ಉಡುಪಿ

ದೇವರಿಗಾಗಿ ಕೋರ್ಟ್ ಮೆಟ್ಟಿಲೇರಿದ ಶಿರೂರು ಶ್ರೀಗಳು, ಉಡುಪಿ ಕೃಷ್ಣ ಮಠದಲ್ಲಿ ಏನು ನಡೆಯುತ್ತಿದೆಯೆಂಬ ಆತಂಕದಲ್ಲಿ ಭಕ್ತರು…

ಉಡುಪಿ: ಶೀರೂರು ಮಠದ ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು ಉಡುಪಿಯ ಹಿರಿಯ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯ ಹಾಗೂ ಸಿವಿಲ್‌ ನ್ಯಾಯಾಧೀಶರ ನ್ಯಾಯಾಲಯದಲ್ಲಿ (ಕಿರಿಯ ವಿಭಾಗ) ಬುಧವಾರ ಕೇವಿಯೆಟ್‌ ಅರ್ಜಿ ಸಲ್ಲಿಸಿದ್ದಾರೆ.  ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ಹೊರತು ಆರು ಮಠಗಳ ಎಂಟು ಯತಿಗಳು ಶೀರೂರು ಶ್ರೀಗಳ ವಿರುದ್ಧ ಯಾವುದೇ ದಾವೆ ಹೂಡಿದರೆ ನ್ಯಾಯಾಲಯ ಏಕಪಕ್ಷೀಯ ಮಧ್ಯಂತರ ಆದೇಶ ನೀಡದೆ, ನೋಟಿಸ್‌ ನೀಡಿ ಕೇವಿಯೆಟ್‌ ವಾದ ಆಲಿಸಿ ತೀರ್ಪು ನೀಡಬೇಕು.  ಕೇವಿಯೆಟ್‌ 90 ದಿನಗಳ ಕಾಲ ಅಸ್ತಿತ್ವದಲ್ಲಿ ಇರಲಿದ್ದು, ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶತೀರ್ಥರು, ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥರು, ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶತೀರ್ಥರು, ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರತೀರ್ಥರು, ಸೋದೆ ಶ್ರೀವಿಶ್ವವಲ್ಲಭತೀರ್ಥರು, ಕಾಣಿಯೂರು ಶ್ರೀವಿದ್ಯಾವಲ್ಲಭತೀರ್ಥರು, ಅದಮಾರು ಶ್ರೀವಿಶ್ವಪ್ರಿಯತೀರ್ಥರು, ಕಿರಿಯ ಯತಿ ಶ್ರೀಈಶಪ್ರಿಯತೀರ್ಥರು ಪ್ರತಿವಾದಿಗಳಾಗಿದ್ದಾರೆ.  47 ವರ್ಷಗಳಿಂದ ಶೀರೂರು ಶ್ರೀಲಕ್ಷ್ಮೇವರತೀರ್ಥರು ಯತಿಗಳಾಗಿದ್ದು, ಪ್ರತಿವಾದಿ ಯತಿಗಳು ಶೀರೂರು ಶ್ರೀಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಿ ಏಕಪಕ್ಷೀಯ ಮಧ್ಯಂತರ ಆದೇಶ ಪಡೆದುಕೊಳ್ಳದಂತೆ ಕೇವಿಯೆಟ್‌ ಸಲ್ಲಿಸಲಾಗಿದೆ ಎಂದು ಶೀರೂರು ಶ್ರೀಗಳ ಪರ ಕೇವಿಯೆಟ್‌ ಅರ್ಜಿ ಸಲ್ಲಿಸಿದ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ತಿಳಿಸಿದ್ದಾರೆ. 

ಶೀರೂರು ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು ಶೀರೂರು ಮಠದ ಪಟ್ಟದ ದೇವರಾದ ವಿಠಲ ದೇವರ ಸಹಿತ ಶ್ರೀದೇವಿ, ಭೂದೇವಿಯ ಮೂರ್ತಿಯನ್ನು ಶ್ರೀಕೃಷ್ಣ ಮಠದಲ್ಲಿಡುತ್ತಿದ್ದು, ಅನಾರೋಗ್ಯಕ್ಕೀಡಾದ ಸಂದರ್ಭ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥರು ಹಿರಿಯಡ್ಕದಲ್ಲಿರುವ ಮೂಲ ಮಠದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ್ದರು.  ಶ್ರೀರಾಮ ನವಮಿ ಸಂದರ್ಭ ಪಟ್ಟದ ದೇವರನ್ನು ಶ್ರೀಕೃಷ್ಣ ಮಠಕ್ಕೆ ಒಯ್ದು ಉತ್ಸವ ಬಳಿಕ ಶೀರೂರು ಶ್ರೀ ಮರಳಿಸಿದ್ದರು. ವಿಧಾನಸಭೆ ಚುನಾವಣೆ ಪ್ರಚಾರದ ಜತೆಗೆ ನಾಮಪತ್ರ ಸಲ್ಲಿಸಿ, ಹಿಂತೆಗೆದುಕೊಂಡಿದ್ದ ಶೀರೂರು ಶ್ರೀಗಳು ಇದಕ್ಕೂ ಮೊದಲು ಸಪ್ತ ಮಠಾಧೀಶರ ವಿರುದ್ಧ ಚಾನೆಲ್‌ಗೆ ನೀಡಿದ್ದ ಹೇಳಿಕೆ ಅನ್ಯ ಮಠಾಧೀಶರ ನಡುವೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.  ಶೀರೂರು ಶ್ರೀಗಳು ಬಹಿರಂಗವಾಗಿ ತಾನು ಸನ್ಯಾಸ ಧರ್ಮ ಪಾಲನೆ ಮಾಡದಿರುವುದನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಕ್ಷಮೆ ಯಾಚಿಸಬೇಕೆಂದು ಪಟ್ಟು ಹಿಡಿದಿದ್ದ ಯತಿಗಳು ಬಳಿಕ ಪೂಜೆ ಸಲ್ಲಿಸುವ ನೈತಿಕತೆಯಿಲ್ಲದವರಿಗೆ ಪಟ್ಟದ ದೇವರನ್ನು ಕೊಡಬಾರದು, ಶೀರೂರು ಶ್ರೀಗಳು ಶಿಷ್ಯ ಸ್ವೀಕಾರ ಮಾಡಬೇಕೆನ್ನುವ ಒತ್ತಡ ಹೇರಿದ್ದಾರೆ.  ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಎರಡು ದಶಕಗಳ ಹಿಂದೆ ಅಮೆರಿಕಕ್ಕೆ ಧರ್ಮ ಪ್ರಸಾರ/ಪ್ರಚಾರಕ್ಕೆ ಹೋಗಿ ಬಂದಾಗ ಶಿಷ್ಯ ಸ್ವೀಕಾರದ ಆಗ್ರಹವಿತ್ತು. ವಿದೇಶಕ್ಕೆ ಹೋಗಿ ಬಂದರೂ ಯತಿ ಧರ್ಮ ಪಾಲನೆ ಮಾಡಿದ ಪುತ್ತಿಗೆ ಶ್ರೀಗಳಿಗೆ ಶಿಷ್ಯ ಸ್ವೀಕಾರ ಕೃಷ್ಣಾಪುರ ಮಠಾಧೀಶರಿಂದಾಗಬೇಕು. ಧಾರ್ಮಿಕವಾಗಿ ತೊಡಗಲು ಷರತ್ತು ವಿಧಿಸಲಾಗಿದೆ.  ಆದರೆ ಶೀರೂರು ಶ್ರೀಗಳು ಸನ್ಯಾಸ ಧರ್ಮ ಪಾಲನೆ ಮಾಡದಿರುವುದನ್ನು ಒಪ್ಪಿಕೊಂಡಿದ್ದರಿಂದ ಶಿಷ್ಯ ಸ್ವೀಕಾರ ಮಾಡುವ ತನಕ ಪಟ್ಟದ ದೇವರನ್ನು ಹಿಂತಿರುಗಿಸದಿರಲು ಪೇಜಾವರ ಶ್ರೀವಿಶ್ವೇಶತೀರ್ಥರ ನೇತೃತ್ವದಲ್ಲಿ ಏಳು ಮಠಾಧೀಶರು ನಿರ್ಧಾರ ತಳೆದಿದ್ದಾರೆ.  ಏಳು ಮಠಗಳ ಯತಿಗಳು ಶೀರೂರು ಶ್ರೀಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಏಕಪಕ್ಷೀಯ ಮಧ್ಯಂತರ ಆದೇಶ ಪಡೆಯದಂತೆ ಶೀರೂರು ಶ್ರೀ ಕೇವಿಯೆಟ್‌ ಸಲ್ಲಿಸಿದ್ದರೂ ಅನ್ಯ ಯತಿಗಳು ಪಟ್ಟದ ದೇವರನ್ನು ಹಿಂತಿರುಗಿಸುವ, ಶೀರೂರು ಶ್ರೀ ಶಿಷ್ಯರನ್ನು ಸ್ವೀಕರಿಸಬೇಕೆನ್ನುವ ಆಗ್ರಹದ ವಿಚಾರದಲ್ಲಿ ಯತಿಗಳು ಸಭೆ ನಡೆಸಲು, ಹೇಳಿಕೆ ನೀಡಲು ನ್ಯಾಯಾಲಯದಿಂದ ಹೊರಗೆ ಕ್ರಮ ಕೈಗೊಳ್ಳಲು ಯಾವುದೇ ಅಡ್ಡಿ ಕೇವಿಯೆಟ್‌ನಿಂದಾಗದು. 

“ಶೀರೂರು ಮೂಲಮಠದಲ್ಲಿ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದ ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥರು ಬಳಿಕ ಮೂರ್ತಿಯನ್ನು ಶ್ರೀಕೃಷ್ಣ ಮಠದಲ್ಲಿಟ್ಟು ಮರಳಿಸದೆ ವಿಶ್ವಾಸ ದ್ರೋಹ ಎಸಗಿದ್ದಾರೆ. ಪಟ್ಟದ ದೇವರನ್ನು ಕೊಡದಿದ್ದರೆ ನ್ಯಾಯಾಲಯದ ಮೊರೆ ಹೋಗುವೆ.”  –

ಶ್ರೀಲಕ್ಷ್ಮೇವರತೀರ್ಥ ಶ್ರೀಪಾದರು, ಶೀರೂರು ಮಠ, ಉಡುಪಿ 

Vishwa News 24

Recent Posts

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಸೆ.25ರಂದು ಉಚ್ಚಿಲದಲ್ಲಿ ಮೊಗವೀರ ಕುಲಗುರು ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಡುಪಿ: ದಕ್ಷಿಣ ಕನ್ನಡ ಮೊಗವೀರ ಮಹಾಜನ…

2 days ago

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ : ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! vishwanews24

ಕಾಲೇಜು ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್‌ಗೆ ಸಂಪೂರ್ಣ ನಿಷೇಧ - ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ! ಬೆಂಗಳೂರು : ವಿದ್ಯಾರ್ಥಿಗಳ…

2 days ago

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  – vishwanews24

ಕರ್ನಾಟಕದಲ್ಲಿ ಸೆ.30ರಿಂದ ಸಿನೆಮಾ ಟಿಕೆಟ್ ದರ ಏರಿಕೆ  ಬೆಂಗಳೂರು: ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ಕಾಯ್ದೆ ಜಾರಿಗೊಂಡಿರುವ…

2 days ago

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು – vishwanews24

ಶೃಂಗೇರಿ: ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು ಬೆಂಗಳೂರಿನಿಂದ ಆಗಮಿಸಿದ್ದ ನಾಲ್ವರು ಸ್ನೇಹಿತರು ಚಿಕ್ಕಮಗಳೂರು: ತುಂಗಾ ನದಿಯಲ್ಲಿ…

2 days ago

ಡಿಕೆಶಿ ಮನಸ್ಸು ಮಾಡಿದ್ರೆ ಸ್ವಂತ ಹಣದಲ್ಲೇ ರೈತರ ಸಾಲ ಮನ್ನಾ ಮಾಡಬಹುದು: ಹೆಚ್‌ಡಿಕೆ – vishwanews24

 ಸಂಪಾದನೆ ಮಾಡಿರೋ ಹಣವನ್ನ ಜನರಿಗೆ ಕೊಟ್ರೆ 2028ಕ್ಕೂ ಡಿಕೆ ಶಿ ಸಿಎಂ ಆಗಬಹುದು : ಹೆಚ್‌.ಡಿ ಕುಮಾರಸ್ವಾಮಿ ಬೆಂಗಳೂರು: ಡಿಕೆ…

2 days ago

ಉಡುಪಿ: ತುಳುನಾಡಿನ, ತುಳು ಜನರ ಭಾವನೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬೆಲೆ ಕೊಟ್ಟಿದ್ದಾರೆ : ರಮೇಶ್ ಕಾಂಚನ್ – vishwanews24

ತುಳು ಭಾಷೆಗೆ ಅಧಿಕೃತ ಮಾನ್ಯತೆ: ದಶಕಗಳ ಹೋರಾಟಕ್ಕೆ ಡಿ.ಕೆ. ಶಿವಕುಮಾರ್ ಅವರಿಂದ ಫಲ ಸಿಕ್ಕಿದೆ : ರಮೇಶ್ ಕಾಂಚನ್ ಉಡುಪಿ:…

2 days ago