ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ರೈತರು ಕಾರಣರಲ್ಲ : ಹೆಚ್‌ ಡಿ ದೇವೇಗೌಡ -Vishwanews24

Featured, ರಾಜ್ಯ ನ್ಯೂಸ್

ದೆಹಲಿಯಲ್ಲಿ ನಡೆದ ಹಿಂಸಾಚಾರಕ್ಕೆ ರೈತರು ಕಾರಣರಲ್ಲ : ಹೆಚ್‌ ಡಿ ದೇವೇಗೌಡ -Vishwanews24 –

ನವದೆಹಲಿ : ‘ಗಣರಾಜ್ಯೋತ್ಸವದಂದು ಕೆಲವು ಕಿಡಿಗೇಡಿಗಳು ಮಾಡಿದ ಕೃತ್ಯಗಳನ್ನು ನಾವು ಖಂಡಿಸುತ್ತೇವೆ, ಆದರೆ ಅದಕ್ಕೆ ರೈತರು ಕಾರಣರಲ್ಲ. ಅವರಿಗೆ ಶಿಕ್ಷೆ ನೀಡಬಾರದು ಎಂದು ರಾಜ್ಯಸಭೆಯಲ್ಲಿ ಸದಸ್ಯ ಹೆಚ್‌ ಡಿ ದೇವೇಗೌಡ ಹೇಳಿದ್ದಾರೆ.

ಪ್ರತಿಭಟನಾ ಸ್ಥಳದಲ್ಲಿ ಕಾಂಕ್ರೀಟ್ ಗೋಡೆಗಳನ್ನು ಹಾಕುವ ಕೇಂದ್ರದ ನಿರ್ಧಾರ ದಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಸರ್ಕಾರ ಈ ವಿಷಯವನ್ನು ಶಾಂತಿಯುತವಾಗಿ ಕೊನೆಗೊಳಿಸಬೇಕು’ ಎಂದು ಜೆಡಿಎಸ್ ನ ಎಚ್ ಡಿ ದೇವೇಗೌಡ ಆಗ್ರಹಿಸಿದರು.

ಒಬ್ಬ ರೈತನಾಗಿ ನಾನು ರೈತರ ಸಮಸ್ಯೆಗಳನ್ನು ಅರಿತಿದ್ದೇನೆ. ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದು, ಕೇಂದ್ರ ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸಬೇಕು. ರೈತರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ಪ್ರಯತ್ನಿಸಬೇಕು ಎಂದು ಹೇಳಿದರು.

ಇನ್ನು ಕಾವೇರಿ ಹೋರಾಟದ ಬಗ್ಗೆ ಮಾತನಾಡಿದ ಅವರು ಕಾವೇರಿಗಾಗಿ ನಾವು ತಮಿಳುನಾಡು, ಕೇರಳ ಜೊತೆ ಹೋರಾಟ ಮಾಡುತ್ತಲೇ ಇದ್ದೇವೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಗಮನ ಹರಿಸಬೇಕು ಎಂದು ಹೆಚ್​ಡಿಡಿ ಒತ್ತಾಯಿಸಿದ್ದಾರೆ.

ಸಿನೆಮಾ ನಟ-ನಟಿಯರು ಬೀದಿಗಿಳಿದು ಹೋರಾಟ ನಿರತ ರೈತರನ್ನು ಬೆಂಬಲಿಸಬೇಕು : ಸಿದ್ದರಾಮಯ್ಯ ಮನವಿ -Vishwanews24