ದರ್ಶನ್ ಅವರ ಜೊತೆ ದ್ವೇಷವಿಲ್ಲ, ಅವರಂಥ ದೊಡ್ಡ ನಟರನ್ನು ಕಡೆಗಣಿಸುವಂಥ ವ್ಯಕ್ತಿ ನಾನಲ್ಲ : ನಿಖಿಲ್ ಕುಮಾರಸ್ವಾಮಿ -Vishwanews24
ಬೆಂಗಳೂರು : ದರ್ಶನ್ ಅವರ 50ನೇ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದು ನನಗೆ ಖುಷಿ ಕೊಟ್ಟಿದೆ. ನಮ್ಮಿಬ್ಬರಲ್ಲಿ ದ್ವೇಷವಿಲ್ಲ; ಸ್ನೇಹವಿದೆ. ವೃತ್ತಿಯ ಬಗ್ಗೆ ಪರಸ್ಪರರಲ್ಲಿ ಗೌರವವಿದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಅವರಂಥ ದೊಡ್ಡ ನಟರನ್ನು ಕಡೆಗಣಿಸುವಂಥ ವ್ಯಕ್ತಿ ನಾನಲ್ಲ. ನಾನು ಸಿನಿಮಾರಂಗ ಮತ್ತು ರಾಜಕೀಯ ಕೆಲಸಗಳಲ್ಲಿ ಬ್ಯುಸಿ ಇದ್ದೆ. ಹೀಗಾಗಿ ಕುರುಕ್ಷೇತ್ರ ಚಿತ್ರಕ್ಕೆ ಡಬ್ಬಿಂಗ್ ಮಾಡುವುದು ಲೇಟ್ ಆಯಿತು ಅಷ್ಟೇ. ಆದರೆ, ಈ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳ ಬಗ್ಗೆ ಬೇಸರವಿದೆ” ಎಂದಿದ್ದಾರೆ ನಿಖಿಲ್.
ಅಷ್ಟೇ ಅಲ್ಲ, “ದರ್ಶನ್ ಅವರಿಗೂ ನನಗೂ ದ್ವೇಷವಿದೆ, ಈ ಕಾರಣಕ್ಕೆ ನಾನು ಡಬ್ಬಿಂಗ್ ಮಾಡಿಲ್ಲ ಎನ್ನವುದೆಲ್ಲ ಶುದ್ಧ ಸುಳ್ಳು. ಲೋಕಸಭೆ ಚುನಾವಣೆ ಮತ್ತು ಪಕ್ಷದ ಕೆಲಸಗಳ ಮಧ್ಯೆ ಬಿಡುವು ಮಾಡಿಕೊಳ್ಳಲು ನನಗೆ ಸಾಧ್ಯವಾಗಿಲ್ಲ. ಹೀಗಾಗಿ ‘ಕುರುಕ್ಷೇತ್ರ’ ಚಿತ್ರಕ್ಕೆ ಡಬ್ಬಿಂಗ್ ಮಾಡುವುದು ಲೇಟ್ ಆಯಿತು ಎನ್ನುವುದಷ್ಟೇ ಸತ್ಯ” ಎಂದಿದ್ದಾರೆ ನಿಖಿಲ್ ಕುಮಾರಸ್ವಾಮಿ.
