ದೇವರ ಮುಂದೆ ಕೈಮುಗಿದು ಬೆಳ್ಳಿಯ ಕಿರೀಟವನ್ನೇ ಎಗರಿಸಿದ ಕಳ್ಳ.. vishwanews24

Featured, ರಾಷ್ಟ್ರ ನ್ಯೂಸ್

ಮುಂಬೈ:  ದೇವರ ಮುಂದೆ ಕೈಮುಗಿದು ಕ್ಷಮೆಯಾಚಿಸಿ ದೇವರ ಬೆಳ್ಳಿಯ ಕಿರೀಟವನ್ನೇ ಎಗರಿಸಿದ ಕಳ್ಳ..

ಮುಂಬೈ: ದೇವರ ಮುಂದೆ ಕೈಮುಗಿದು ಕ್ಷಮೆಯಾಚಿಸಿ ದೇವರ ಬೆಳ್ಳಿಯ ಕಿರೀಟವನ್ನೇ ಎಗರಿಸಿದ ಆಘಾತಕಾರಿ ಘಟನೆಯೊಂದು ಮುಂಬೈನ ಬೊರಿವಲಿಯಲ್ಲಿ ಬುಧವಾರ ನಡೆದಿದೆ.

ಬೊರಿವಲಿಯಲ್ಲಿರುವ ವಿಠ್ಠಲ ದೇವಸ್ಥಾನಕ್ಕೆ ಬುಧವಾರ ಸಂಜೆ ಐದು ಗಂಟೆ ಸುಮಾರಿಗೆ ಭಕ್ತನ ರೂಪದಲ್ಲಿ ಬಂದ ವ್ಯಕ್ತಿಯೋರ್ವ ದೇವರ ಎದುರು ಕೈಮುಗಿದು ಏನೋ ಬೇಡಿಕೊಂಡಿದ್ದಾನೆ ಇದಾದ ಬಳಿಕ ಅಲ್ಲಿ ಯಾರೂ ಇಲ್ಲದಿರುವುದನ್ನು ಕಂಡ ಯುವಕ ದೇವರ ಶಿರದ ಮೇಲಿರುವ ಬೆಳ್ಳಿಯ ಕಿರೀಟವನ್ನು ಎಗರಿಸಿ ಕಾಲ್ಕಿತ್ತಿದ್ದಾನೆ.

ಯುವಕ ದೇವಸ್ಥಾನದಲ್ಲಿ ಕಳ್ಳತನ ನಡೆಸಿದ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಕಳ್ಳನ ಕೈಚಳಕಕ್ಕೆ ಜನ ಬೆರಗಾಗಿದ್ದಾರೆ.
ಘಟನೆ ಸಂಬಂಧ ದೇವಳದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಯ ಪತ್ತೆಗೆ ದೇವಸ್ಥಾನದ ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸುತ್ತಿದ್ದಾರೆ.

ಇಂದಿರಾ ಗಾಂಧಿ ಅವರ ಹಸೆರಿಗೆ ಕಳಂಕ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ : ರಮಾನಾಥ ರೈ – vishwanews24

Leave a Reply