್ರಾಣ ಸಂಕಟ ಎದುರಾಗಿದೆ. ಈ ವಾಹನಗಳ ನಿಯಮಿತ ವೇಗದಲ್ಲಿ ಸಾಗದೇ ಅತ್ಯಂತ ರಭಸದಲ್ಲಿ ಚಲಿಸುವುದರಿಂದ ಹೊತ್ತೋಯ್ದ ಬಂಡೆಕಲ್ಲುಗಳು ಈಗ ಬೀಳುತ್ತೆ ಮತ್ತೆ ಬೀಳುತ್ತೆ ಅನ್ನುನ ಸ್ಥಿತಿ ಎದುರಾಗಿದೆ.

ಅಧಿಕಾರಿಗಳು ಮೌನ: ದ್ವಿಚಕ್ರ ವಾಹನದ ಸವಾರ, ಹಿಂಬದಿ ಸವಾರರಿಗೆ ಹೆಲ್ಮೆಟ್ ಇಲ್ಲ ಎಂದು ತಲೆ ತಿಂದು ಕೇಸು ಜಡಿಯುವ, ರಿಕ್ಷಾ ಚಾಲಕರಿಗೆ ಖಾಕಿ ಇಲ್ಲ, ಟ್ಯಾಕ್ಸಿ ಚಾಲಕರಿಗೆ ಬಿಳಿ ಇಲ್ಲ ಎಂದು ರಸ್ತೆಗಳಲ್ಲಿ ಅಡ್ಡ ಹಾಕುವ ಸಾರಿಗೆ ಆಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಈ ಅಪಾಯಕಾರಿ ಬಂಡೆ ಹೊರುವ ಗುಜರಿ ಟಿಪ್ಪರ್ಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಇರುವುದು ಅವರಿವರ ನಡುವೆ ಹೊಂದಾಣಿಕೆಯ ಸಂಶಯ ಮೂಡಿಸಿದೆ. ಎನಿದ್ದರೂ ಘನಘೋರ ಅವಘಡ ನಡೆಯದೆ ನಮ್ಮ ಅಧಿಕಾರಿಗಳು ಕ್ರಮ ಕೈಗೊಳ್ಳಲಾರರು ಎನ್ನುವುದು ನಾಗರಿಕರು ಮಾತಾಡುತ್ತಿದ್ದಾರೆ.

