Featured

ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕನ್ನಡದ ಮೊದಲ ನಟ ಕಿಚ್ಚ ಸುದೀಪ್ – Vishwanews24

ದುಬೈನಲ್ಲಿ ಗೋಲ್ಡನ್ ವೀಸಾ ಪಡೆದ ಕನ್ನಡದ ಮೊದಲ ನಟ ಕಿಚ್ಚ ಸುದೀಪ್

ಬೆಂಗಳೂರು, : ಕಿಚ್ಚ ಸುದೀಪ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೋಲ್ಡನ್ ವೀಸಾ ದೊರಕಿದೆ. ಈ ಮೂಲಕ ಬಾಲಿವುಡ್ ತಾರೆಯರಾದ ಶಾರುಖ್ ಖಾನ್, ರಣವೀರ್ ಸಿಂಗ್ ಮತ್ತು ಸಂಜಯ್ ದತ್ ಸಾಲಿಗೆ ಸುದೀಪ್‌ ಸಹ ಸೇರಿದ್ದಾರೆ.

ಗೋಲ್ಡನ್‌ ವೀಸಾ ಪಡೆದ ಕನ್ನಡದ ಮೊದಲ ನಟ ಎಂಬ ಕೀರ್ತಿಗೆ ಸುದೀಪ್‌ ಪಾತ್ರರಾಗಿದ್ದಾರೆ. ಇದು 10 ವರ್ಷಗಳ ದೀರ್ಘಾವಧಿಯ ಗೋಲ್ಡನ್ ವೀಸಾ ಆಗಿದ್ದು, ಸುದೀಪ್ ಅವರು ದುಬೈ ಮತ್ತು ಯುಎಇಯ ಇತರ ಆರು ಎಮಿರೇಟ್‌ಗಳಿಗೆ ಅವರು ಬಯಸಿದಾಗ ಮತ್ತು ಭೇಟಿ ನೀಡಲು ಅನುವು ಮಾಡಿಕೊಡುತ್ತದೆ. ಯುಎಇಯ ಆರ್ಥಿಕತೆಗೆ ಕೊಡುಗೆ ನೀಡಬಹುದಾದ ಪ್ರಸಿದ್ಧ ವ್ಯಕ್ತಿಗಳು, ಉದ್ಯಮಿಗಳು ಮತ್ತು ಇತರ ವರ್ಗದ ವಿದೇಶಿ ನಾಗರಿಕರಿಗೆ ಗೋಲ್ಡನ್ ವೀಸಾವನ್ನು ಒದಗಿಸಲಾಗುತ್ತದೆ.

2019 ರಿಂದ ವಿದೇಶಿಯರಿಗೆ ಗೋಲ್ಡನ್ ವೀಸಾವನ್ನು ಯುಎಇ ಸರ್ಕಾರ ನೀಡುತ್ತಾ ಬಂದಿದೆ. ಇದರಿಂದ ವಿದೇಶಿಯರು ಯುಎಇನಲ್ಲಿ ಯಾವುದೇ ಅನುಮತಿ ಇಲ್ಲದೆ ವಿದ್ಯಾಭ್ಯಾಸ, ಕೆಲಸ, ಉದ್ಯಮ ನಡೆಸಬಹುದಾಗಿದೆ. ಗೋಲ್ಡನ್ ವೀಸಾದಿಂದ ವಿದೇಶಿ ಹೂಡಿಕೆದಾರರು ಮತ್ತು ಉದ್ಯಮಿಗಳು ಯುಎಇನಲ್ಲಿ ಸಂಪೂರ್ಣ ಮಾಲೀಕತ್ವದಲ್ಲಿ ಉದ್ಯಮ ನಡೆಸಬಹುದಾಗಿದೆ.

5 ಅಥವಾ 10 ವರ್ಷಗಳ ಅವಧಿಗೆ ಗೋಲ್ಡನ್ ವೀಸಾ ನೀಡುತ್ತಾರೆ. ಆ ಬಳಿಕ ಅದನ್ನು ನವೀಕರಿಸಿಕೊಳ್ಳಬಹುದು.ಯುಎಇ ಗೋಲ್ಡನ್ ವೀಸಾ ಹೊಂದಿರುವ ಇತರ ಭಾರತೀಯ ಸೆಲೆಬ್ರಿಟಿಗಳಲ್ಲಿ ಮೋಹನ್ ಲಾಲ್, ಮಮ್ಮುಟ್ಟಿ, ಸುನಿಲ್ ಶೆಟ್ಟಿ ಮತ್ತು ಸೋನು ನಿಗಮ್ ಸೇರಿದ್ದಾರೆ. ಕೇವಲ ಭಾರತೀಯರಿಗೆ ಮಾತ್ರವಲ್ಲದೆ ವಿಶ್ವದಾದ್ಯಂತ 40 ಕ್ಕೂ ಹೆಚ್ಚು ಸೆಲೆಬ್ರಿಟಿಗಳಿಗೆ ಯುಎಇ ಗೋಲ್ಡನ್ ವೀಸಾ ನೀಡಿದೆ.

ಉಳ್ಳಾಲ: ಕಮರಿಗೆ ಉರುಳಿದ ರಿಕ್ಷಾ ; ಚಾಲಕ ಸಾವು – Vishwanews24

Vishwa News 24

Recent Posts

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ – vishwanews24

ಅ.1 ರಿಂದ ಜನನ ಮತ್ತು ಮರಣ ನೋಂದಣಿ ವಿಳಂಬಕ್ಕೆ ಹೊಸ ನಿಯಮ ಜಾರಿಗೆ ನವದೆಹಲಿ: ಜನನ ಮತ್ತು ಮರಣ ನೋಂದಣಿಯನ್ನು ವಿಳಂಬವಾಗಿ…

15 hours ago

ರೇಷನ್ ಕಾರ್ಡ್​ ಇ-ಕೆವೈಸಿ ದಿನಾಂಕ ವಿಸ್ತರಣೆ: ಸರ್ಕಾರದಿಂದ ಮಹತ್ವದ ಆದೇಶ – vishwanews24

ರಾಜ್ಯ ಸರ್ಕಾರ ಪಡಿತರ ಕಾರ್ಡ್​ದಾರರಿಗೆ ಬಿಗ್ ಗುಡ್​ ನ್ಯೂಸ್ ಇ-ಕೆವೈಸಿಗೆ ಅಕ್ಟೋಬರ್ 20ರವರೆಗೆ ಗಡುವು ವಿಸ್ತರಣೆ ನ್ಯಾಯಬೆಲೆ ಅಂಗಡಿಗಳ ವೇಳಾಪಟ್ಟಿ…

16 hours ago

ಗಣಪತಿ ಮೆರವಣಿಗೆ ವಿಚಾರಕ್ಕೆ ಧಮ್ಕಿ : ಇನ್ಸ್‌ಪೆಕ್ಟರ್‌ ಯಾವುದೇ ತಪ್ಪು ಮಾಡಿಲ್ಲ : ಯತೀಂದ್ರ ಸಿದ್ದರಾಮಯ್ಯ – vishwanews24

ಇನ್ಸ್‌ಪೆಕ್ಟರ್‌ ಧನಂಜಯ್ ಯಾವುದೇ ತಪ್ಪು ಮಾಡಿಲ್ಲ; ಅವರು ಬುದ್ಧಿವಾದ ಹೇಳಿದ್ದಾರೆ  ತಪ್ಪೇ ಮಾಡದ ಇನ್ಸ್‌ಪೆಕ್ಟರ್‌ ಮೇಲೆ ಕ್ರಮ ಯಾಕೆ ತೆಗೆದುಕೊಳ್ಳಬೇಕು..…

16 hours ago

ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ – vishwanews24

ಕುಂದಾಪುರ : ಬೇಳೂರು ಗ್ರಾ.ಪಂ.ಗೆ ಲೋಕಾಯುಕ್ತ ದಾಳಿ ; ಕಡತಗಳ ಪರಿಶೀಲನೆ ಉಡುಪಿ: ಕಟ್ಟಡ ಪರವಾನಗಿ ನೀಡುವಲ್ಲಿ ವಿಳಂಬ ಸೇರಿದಂತೆ…

16 hours ago

‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ – vishwanews24

'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸಿದ ಹಿರಿಯ ನಟ ಅನಂತ್ ನಾಗ್ ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನೀಡಿದ ಅಪಾರ…

18 hours ago

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ – vishwanews24

ಕೊಣಾಜೆ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ; ಅದೃಷ್ಟವಶಾತ್ ತಪ್ಪಿದ ಭಾರಿ ದುರಂತ ಕೊಣಾಜೆ  : ಚಾಲಕನ ನಿಯಂತ್ರಣ…

18 hours ago