Featured

ದಕ್ಷಿಣ ಕನ್ನಡ ಕಾಂಗ್ರೆಸ್​​ನಲ್ಲಿ ಟಿಕೆಟ್​ಗೆ ಭಾರೀ ಪೈಪೋಟಿ ; ಅಚ್ಚರಿಯ ರೀತಿಯಲ್ಲಿ ಯುಟಿ ಖಾದರ್ ಹೆಸರು ಪ್ರಸ್ತಾಪ – Vishwanews24

ದಕ್ಷಿಣ ಕನ್ನಡ ಕಾಂಗ್ರೆಸ್​​ನಲ್ಲಿ ಟಿಕೆಟ್​ಗೆ ಭಾರೀ ಪೈಪೋಟಿ ..

ಅಚ್ಚರಿಯ ರೀತಿಯಲ್ಲಿ ಯುಟಿ ಖಾದರ್ ಹೆಸರು ಪ್ರಸ್ತಾಪ..

ಲೋಕಸಭಾ ಅಖಾಡಕ್ಕಿಳಿಯುತ್ತಾರಾ ಯುಟಿ ಖಾದರ್..?

ಹಿಂದುತ್ವದ ಭದ್ರಕೋಟೆಯಲ್ಲಿ ಯುಟಿ ಖಾದರ್​​ಗೆ ಟಿಕೆಟ್ ನೀಡಲು ಕೆಪಿಸಿಸಿಯಲ್ಲಿ ಚರ್ಚೆ..

ಕರಾವಳಿ ಪ್ರದೇಶದಲ್ಲಿ ಖಾದರ್ ಮೂಲಕ ಮತ್ತೆ ಹಿಡಿತ ಸಾಧಿಸುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ..

ಮಂಗಳೂರು, : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಲ್ಲಿ ಪೈಪೋಟಿ ಮುಂದುವರಿದಿದ್ದು, ಅಚ್ಚರಿಯ ರೀತಿಯಲ್ಲಿ ವಿಧಾನಸಭೆ ಸ್ಪೀಕರ್ ಯುಟಿ ಖಾದರ್  ಹೆಸರು ಪ್ರಸ್ತಾಪವಾಗಿದೆ. ಒಂದೆಡೆ ಕಾಂಗ್ರೆಸ್  ಮುಖಂಡರು ಜಾತಿ ಲೆಕ್ಕಾಚಾರ ಹಾಕುತ್ತಿದ್ದರೆ, ಮತ್ತೊಂದೆಡೆ ಖಾದರ್ ಹೆಸರು ಪ್ರಸ್ತಾಪವಾಗಿದೆ. ಹಿಂದುತ್ವದ ಭದ್ರಕೋಟೆಯಲ್ಲಿ ಯುಟಿ ಖಾದರ್​​ಗೆ ಟಿಕೆಟ್ ನೀಡಲು ಕೆಪಿಸಿಸಿಯಲ್ಲಿ ಚರ್ಚೆ ನಡೆದಿದೆ.

ಯುಟಿ ಖಾದರ್ ಅವರಿಗೆ ಮುಸ್ಲಿಂ ಮತಗಳಗಳನ್ನು ಕ್ಲೀನ್ ಸ್ವೀಪ್ ಮಾಡುವ ಸಾಮರ್ಥ್ಯ ಇದೆ. ಅದೇ ರೀತಿ ಹಿಂದು ಮತಗಳನ್ನೂ ಹೆಚ್ಚಾಗಿ ಸೆಳೆಯುವ ಶಕ್ತಿ ಇದೆ. ಇತ್ತೀಚಿಗೆ ಭೂತ ಕೋಲದಲ್ಲಿ ಭಾಗವಹಿಸಿ ಖಾದರ್ ಅವರು ಹಿಂದುಗಳ ಮನ ಗೆದ್ದಿದ್ದು ಕೂಡ ಇಲ್ಲಿ ಗಮನಾರ್ಹ. ಅದೇ ರೀತಿ ಖಾದರ್ ಹಲವು ಬಾರಿ ನಡೆದುಕೊಂಡಿದ್ದಾರೆ. ಹಿಂದೂ ದೇಗುಲಗಳಿಗೆ ಭೇಟಿ ನೀಡುವುದು, ಸಮಾರಂಭಗಳಲ್ಲಿ ಭಾಗವಹಿಸುವುದನ್ನು ಮಾಡಿದ್ದಾರೆ. ಜತೆಗೆ, ಅನೇಕ ಹಿಂದೂ ಮುಖಂಡರ ಜತೆಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇವೆಲ್ಲ ಅಂಶಗಳನ್ನೂ ಪರಿಗಣಿಸಲಾಗಿದೆ.

ಜಾತ್ಯತೀತ ನಡೆಯಿಂದ ಖಾದರ್ ಅವರಿಗೆ ಎಲ್ಲ ರೀತಿಯ ಓಟ್ ಬ್ಯಾಂಕ್ ಸೆಳೆಯುವ ಶಕ್ತಿ ಇದೆ ಎಂಬುದು ಅವರ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಜತೆಗೆ, ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯವೂ ಕ್ಷೇತ್ರದ ಜನತೆಯಲ್ಲಿದೆ. ಹೀಗಾಗಿ ಅವರ ಮೂಲಕ ಕರಾವಳಿ ಪ್ರದೇಶದಲ್ಲಿ ಮತ್ತೆ ಹಿಡಿತ ಸಾಧಿಸುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ ಎನ್ನಲಾಗಿದೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ’ ವಜ್ರಾಭರಣ ಅನಾವರಣ -vishwanews24

ಉಡುಪಿ ಮಲಬಾರ್ ಗೋಲ್ಡ್ ನಲ್ಲಿ `ಆನಿಕಾ' ವಜ್ರಾಭರಣ ಅನಾವರಣ ಉಡುಪಿ : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ…

7 hours ago

ಮಡಿಕೇರಿ : ದುಬಾರೆ ಶಿಬಿರದಲ್ಲಿ ಆನೆಗಳ ನಡುವೆ ಕಾಳಗ; ಸಾಕಾನೆ ಮೈಮೇಲೆ ಬಿದ್ದು ಪ್ರವಾಸಿ ಮಹಿಳೆ ಮೃತ್ಯು – vishwanews24

ಮಡಿಕೇರಿ : ದುಬಾರೆ ಶಿಬಿರದಲ್ಲಿ ಆನೆಗಳ ನಡುವೆ ಕಾಳಗ; ಸಾಕಾನೆ ಮೈಮೇಲೆ ಬಿದ್ದು ಪ್ರವಾಸಿ ಮಹಿಳೆ ಮೃತ್ಯು ಮಡಿಕೇರಿ :…

10 hours ago

ದೇಶ ಆರ್ಥಿಕ ಸಂಕಷ್ಟದಲ್ಲಿದೆ ಅಂತ ರಾಹುಲ್ ಗಾಂಧಿ ಮೊದಲೇ ಹೇಳಿದ್ದರು: ಪ್ರಿಯಾಂಕ್ ಖರ್ಗೆ – vishwanews24

ದೇಶ ಆರ್ಥಿಕ ಸಂಕಷ್ಟದಲ್ಲಿದೆ ಅಂತ ರಾಹುಲ್ ಗಾಂಧಿ ಮೊದಲೇ ಹೇಳಿದ್ದರು: ಪ್ರಿಯಾಂಕ್ ಖರ್ಗೆ ಕಲಬುರಗಿ: ದೇಶದ ಆರ್ಥಿಕ ಸಂಕಷ್ಟದಲ್ಲಿದೆ ಅಂತ…

10 hours ago

ಕಾರ್ಕಳ : ಚರಂಡಿಗೆ ಮಗುಚಿ ಬಿದ್ದ ಕಾರು ; ಪ್ರಯಾಣಿಕರು ಅಪಾಯದಿಂದ ಪಾರು – vishwanews24

ಕಾರ್ಕಳ : ಚರಂಡಿಗೆ ಮಗುಚಿ ಬಿದ್ದ ಕಾರು ; ಪ್ರಯಾಣಿಕರು ಅಪಾಯದಿಂದ ಪಾರು ಕಾರ್ಕಳ: ಧರ್ಮಸ್ಥಳದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ…

12 hours ago

ಸಮುದ್ರದ ಅಬ್ಬರ ಹೆಚ್ಚಳ ಸಾಧ್ಯತೆ: ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ – vishwanews24

ಸಮುದ್ರದ ಅಬ್ಬರ ಹೆಚ್ಚಳ ಸಾಧ್ಯತೆ: ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ಮಂಗಳೂರು: ಕರಾವಳಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗುವ…

12 hours ago

ಪಾಟ್ನಾ: ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ : ತಪ್ಪಿದ ಭಾರೀ ಅನಾಹುತ – vishwanews24

ಪ್ಯಾಸೆಂಜರ್​​​​ ರೈಲಿನಲ್ಲಿ ಆಕಸ್ಮಿಕ ಬೆಂಕಿ ಅವಘಡ :ತಪ್ಪಿದ ಭಾರೀ ಅನಾಹುತ ಪಾಟ್ನಾ: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳಲು…

15 hours ago