Featured

ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ , ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಡ್ತೀನಿ : ಸಿಎಂ ಸಿದ್ದರಾಮಯ್ಯ – Vishwanews24

ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ , ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಡ್ತೀನಿ : ಸಿಎಂ ಸಿದ್ದರಾಮಯ್ಯ

ದಾವಣಗೆರೆ: ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ, ಸತ್ಯ, ನಾನು ಹೇಳಿದ್ದು ಸುಳ್ಳಾದ್ರೆ ರಾಜಕೀಯ ಬಿಡ್ತೀನಿ ಎಂದು ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ದಾವಣಗೆರೆ  ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಮಾನ ಮರ್ಯಾದೆ ತೆಗೆದಿದ್ದಾರೆ ಎಂದು ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಾನೂ ಅವರಂತೆ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸಬೇಕಾ? ತೆರಿಗೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿರೋದು ಸತ್ಯ, ಸತ್ಯ ಎಂದು ಹೇಳಿದ್ದಾರೆ.

ಇದುವರೆಗೂ ಕೆಂದ್ರ ಸರ್ಕಾರದಿಂದ ಒಂದೇ ಒಂದು ರೂಪಾಯಿ ಸಹ ಬಿಡುಗಡೆ ಮಾಡಿಲ್ಲ. ರಾಜ್ಯ ಬಿಜೆಪಿ ಲೀಡರ್‌ಗಳು ಅಮಿತ್ ಶಾ  ಜೊತೆ ಮಾತನಾಡಿ ಅನುದಾನ ಬಿಡುಗಡೆ ಮಾಡಿಸಿಲ್ಲ. ಯಡಿಯೂರಪ್ಪ, ಆಶೋಕ್, ಬೊಮ್ಮಾಯಿ, ವಿಜಯೇಂದ್ರ ಈಗಲಾದ್ರೂ ಹೋಗಿ ಕೇಳಲಿ ಎಂದಿರುವ ಸಿಎಂ, ನಮಗೆ ಅನ್ಯಾಯ ಆದ್ರೆ ಪ್ರತಿಭಟಿಸಬಾರದಾ? ಯಡಿಯೂರಪ್ಪ ಅವರಂತೆ ಬಾಯಿ ಮುಚ್ಚಿಕೊಂಡು ಇರಬೇಕಾ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಿಂದ 100 ರೂಪಾಯಿ ತೆರಿಗೆ ನೀಡಿದ್ರೆ ನಮಗೆ ಬರೋದು 12 ರೂಪಾಯಿ ಮಾತ್ರ. ತೆರಿಗೆ ಕೊಡೋದ್ರಲ್ಲಿ ದೇಶದಲ್ಲೇ ನಾವು 2ನೇ ಸ್ಥಾನದಲ್ಲಿದ್ದೇವೆ. ಆದರೂ ನಮಗೆ ಕೊಡಬೇಕಾದ ಅನುದಾನ ಸಿಗುತ್ತಿಲ್ಲ. ಬರವನ್ನ ನಾವು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿಗೆ ತೊಂದರೆ ಆಗಲ್ಲ. ಇದರೊಂದಿಗೆ ಜಾನುವಾರುಗಳಿಗೆ ಮೇವು ಸಿಗುವ ವ್ಯವಸ್ಥೆ ಮಾಡಿದ್ದೇವೆ. ಜನರಿಗೆ ಉದ್ಯೋಗ ಕೊಡ್ತಾ ಇದೀವಿ, ಅದಕ್ಕಾಗಿ 850 ಕೋಟಿ ರೂ. ನಿಧಿ ಇಡಲಾಗಿದೆ. ಯಾರೂ ಸಹ ಗುಳೆ ಹೋಗದ ರೀತಿ ನೋಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ’ ವಜ್ರಾಭರಣ ಅನಾವರಣ -vishwanews24

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ' ವಜ್ರಾಭರಣ ಅನಾವರಣ ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ…

1 hour ago

ಮಡಿಕೇರಿ : ದುಬಾರೆ ಶಿಬಿರದಲ್ಲಿ ಆನೆಗಳ ನಡುವೆ ಕಾಳಗ; ಸಾಕಾನೆ ಮೈಮೇಲೆ ಬಿದ್ದು ಪ್ರವಾಸಿ ಮಹಿಳೆ ಮೃತ್ಯು – vishwanews24

ಮಡಿಕೇರಿ : ದುಬಾರೆ ಶಿಬಿರದಲ್ಲಿ ಆನೆಗಳ ನಡುವೆ ಕಾಳಗ; ಸಾಕಾನೆ ಮೈಮೇಲೆ ಬಿದ್ದು ಪ್ರವಾಸಿ ಮಹಿಳೆ ಮೃತ್ಯು ಮಡಿಕೇರಿ :…

4 hours ago

ದೇಶ ಆರ್ಥಿಕ ಸಂಕಷ್ಟದಲ್ಲಿದೆ ಅಂತ ರಾಹುಲ್ ಗಾಂಧಿ ಮೊದಲೇ ಹೇಳಿದ್ದರು: ಪ್ರಿಯಾಂಕ್ ಖರ್ಗೆ – vishwanews24

ದೇಶ ಆರ್ಥಿಕ ಸಂಕಷ್ಟದಲ್ಲಿದೆ ಅಂತ ರಾಹುಲ್ ಗಾಂಧಿ ಮೊದಲೇ ಹೇಳಿದ್ದರು: ಪ್ರಿಯಾಂಕ್ ಖರ್ಗೆ ಕಲಬುರಗಿ: ದೇಶದ ಆರ್ಥಿಕ ಸಂಕಷ್ಟದಲ್ಲಿದೆ ಅಂತ…

4 hours ago

ಕಾರ್ಕಳ : ಚರಂಡಿಗೆ ಮಗುಚಿ ಬಿದ್ದ ಕಾರು ; ಪ್ರಯಾಣಿಕರು ಅಪಾಯದಿಂದ ಪಾರು – vishwanews24

ಕಾರ್ಕಳ : ಚರಂಡಿಗೆ ಮಗುಚಿ ಬಿದ್ದ ಕಾರು ; ಪ್ರಯಾಣಿಕರು ಅಪಾಯದಿಂದ ಪಾರು ಕಾರ್ಕಳ: ಧರ್ಮಸ್ಥಳದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ…

6 hours ago

ಸಮುದ್ರದ ಅಬ್ಬರ ಹೆಚ್ಚಳ ಸಾಧ್ಯತೆ: ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ – vishwanews24

ಸಮುದ್ರದ ಅಬ್ಬರ ಹೆಚ್ಚಳ ಸಾಧ್ಯತೆ: ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ಮಂಗಳೂರು: ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ…

7 hours ago

ಪಾಟ್ನಾ: ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ : ತಪ್ಪಿದ ಭಾರೀ ಅನಾಹುತ – vishwanews24

ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ :ತಪ್ಪಿದ ಭಾರೀ ಅನಾಹುತ ಪಾಟ್ನಾ: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳಲು…

10 hours ago