ದೀದಿ ಗೆ ಬಿಗ್ ಶಾಕ್ !! ತೃಣಮೂಲ ಕಾಂಗ್ರೆಸ್ ನ ಇಬ್ಬರು ಶಾಸಕರು, 50 ಕೌನ್ಸಿಲರ್‌ಗಳು ಬಿಜೆಪಿಗೆ -Vishwanews24

Featured, ರಾಷ್ಟ್ರ ನ್ಯೂಸ್

ನವದೆಹಲಿ: ತೃಣಮೂಲ ಕಾಂಗ್ರೆಸ್ನ ಇಬ್ಬರು ಶಾಸಕರು ಮತ್ತು 50 ಮಂದಿ ಕೌನ್ಸಿಲರ್ಗಳು ದೆಹಲಿಯಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾದರು. ಈ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಭಾರೀ ಹಿನ್ನಡೆಯಾಗಿದೆ.

ಇವರೊಂದಿಗೆ 50ಕ್ಕೂ ಹೆಚ್ಚು ಕೌನ್ಸಿಲರ್‌ಗಳು ಕೂಡ ಕಮಲ ಪಾಳಯಕ್ಕೆ ಸೇರಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಬಿಜೆಪಿಯ ಪಶ್ಚಿಮ ಬಂಗಾಳ ಉಸ್ತುವಾರಿ ಕೈಲಾಶ್‌ ವಿಜಯವರ್ಗಿಯ, ” ಹಿಂದೆಯೇ ಪ್ರಧಾನಿ ಮೋದಿ ತೃಣಮೂಲ ಕಾಂಗ್ರೆಸ್‌ಗೆ ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಮಮತಾರನ್ನು ಕಡೆಗಣಿಸಿ ಟಿಎಂಸಿಯ ಹಲವು ಮುಖಂಡರು ಬಿಜೆಪಿಗೆ ಬರುತ್ತಿದ್ದಾರೆ. ಲೋಕಸಭೆ ಚುನಾವಣೆ ಮತದಾನದ ರೀತಿಯಲ್ಲಿ ಏಳು ಹಂತಗಳಲ್ಲಿ ಟಿಎಂಸಿ ಸದಸ್ಯರು ಬಿಜೆಪಿಗೆ ಬರಲಿದ್ದಾರೆ. ಅದರಲ್ಲಿ ಇದು ಮೊದಲ ಹಂತ ಮಾತ್ರ!” ಎಂದು ಹೇಳಿದರು.

ಚುನವಣಾ ಪ್ರಚಾರ ವೇಳೆ ಹೂಗ್ಲಿ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ” ಮೇ 23ರಂದು ಬಂಗಾಳದ ತುಂಬೆಲ್ಲ ಕಮಲ ಅರಳಿದಾಗ, ನಿಮ್ಮ ಶಾಸಕರು ನಿಮ್ಮನ್ನು ಕಡೆಗಣಿಸಿ ಓಡಿಹೋಗುವುದನ್ನು ನೀವು (ದೀದಿ) ಕಾಣುತ್ತೀರಿ. ಈಗಾಗಲೇ ನಿಮ್ಮ 40 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ” ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಎಚ್ಚರಿಕೆ ನೀಡಿದ್ದರು.

ಶಾರದಾ ಚಿಟ್‌ ಫಂಡ್‌ ಹಗರಣ ಸಂಬಂಧ ತಮ್ಮ ಆಪ್ತ ಹಾಗೂ ಕೋಲ್ಕೊತಾ ಪೊಲೀಸ್‌ ಮಾಜಿ ಆಯುಕ್ತ ರಾಜೀವ್‌ ಕುಮಾರ್‌ ಮೇಲೆ ಸಿಬಿಐ ದಾಳಿ ಆದಾಗ, ದೀದಿ ರಸ್ತೆಗಿಳಿದು ಪ್ರಧಾನಿ ಮೋದಿ ವಿರುದ್ಧ ಪ್ರತಿಭಟಿಸಿದ್ದರು. ಚುನಾವಣೆ ವೇಳೆ ಪ್ರಚಾರಕ್ಕಾಗಿ ಬರಲು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಹೆಲಿಕಾಪ್ಟರ್‌ ಇಳಿಸಲು ಅನುಮತಿ ಕೋರಿದಾಗ ದೀದಿ ನಿರಾಕರಿಸಿದ್ದರು.  ಎಂದು ಪ್ರಧಾನಿ ಮೋದಿ ಅವರು ಚುನಾವಣಾ ಪ್ರಚಾರದ ವೇಳೆ ಹೇಳಿದ್ದರು. ಕೌನ್ಸಿಲರ್ ಗಳ ಪಕ್ಷಾಂತರದಿಂದ ಮಮತಾ ಬ್ಯಾನರ್ಜಿಗೆ ಭಾರೀ ಹಿನ್ನೆಡೆ ಉಂಟಾಗಿದೆ ಎನ್ನಲಾಗಿದೆ.