ಥರ್ಮೊಕೋಲ್‌ ಸಹಾಯದಿಂದ ಸತತ 12 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ ಪ್ರಾಣ ಉಳಿಸಿಕೊಂಡ ಮೀನುಗಾರನ -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಮೀನುಗಾರಿಕೆಗೆ ತೆರಳಿ ಬೋಟ್​ನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರರೊಬ್ಬರನ್ನು ಕರಾವಳಿ ತಟ ರಕ್ಷಣಾ ಪಡೆಯವರು ರಕ್ಷಿಸಿದ್ದಾರೆ. ಒಡಿಶಾ ಮೂಲದ ಮೀನುಗಾರ ಲೋಂಡ (35) ರಕ್ಷಣೆಗೊಳಗಾದ ವ್ಯಕ್ತಿ.

ಲೋಂಡ, ಮಂಗಳೂರು ತಂಡದೊಂದಿಗೆ 23ರಂದು ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಆತ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ಆತ ಬಿದ್ದಿರುವುದು ಇತರ ಮೀನುಗಾರರಿಗೆ ಕೆಲ ಸಮಯದ ನಂತರ ಗೊತ್ತಾಗಿದೆ. ಆತನ ಮೊಬೈಲ್‌ ಬೋಟ್‌ನಲ್ಲೇ ಇದ್ದುದರಿಂದ ಕೂಡಲೇ ಇತರ ಮೀನುಗಾರರು ಕರಾವಳಿ ಕಾವಲು ಪೊಲೀಸ್‌ ಇಲಾಖೆಗೆ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯಚರಣೆ ಮಾಡಿ, ನಾಪತ್ತೆಯಾದ ಮೀನುಗಾರನನ್ನು ಮಲ್ಪೆ ಲೈಟ್‌ ಹೌಸ್‌ನಿಂದ 10 ನಾಟಿ ಕಲ್‌ ಮೈಲು ದೂರದಲ್ಲಿ ರಕ್ಷಣಾ ತಂಡ ರಕ್ಷಿಸಿದ್ದಾರೆ.

ಇನ್ನು ಲೊಂಡ ಥರ್ಮೊಕೋಲ್‌ ತುಂಡಿನ ಸಹಾಯದಿಂದ ಸತತ 12 ಗಂಟೆಗಳ ಕಾಲ ಸಮುದ್ರದಲ್ಲಿ ಈಜಿ, ಪ್ರಾಣ ಉಳಿಸಿಕೊಳ್ಳಲು ಪರದಾಟ ನಡೆಸಿದ್ದಾರೆ ಎನ್ನಲಾಗಿದೆ.