ದ.ಸಂ.ಸ ಕಾಪು ತಾಲೂಕು ಸಮಿತಿ ಉದ್ಘಾಟನೆ.
ಕಾಪು ಸೆ.15 – ಹೊಸದಾಗಿ ರಚನೆಗೊಂಡಿರುವ ಕಾಪು ತಾಲೂಕಿನ ದ.ಸಂ.ಸ ಅಂಬೇಡ್ಕರ್ ವಾದ ತಾಲೂಕು ಸಮಿತಿಯ ನೂತನ ಶಾಖೆಯನ್ನು ಕಾಪು ಪುರಸಭೆಯ ಮುಖ್ಯಾಧಿಕಾರಿ ಶ್ರೀ ರಾಯಪ್ಪನವರು ಉದ್ಘಾಟಿಸಿದರು.
ದಲಿತರು ಶಿಕ್ಷಣದ ಮೂಲಕ ಸದೃಡರಾಗಿ – ಶ್ರೀ ರಾಯಪ್ಪ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ರಾಯಪ್ಪನವರು, ದಲಿತರು ಅಂಬೇಡ್ಕರರ ಶಿಕ್ಷಣವೆಂಬ ಮೂಲಮಂತ್ರದ ಮೂಲಕ ಮುನ್ನಡೆದು ಸಡೃದ ಸಮಾಜದ ಕತೃಗಳಾಗಬೇಕು. ದಲಿತರು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುವಲ್ಲಿ ತಾಂತ್ರಿಕ ದೋಷಗಳು ಇದ್ದು,ಮುಂದಿನ ದಿನಗಳಲ್ಲಿ ದ.ಸಂ.ಸ ಕಾಪು ತಾಲೂಕು ಸಮಿತಿ ಮುಂದಿನ ದಿನಗಳಲ್ಲಿ ಕಾರ್ಯಯೋಚನೆಗಳನ್ನು ಮಾಡುವಂತಾಗಳಿ ಎಂದು ಶುಭಾಶಯಗಳನ್ನು ನೀಡಿದರು.
ಸಂವಿಧಾನದ ಔಕಟ್ಟಿನೊಳಗೆ ಹೋರಾಟ ಮುಂದುವರಿಯಲಿ. – ಮಹೇಶ್ ಪ್ರಸಾದ್
ಮುಖ್ಯಅತಿಥಿಯಾಗಿ ಮಾತನಾಡಿದ ಕಾಪು ವೃತ್ತ ನಿರೀಕ್ಷಕರಾದ ಶ್ರೀ ಮಹೇಶ್ ಪ್ರಸಾದ್,”ಅಂಬೇಡ್ಕರರ ಸಂವಿಧಾನದ ಪರಿಧಿಯೊಳಗೆ ಕಾನೂನು ಪಾಲಣೆಯೊಂದಿಗೆ ದಲಿತರ ಹಿತರಕ್ಷಣೆ ಕಾಪಾಡುವಂತಗಾಲಿ”ಎಂದರು.
ದಲಿತರ ಸಾಮಾಜಿಕ ನ್ಯಾಯಕ್ಕೆ, ತಮ್ಮ ವ್ಯಾಪ್ತಿಯಿಂದ ಸಂವಿಧಾನದ ಬದ್ದವಾಗಿ ಸಹಕಾರ ನೀಡುವುದರೊಂದಿಗೆ ಕಂದಾಯ ಇಲಾಖ ವ್ಯಾಪ್ತಿಯ ಸಮಸ್ಯೆಗಳ ಪರಿಹಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಕಾಪು ತಾಲೂಕು ತಹಶೀಲ್ದಾರ್ ಶ್ರೀ ಮಹಮ್ಮದ್ ಇಶಾಕ್ ಹೇಳಿದರು.
ವಿದ್ಯಾರ್ಥಿ ಒಕ್ಕೂಟದ ರಾಜ್ಯ ಸಮಿತಿ ಪ್ರಾ.ಕಾರ್ಯದರ್ಶಿ ಶ್ರೀ ಎಸ್ ಎಸ್ ಪ್ರಸಾದ್ ಪ್ರಾಸ್ತಾವಿಕ ಮಾತಾನ್ನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಪ್ರಾ.ಸಂಚಾಲಕ ಸುಂದರ್ ಮಾಸ್ಟರ್ ಹೊಸ ಪದಾಧಿಕಾರಿಗಳಿಗೆ ಪ್ರಮಾಣ ವಚನ ಮಾಡಿದರು.
ಸಮಾಜ ಸೇವಕ ಕಾಪು ಲೀಲಾದರ ಶೆಟ್ಟಿ,ತಾಲೂಕು ಸಮಿತಿ ಪ್ರಾ.ಸಂಚಾಲಕ ಲೋಕೇಶ್ ಅಂಚನ್, ಹಿರಿಯ ಹೋರಾಟಗಾರ ಸುಂದರ್ ಗುಜ್ಜಾರ್ ಬೆಟ್ಟು,ಮಹಿಳಾ ಸಮಿತಿಯ ವಿಮಲ ಅಂಚನ್ ಸಂದರ್ಬೊಚಿತವಾಗಿ ಮಾತನಾಡಿದರು.
ಜಿಲ್ಲಾ ಸಮಿತಿಯ ಪ್ರಾ.ಸಂಚಾಲಕ ಶ್ರೀ ಸುಂದರ್ ಮಾಸ್ಟರ್ ಅದ್ಯಕ್ಷತೆ ವಹಿಸಿದ್ದರು,ಶ್ರೀ ರಾಜೇಂದ್ರ ನಾಥ್,ಶ್ರೀ ರಾಘವೇಂದ್ರ, ಜಗದೀಶ್ ಕಾಪು ವೇದಿಕೆಯಲ್ಲಿದ್ದರು.
ಶಿವರಾಂ ಕಾಪು ಸ್ವಾಗತಿಸಿ, ಸಂತೋಷ್ ನಂಬಿಯಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ನೀಡಿದರು.
ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯ ಭೀಕರ ಹತ್ಯೆ ಬಂಟ್ವಾಳ : ಯುವತಿಯೊಬ್ಬಳನ್ನು ಚಾಕುವಿಂದ ಹತ್ಯೆ ಮಾಡಿದ ಘಟನೆ ಜುಲೈ…
ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್ ಇಂದಿನಿಂದ IRCTC ಹೊಸ ವೆಬ್‌ಸೈಟ್ ಆರಂಭ: ಇನ್ಮುಂದೆ ಕ್ಷಣಾರ್ಧದಲ್ಲಿ ತತ್ಕಾಲ್ ಟಿಕೆಟ್ ಬುಕಿಂಗ್…
ಭಟ್ಕಳ: ಬೈಕಿಗೆ ಲಾರಿ ಢಿಕ್ಕಿ ; ಸವಾರ ಮೃತ್ಯು ಭಟ್ಕಳ: ಲಾರಿಯೊಂದು ಬೈಕಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್…
ರಾಮಮಂದಿರ ಪ್ರಕರಣವನ್ನು ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿಯೂ ಉಲ್ಲೇಖಿಸುತ್ತಿಲ್ಲ : ವಿನಯ ಕುಮಾರ್ ಸೊರಕೆ ಮಂಗಳೂರು: ರಾಮಮಂದಿರದ ಹುಂಡಿ…
ಉಡುಪಿ : ಗೋಹತ್ಯೆ ನಿಷೇಧ ಕಾಯಿದೆ ಜಾರಿಗೆ ಆಗ್ರಹಿಸಿ ಜುಲೈ 27 ರಂದು ಜಿಲ್ಲಾಧಿಕಾರಿಗೆ ಮನವಿ ಉಡುಪಿ : ಗೋಮಾತೆ…
ಬೆಂಗಳೂರು: ಪ್ರಯಾಣಿಕರ ಸೋಗಿನಲ್ಲಿ ಬಂದು ಬಸ್ ನಿರ್ವಾಹಕರ ಬ್ಯಾಗನ್ನೇ ಎಗಿರಿಸಿದ ಮಹಿಳೆ ಬೆಂಗಳೂರು: ಬಸ್ ಪ್ರಯಾಣಿಕರ ಸೋಗಿನಲ್ಲಿ ಬಂದು ಅತ್ಯಂತ…