ದೇವಸ್ಥಾನಗಳ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಲಾಗಿದೆಯೆ ಎಂಬ ಬಗ್ಗೆ ಅಗತ್ಯವಿದ್ದರೆ ತನಿಖೆ ನಡೆಸಲಾಗುವುದು : ಕೋಟ ಶ್ರೀನಿವಾಸ ಪೂಜಾರಿ -Vishwanews24
ಬೆಂಗಳೂರು: ದೇವಸ್ಥಾನಗಳ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಲಾಗಿದೆಯೆ ಎಂಬ ಬಗ್ಗೆ ಅಗತ್ಯವಿದ್ದರೆ ತನಿಖೆ ನಡೆಸುವುದಾಗಿ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆ ಯೊಂದಕ್ಕೆ ಉತ್ತರಿಸಿದ ಅವರು, ಇಂತಹ ಆರೋಪಗಳು ಕೇಳಿ ಬಂದಿವೆ. ಆದರೆ, ಅನ್ಯ ಕಾರ್ಯಗಳಿಗೆ ಮತ್ತು ಅನ್ಯ ಧರ್ಮಗಳ ಉದ್ದೇಶಗಳಿಗಾಗಿ ಬಳಸಿರುವ ಸಾಧ್ಯತೆ ಇಲ್ಲ , ಆದರೂ ಅಂತಹ ಸಂಶಯಗಳಿಗೆ ಉತ್ತರ ಪಡೆಯಲು ಅಗತ್ಯವಿದ್ದರೆ ತನಿಖೆ ನಡೆಸಲಾಗುವುದು. \ ಎಂದು ಸಚಿವರು ತಿಳಿಸಿದರು.
ಒಂದು ತಿಂಗಳಲ್ಲಿ ರಾಜ್ಯ ಧಾರ್ಮಿಕ ಪರಿಷತ್ತು ಮತ್ತು ಎಲ್ಲ ಜಿಲ್ಲೆಗಳ ಧಾರ್ಮಿಕ ಪರಿಷತ್ತನ್ನು ಪುನರ್ ರಚಿಸಲಾಗುವುದು. ದೇವಸ್ಥಾನಗಳಲ್ಲಿ ಶುಚಿತ್ವ ಕಾಪಾಡಬೇಕು, ಎಲ್ಲ ಹಂತಗಳಲ್ಲೂ ಪಾರದರ್ಶಕತೆ ಇರಬೇಕು. ಧಾರ್ಮಿಕ ನಂಬಿಕೆಗಳಿಗೆ ಒತ್ತುಕೊಟ್ಟು ಪರಿಣಾಮಕಾರಿ ಕೆಲಸ ಮಾಡುವಂತಾಗಬೇಕು ಎಂದು ಹೇಳಿದರು.
ಮುಜರಾಯಿ ದೇವಸ್ಥಾನಗಳ ತಸ್ತೀಕ್ ಹಣ ₹27 ಸಾವಿರದಿಂದ ₹48 ಸಾವಿರಕ್ಕೆ ಏರಿಸಲಾಗಿದೆ. ಇನ್ನು ಮುಂದೆ ಈ ಹಣವನ್ನು ಇ ಆಡಳಿತ ಮೂಲಕ ನೇರವಾಗಿ ದೇವಸ್ಥಾನದ ಖಾತೆಗೆ ಜಮೆ ಮಾಡಲಾಗುವುದು ಎಂದು ಅವರು ತಿಳಿಸಿದರು.
