ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆ ಭೀಕರ ರಸ್ತೆ ಅಪಘಾತ : 11 ಮಂದಿ ಸಾವು – vishwanews24
ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ನಡುವೆಭೀಕರ ರಸ್ತೆ ಅಪಘಾತ : 11 ಮಂದಿ ಸಾವು
ಥಾಣೆ: ವ್ಯಾನ್ ಹಾಗೂ ಸಿಮೆಂಟ್ ಮಿಕ್ಸರ್ ವಾಹನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹನ್ನೊಂದು ಮಂದಿ ಮೃತಪಟ್ಟು, ಎರಡು ಮಂದಿ ಗಂಭೀರ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುರ್ಬಾದ್ ಎಂಬಲ್ಲಿ ಸೋಮವಾರ (ಏ.13) ಸಂಭವಿಸಿದೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಇಂದು ಬೆಳಿಗ್ಗೆ ಸುಮಾರು 10:45ರ ಸುಮಾರಿಗೆ ಕಲ್ಯಾಣ್‌ನಿಂದ ಮುರ್ಬಾದ್ ಕಡೆಗೆ ತೆರಳುತ್ತಿದ್ದ ವ್ಯಾನ್, ಎದುರಿನಿಂದ ಬರುತ್ತಿದ್ದ ಸಿಮೆಂಟ್ ಮಿಕ್ಸರ್ ವಾಹನಕ್ಕೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣವಾಗಿ ನುಜ್ಜುಗುಜ್ಜಾಗಿವೆ. ಅಪಘಾತದ ರಭಸಕ್ಕೆ ವ್ಯಾನ್‌ನಲ್ಲಿದ್ದ ಎಂಟು ಪುರುಷರು ಹಾಗೂ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ತಕ್ಷಣವೇ ಉಲ್ಲಾಸನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮುರ್ಬಾದ್ ತಹಶೀಲ್ದಾರ್ ಅಭಿಜಿತ್ ದೇಶ್‌ಮುಖ್ ತಿಳಿಸಿದ್ದಾರೆ.
ಇದನ್ನೂ ಓದಿ:
ಮತ್ಸ್ಯಕ್ಷಾಮ: ಮಂಗಳೂರಿನಲ್ಲಿ ಮೀನುಗಾರಿಕೆ ನಿಲ್ಲಿಸಿದ ಶೇ.85ರಷ್ಟು ಬೋಟುಗಳು – vishwanews24
ಮೃತಪಟ್ಟ ಹನ್ನೊಂದು ಮಂದಿಯಲ್ಲಿ ಆರು ಮೃತದೇಹಗಳ ಗುರುತು ಪತ್ತೆಯಾಗಿದ್ದು, ಉಳಿದವರ ವಿವರಗಳಿಗಾಗಿ ಟಿಟ್ವಾಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
