ದೇವೇಗೌಡರು ಜೆಡಿಎಸ್ ಪಕ್ಷದವರು ಅವರ ಸೋಲಿಗೆ ನಾನೇಕೆ ಕಾರಣ ಆಗುತ್ತೇನೆ? : ಸಿದ್ದರಾಮಯ್ಯ -Vishwanews24
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸೋಲಿಗೆ ನಾನು ಯಾಕೆ ಕಾರಣ ಆಗುತ್ತೇನೆ. ಎಚ್.ಡಿ.ದೇವೇಗೌಡರು ನಮ್ಮ ಪಕ್ಷದವರಲ್ಲ. ಜೆಡಿಎಸ್ ಪಕ್ಷದವರು. ಅವರ ಸೋಲಿನ ಕುರಿತು ಅವರ ಪಕ್ಷದವರನ್ನೇ ಕೇಳಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಅವರು, ಶಾಸಕ ಎಚ್.ವಿಶ್ವನಾಥ್ ಮಂಗಳವಾರ ಕಾಂಗ್ರೆಸ್ ಲೋಕಸಭಾ ಸದಸ್ಯರಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಖೆಡ್ಡಾಕ್ಕೆ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರನ್ನು ತಳ್ಳಲಾಯಿತು. ಆ ಮೂಲಕ ಅವಮಾನಕರ ಸೋಲು ಅನುಭವಿಸುವಂತೆ ಮಾಡಲಾಯಿತು ಎಂಬ ಹೇಳಿಕೆಗೆ ತಿರುಗೇಟು ನೀಡಿದರು.
ತುಮಕೂರಿನಲ್ಲಿ ದೇವೇಗೌಡರ ಸೋಲಿಗೆ ಕಾಂಗ್ರೆಸ್ ಕಾರಣವೆಂದು ಆರೋಪಿಸುವುದಾದರೆ, ಮೈಸೂರಲ್ಲಿ ವಿಜಯ್ಶಂಕರ್ ಸೋಲಿಗೆ ಕಾರಣರಾರು ಎಂದು ಪ್ರಶ್ನಿಸುವ ಮೂಲಕ ಪರೋಕ್ಷವಾಗಿ ಜೆಡಿಎಸ್ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
