ತೆಲಂಗಾಣದಲ್ಲಿ ಬಾಲಿವುಡ್ ನಟ ಸೋನು ಸೂದ್ ದೇವಾಲಯ , ಮೂರ್ತಿ ಪ್ರತಿಷ್ಟಾಪಿಸಿ ನಿತ್ಯವೂ ಪೂಜೆ, ಆರತಿ -Vishwanews24
ತೆಲಂಗಾಣದಲ್ಲಿ ಬಾಲಿವುಡ್ ನಟ ಸೋನು ಸೂದ್ ದೇವಾಲಯ , ಮೂರ್ತಿ ಪ್ರತಿಷ್ಟಾಪಿಸಿ ನಿತ್ಯವೂ ಪೂಜೆ, ಆರತಿ -Vishwanews24
Telangana: Locals of Dubba Tanda village in Siddipet have constructed a temple to recognize Actor Sonu Sood's philanthropic work.
A local says, "He helped so many people during the pandemic. It's a matter of great delight for us that we've constructed his temple." (20.12.2020) pic.twitter.com/XZoj6x55pq
— ANI (@ANI) December 20, 2020
ತೆಲಂಗಾಣ: ಕೊರೊನಾ ಸಾಂಕ್ರಾಮಿಕದ ಸಂಕಟ ಕಾಲದಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಜನರ ನೆರವಿಗೆ ಧಾವಿಸಿದ ನಟ ಸೋನು ಸೂದ್ ಕಾರ್ಯಗಳಿಗೆ ಇಡೀ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ದೇವಸ್ಥಾನವೊಂದನ್ನು ಕಟ್ಟಿ ಅದರಲ್ಲಿ ಸೋನು ಸೂದ್ ಅವರ ಮೂರ್ತಿ ಪ್ರತಿಷ್ಟಾಪಿಸಿ ಪೂಜಿಸಲಾಗುತ್ತಿದೆ.
ಬಾಲಿವುಡ್ ನಟ ಸೋನು ಸೂದ್ ಅವರ ಮಾನವೀಯ ಕಾರ್ಯವನ್ನು ಗುರುತಿಸಿದ ತೆಲಂಗಾಣದ ಸಿದ್ದಿಪೇಟ್ನಲ್ಲಿರುವ ದುಬ್ಬಾ ತಾಂಡಾದ ಜನರು ತೆಲಂಗಾಣದ ಸಿದ್ದಿಪೇಟೆ ಜಿಲ್ಲಾಧಿಕಾರಿಗಳ ಸಹಾಯದಿಂದ ನಟನಿಗೆ ಗೌರವಾರ್ಥವಾಗಿ ದೇವಾಲಯ ಕಟ್ಟಿದ್ದಾರೆ.
ದೇವಾಲಯದಲ್ಲಿ ಸೋನು ಸೂದ್ ವಿಗ್ರಹ ಮಾಡಿದ ಶಿಲ್ಪಿ ಮತ್ತು ಸ್ಥಳೀಯ ಜನರು, ವಿಗ್ರಹಕ್ಕೆ ಆರತಿ ಮಾಡಿ ಉದ್ಘಾಟಿಸಿದ್ದಾರೆ. ತಾಂಡಾದ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನು ಹಾಡಿದ್ದಾರೆ.
ಈ ಕುರಿತು ಮಾತನಾಡಿರುವ ಸ್ಥಳೀಯ ವ್ಯಕ್ತಿ, ಸೋನು ಸೂದ್ ಅವರು ಈ ಹಿಂದೆ ಜನರಿಗೆ ಸಹಾಯ ಮಾಡಿದ ರೀತಿ ಕೇವಲ ಭಾರತ ಮಾತ್ರವಲ್ಲ, ವಿಶ್ವಕ್ಕೆ ಮನ್ನಣೆ ನೀಡಿದೆ. ಅವರಿಗೆ ವಿಶ್ವಸಂಸ್ಥೆಯು ಎಸ್ ಡಿಜಿ ವಿಶೇಷ ಮಾನವೀಯ ಕ್ರಿಯೆ ಪ್ರಶಸ್ತಿ ಯನ್ನು ನೀಡಿ ಗೌರವಿಸಲ್ಪಟ್ಟಿದೆ. ಹೀಗಾಗಿ ನಮ್ಮ ಊರಿನ ಪರವಾಗಿ ಅವರಿಗೆ ದೇವಸ್ಥಾನ ಕಟ್ಟಲು ನಿರ್ಧರಿಸಿದೆವು ಎಂದಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಲು ಬಸ್ ಹಾಗೂ ವಿಮಾನದ ವ್ಯವಸ್ಥೆ ಮಾಡುವ ಮೂಲಕ ಸೋನು ಸೂದ್ ಭಾರೀ ಪ್ರಶಂಸೆಗೆ ಒಳಗಾಗಿದ್ದರು.
