ನವದೆಹಲಿ: ಅಕ್ಷರ ಸಂತ ಹರೇಕಳ ಹಾಜಬ್ಬ ಸೇರಿದಂತೆ ಇಂದು 119 ಜನರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ’ಪದ್ಮ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 7 ಪದ್ಮವಿಭೂಷಣ, 10 ಪದ್ಮಭೂಷಣ, 102 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಗಿದೆ. ಪ್ರಶಸ್ತಿ ಪಡೆದವರಲ್ಲಿ 29 ಮಹಿಳೆಯರು, ಒಬ್ಬರು ತೃತೀಯ ಲಿಂಗಿ ಸೇರಿದ್ದಾರೆ.
ಜಾನಪದ ಕಲಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ಮಾಡಿರುವ ಮಂಜಮ್ಮ ಜೋಗತಿ, ಮಂಗಳೂರಿನ ಪೊಸಪಡ್ಪು ಎಂಬ ಕುಗ್ರಾಮದಲ್ಲಿ ಶಾಲೆ ನಿರ್ಮಾಣ ಮಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿದ ಹರೇಕಳ ಹಾಜಬ್ಬ,ವೃಕ್ಷಮಾತೆ’ ಎಂದೇ ಖ್ಯಾತಿಯಾಗಿರುವ, 80ರ ಆಸುಪಾಸಿನ ತುಳಸಿ ಗೋವಿಂದ ಗೌಡ, ಸೇರಿದಂತೆ ರಾಜ್ಯದ ಎಂಟು ಮಂದಿ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಪೇಜಾವರ ಶ್ರೀ, ಡಾ. ಬಿ. ಎಂ. ಹೆಗ್ಡೆ, ಜಪಾನ್ನ ಮಾಜಿ ಪ್ರಧಾನಿ ಶಿಂಬೊ ಅಬೆ, ಗಾಯಕ ಎಸ್. ಪಿ. ಬಾಲಸುಬ್ರಮಣ್ಯಂ (ಮರಣೋತ್ತರ), ನರಿಂದರ್ ಸಿಂಗ್ ಕಪಾನಿ (ಮರಣೋತ್ತರ), ಮೌಲಾನಾ ವಹೀದುದ್ದೀನ್ ಖಾನ್, ಬಿ. ಬಿ. ಲಾಲ್, ಸುದರ್ಶನ್ ಸಾಹೋ ಪದ್ಮವಿಭೂಷಣ ಪ್ರಶಸ್ತಿ ಪಡೆದಿದ್ದಾರೆ.
ಕೃಷ್ಣನ್ ನಾಯರ್ ಶಾಂತಾ ಕುಮಾರಿ ಚಿತ್ರಾ, ತರುಣ್ ಗೊಗಯ್ (ಮರಣೋತ್ತರ), ಚಂದ್ರ ಶೇಖರ ಕಂಬಾರ, ಸುಮಿತ್ರಾ ಮಹಾಜನ್, ನೃಪೇಂದ್ರ ಮಿಶ್ರಾ, ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ), ಕೇಶುಭಾಯ್ ಪಟೇಲ್ (ಮರಣೋತ್ತರ), ಕಲ್ಬೆ ಸಾದಿಕ್ (ಮರಣೋತ್ತರ), ರಜನಿಕಾಂತ್ ದೇವಿದಾಸ್ ಶ್ರಾಫ್, ತರ್ಲೋಚನ್ ಸಿಂಗ್ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. ಸಿನಿ ರಂಗದಲ್ಲಿ ಕಂಗನಾ ರಣಾವತ್, ಕರಣ್ ಜೋಹರ್ ಅವರಿಗೂ ಪದ್ಮಶ್ರೀ ದೊರೆತಿದೆ.
ರಾಜ್ಯದ 8 ಸಾಧಕರಿಗೆ ಪದ್ಮಶ್ರೀ, ಪೇಜಾವರ ಶ್ರೀಗಳಿಗೆ ಪದ್ಮ ವಿಭೂಷಣ
ಪದ್ಮವಿಭೂಷಣ ಪ್ರಶಸ್ತಿ ಜಪಾನ್‌ನ ಮಾಜಿ ಪ್ರಧಾನಿ ಶಿಂಬೊ ಅಬೆ, ಕರ್ನಾಟಕದ ಡಾ. ಬಿ. ಎಂ. ಹೆಗ್ಡೆ, ಗಾಯಕ ಎಸ್. ಪಿ. ಬಾಲಸುಬ್ರಮಣ್ಯಂ (ಮರಣೋತ್ತರ), ನರಿಂದರ್ ಸಿಂಗ್ ಕಪಾನಿ (ಮರಣೋತ್ತರ), ಮೌಲಾನಾ ವಹೀದುದ್ದೀನ್ ಖಾನ್, ಬಿ. ಬಿ. ಲಾಲ್, ಸುದರ್ಶನ್ ಸಾಹೋ ಪದ್ಮವಿಭೂಷಣ ಪ್ರಶಸ್ತಿ ಪಡೆದ ಸಾಧಕರು.
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಗೌರವ
ಪದ್ಮಭೂಷಣ ಕೃಷ್ಣನ್ ನಾಯರ್ ಶಾಂತಾ ಕುಮಾರಿ ಚಿತ್ರಾ, ತರುಣ್ ಗೊಗಯ್ (ಮರಣೋತ್ತರ), ಚಂದ್ರ ಶೇಖರ ಕಂಬಾರ, ಸುಮಿತ್ರಾ ಮಹಾಜನ್, ನೃಪೇಂದ್ರ ಮಿಶ್ರಾ, ರಾಮ್ ವಿಲಾಸ್ ಪಾಸ್ವಾನ್ (ಮರಣೋತ್ತರ), ಕೇಶುಭಾಯ್ ಪಟೇಲ್ (ಮರಣೋತ್ತರ), ಕಲ್ಬೆ ಸಾದಿಕ್ (ಮರಣೋತ್ತರ), ರಜನಿಕಾಂತ್ ದೇವಿದಾಸ್ ಶ್ರಾಫ್, ತರ್ಲೋಚನ್ ಸಿಂಗ್ ಪದ್ಮಭೂಷಣ ಪ್ರಶಸ್ತಿ ಪಡೆದವರು.
ಪದ್ಮಶ್ರೀ ಪ್ರಶಸ್ತಿ ಪಡೆದ ಕನ್ನಡಿಗರು 102 ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಕರ್ನಾಟಕದ ಮಾತಾ ಬಿ. ಮಂಜಮ್ಮ ಜೋಗತಿ (ಕಲೆ), ರಂಗಸ್ವಾಮಿ ಲಕ್ಷ್ಮಿನಾರಾಯಣ ಕಶ್ಯಪ್ (ಸಾಹಿತ್ಯ ಮತ್ತು ಶಿಕ್ಷಣ), ಕೆ. ವೈ. ವೆಂಕಟೇಶ್ (ಕ್ರೀಡೆ) ಪದ್ಮಶ್ರೀ ಪ್ರಶಸ್ತಿ ಪಡೆದ ಸಾಧಕರು.
ಕುಂದಾಪುರ: ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ ಕುಂದಾಪುರ: ತಾಲೂಕಿನ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ…
ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ ರೂ.8 ಹೆಚ್ಚಳ ಮಾಡಿ : ಮುಖ್ಯಮಂತ್ರಿಗೆ ಹಾಲು ಉತ್ಪಾದಕರ ಒಕ್ಕೂಟಗಳ ಮನವಿ…
ಮೋದಿಯನ್ನು ಭೇಟಿ ಮಾಡಿದ ಪೇಜಾವರ ಶ್ರೀ: ವಿಶ್ವೇಶತೀರ್ಥರ ಜನ್ಮ ಶತಾಬ್ದಿ ಲಾಂಛನ ಬಿಡುಗಡೆ ನವದೆಹಲಿ/ಉಡುಪಿ: ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ…
ಉಳ್ಳಾಲ: ವಿವಾಹಿತ ನೇಣು ಬಿಗಿದುಕೊಂಡು ಆತ್ಮಹತ್ಯೆ ಉಳ್ಳಾಲ: ವಿವಾಹಿತನೋರ್ವ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ…
ವಂದೇ ಮಾತರಂ ಹಾಡುವುದು ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆ ಇಲ್ಲ : ಕೇಂದ್ರಕ್ಕೆ ಸುಪ್ರೀಂ ಮಹತ್ವದ ಸೂಚನೆ ನವದೆಹಲಿ : ವಂದೇ…
ಮಂಗಳೂರು : ಅಕ್ರಮವಾಗಿ ಜಾನುವಾರುಗಳ ಹಿಂಸಾತ್ಮಕ ಸಾಗಾಟ: 17 ಜಾನುವಾರುಗಳ ರಕ್ಷಣೆ ; ಓರ್ವ ಬಂಧನ ಮಂಗಳೂರು: ಅಕ್ರಮವಾಗಿ ಜಾನುವಾರುಗಳನ್ನು…