ಉಡುಪಿ: ದಕ್ಷಿಣ ಕನ್ನಡದ 10 ಹಾಗೂ ಉಡುಪಿಯ 7 ಸೇರಿದಂತೆ ಉಭಯ ಜಿಲ್ಲೆಗಳ 17 ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೂನ್ಯ ದಾಖಲಾತಿ ವರದಿಯಾಗಿದೆ. ಸತತ ಮೂರು ವರ್ಷಗಳಿಂದ ಶೂನ್ಯ ದಾಖಲಾತಿಯಿದ್ದರೆ ಅಂತಹ ಕಾಲೇಜು ಗಳಿಗೆ ವಿದ್ಯಾರ್ಥಿಗಳ ಸೇರ್ಪಡೆಗೆ ಅವಕಾಶ ನೀಡುವುದಿಲ್ಲ.
ರಾಜ್ಯದ 541 ಖಾಸಗಿ ಪಿಯು ಕಾಲೇಜು ಗಳಲ್ಲಿ ಶೂನ್ಯ ದಾಖಲೆಯಿದ್ದು, ಬೆಂಗಳೂರು ದಕ್ಷಿಣ ಮೊದಲು (93), ಬೆಂಗಳೂರು ಉತ್ತರ 2ನೇ (61) ಸ್ಥಾನದಲ್ಲಿದೆ. ಶಿರಸಿಯ 3 ಕಾಲೇಜುಗಳಲ್ಲಿ ಶೂನ್ಯ ದಾಖಲಾತಿಯಿದ್ದು, ಕೊನೆ ಸ್ಥಾನದಲ್ಲಿದೆ ಎಂದು ಇಲಾಖೆ ತಿಳಿಸಿದೆ.
2019-20, 2020-21 ಹಾಗೂ 2021- 22ನೇ ಸಾಲಿನಲ್ಲಿ ಶೂನ್ಯ ದಾಖಲಾತಿಯಾಗಿದ್ದು, ಶೈಕ್ಷಣಿಕ ಚಟುವಟಿಕೆ ನಡೆಯದೆ ಸ್ಥಗಿತ ಗೊಂಡಿರುವ ಕಾಲೇಜುಗಳು 2022-23ನೇ ಸಾಲಿಗೆ ವಿದ್ಯಾರ್ಥಿಗಳ ಸೇರ್ಪಡೆ ಮಾಡಿ ಕೊಳ್ಳಲು ಅಥವಾ ಎಸ್‌ಎಟಿಎಸ್‌ನಲ್ಲಿ ವಿದ್ಯಾರ್ಥಿ ಗಳ ಮಾಹಿತಿ ಅಪ್‌ಲೋಡ್ ಮಾಡಲು ಅವಕಾಶ ಇರುವುದಿಲ್ಲ.
ಶೂನ್ಯ ದಾಖಲಾತಿ ಹೊಂದಿರುವ ಖಾಸಗಿ ಪ.ಪೂ. ಕಾಲೇಜುಗಳು ಕೊರೊನಾ ಹಿನ್ನೆಲೆ ಯಲ್ಲಿ ಸ್ಥಗಿತಗೊಂಡಿದ್ದಲ್ಲಿ ವಿಶೇಷ ಪ್ರಕರಣದಡಿ ವಿನಾಯಿತಿ ಕಲ್ಪಿಸಿ 2022-23ನೇ ಸಾಲಿಗೆ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲು ಸರಕಾರ ಅವಕಾಶ ಕೊಟ್ಟಿದೆ. ಕಾಲೇಜನ್ನು ಪುನಃ ಆರಂಭಿಸಲು ಇಚ್ಛಿಸಿದಲ್ಲಿ ಕಾಲೇಜಿನ ಮಂಜೂರಾತಿ ಆದೇಶ ಪ್ರತಿ, ಶೈಕ್ಷಣಿಕ ಮಾನ್ಯತೆ ಆದೇಶಪ್ರತಿ, 2016-17ನೇ ಸಾಲಿನ ಮಾನ್ಯತೆ ನವೀಕರಣ ಪ್ರತಿ, 2022-23ರಲ್ಲಿ ಮಾನ್ಯತೆ ಶುಲ್ಕ ಪಾವತಿಸಿರುವ ಚಲನ್, ಮಂಜೂರಾದ ಸಂಯೋ ಜನೆ ಮತ್ತು ವಿಭಾಗದ ಆದೇಶ ಪ್ರತಿ, 2017-18, 2018-19ರಲ್ಲಿ ಸಂಯೋಜನೆ, ವಿಭಾಗವಾರು ವಿದ್ಯಾರ್ಥಿಗಳ ದಾಖಲಾತಿ, ಫಲಿತಾಂಶದ ವಿವರ ಸಹಿತ ಅಗತ್ಯ ದಾಖಲೆಗಳನ್ನು ಜು. 16ರೊಳಗೆ ಇಲಾಖೆಗೆ ಸಲ್ಲಿಸ ಬೇಕು ಎಂದು ಇಲಾಖೆಯ ಅಧಿ ಕಾರಿಯೊಬ್ಬರು ತಿಳಿಸಿದ್ದಾರೆ.
ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ ಮಂಗಳೂರು: ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮಂಗಳಮುಖಿಯರು ಅಕ್ರಮ…
ಉಡುಪಿ ನಗರಸಭೆಯ ಕಾಮಗಾರಿಗಳಿಗೆ ಚುರುಕು ಮುಟ್ಟಿಸಲು ಜಿಲ್ಲಾಧಿಕಾರಿಗೆ ಬಿಜೆಪಿ ಮನವಿ ಉಡುಪಿ: ಉಡುಪಿ ನಗರಸಭೆಯಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣ…
ಬಂಟ್ವಾಳ: ಮಾದಕ ದ್ರವ್ಯ ಮಾರಾಟ ಶಂಕೆ; ಓರ್ವನ ಬಂಧನ, 1.93 ಲಕ್ಷ ರೂ. ಮೌಲ್ಯದ ಸೊತ್ತು ವಶ ಬಂಟ್ವಾಳ: ಮಾದಕ…
ಮಂಡ್ಯ : ಅನಾರೋಗ್ಯದಿಂದ ಎಎಸ್‌ಪಿ ಸಿ.ಇ. ತಿಮ್ಮಯ್ಯ ನಿಧನ ಮಂಡ್ಯ: ಅನಾರೋಗ್ಯದಿಂದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ (57)…
ಕಾಪು : ಇಂದು ಸಂಜೆ ಉಚ್ಚಿಲ ದಸರಾದ ದೀಪಾಲಂಕಾರ ಉದ್ಘಾಟನೆ ಕಾಪು: ದ.ಕ. ಮೊಗವೀರ ಮಹಾಜನ ಸಂಘದ ಆಡಳಿತಕ್ಕೊಳಪಟ್ಟಿರುವ ಶ್ರೀ…
ನೊಯ್ಡಾ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮರುನಾಮಕರಣ ನವದೆಹಲಿ: ಉತ್ತರ ಪ್ರದೇಶದ ಜೆವಾರ್‌ನಲ್ಲಿರುವ ನೋಯ್ಡಾ…