ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ರಿಂದ ಮಹಾಸುದರ್ಶನ ಯಜ್ಞ ; ಪ್ರಧಾನಿ ಮೋದಿ ಸೇರಿ ಎಲ್ಲ ಮುಖ್ಯಮಂತ್ರಿಗಳಿಗೂ ಆಹ್ವಾನ -Vishwanews24
ಹೈದರಾಬಾದ್ : ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಮಹಾಸುದರ್ಶನ ಯಜ್ಞ ಕೈಗೊಳ್ಳಲು ನಿರ್ಧರಿಸಿದ್ದು, ಯಜ್ಞದ ಸಿದ್ಧತೆಗಳ ಬಗ್ಗೆ ಚಿನ್ನಾ ಜಿಯಾರ್ ಸ್ವಾಮಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
100 ಎಕರೆ ಪ್ರದೇಶದಲ್ಲಿ 1048 ಯಜ್ಞ ಕುಂಡಗಳು ಸ್ಥಾಪನೆಯಾಗಲಿದ್ದು, 1000 ಮಂದಿ ಋತ್ವಿಜರು, 3000 ಸಹಾಯಕರು ಯಜ್ಞವನ್ನು ನಡೆಸಿಕೊಡಲಿದ್ದಾರೆ. ಬದ್ರಿನಾಥ್, ಶ್ರೀರಂಗಂ, ಜಗನ್ನಾಥ, ತಿರುಪತಿ ಹಾಗೂ ಇನ್ನಿತರ ಶ್ರೀಕ್ಷೇತ್ರಗಳ ವೈಷ್ಣವ ಪೀಠಾಧಿಪತಿಗಳನ್ನು ( ಭಾರತ ಹಾಗೂ ವಿದೇಶ) ಯಜ್ಞಕ್ಕೆ ಆಹ್ವಾನಿಸಲಾಗುತ್ತದೆ.
ಹೈದರಾಬಾದ್ ಬಳಿ ಇರುವ ಯಾದಾದ್ರಿಯ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಈ ಯಜ್ಞ ನಡೆಯಲಿದ್ದು, ಇದಕ್ಕಾಗಿ ನಡೆಸಬೇಕಿರುವ ತಯಾರಿಗಳ ಬಗ್ಗೆ ತ್ರಿದಂಡಿ ಚಿನ್ನಾ ಜಿಯರ್ ಸ್ವಾಮಿಗಳೊಂದಿಗೆ ಸಿಎಂ ಚರ್ಚೆ ನಡೆಸಿದ್ದಾರೆ.
ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ಹಿರಿಯ ನಾಯಕರು, ಮಂತ್ರಿಗಳು, ರಾಜ್ಯಪಾಲರು ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಮಂತ್ರಿಸಲು ನಿರ್ಧರಿಸಲಾಗಿದೆ.
