ದೇಶಕ್ಕಾಗಿ ಬಜರಂಗದಳ ಕಾರ್ಯಕರ್ತರು ರೌಡಿಯಾಗಲು ಯಾವತ್ತೂ ಸಿದ್ಧ , ಈ ಹೋರಾಟ ನಿರಂತರ : ಸುನಿಲ್.ಕೆ.ಆರ್ – vishwanews24
ದೇಶಕ್ಕಾಗಿ ಬಜರಂಗದಳ ಕಾರ್ಯಕರ್ತರು ರೌಡಿಯಾಗಲು ಯಾವತ್ತೂ ಸಿದ್ಧ , ಈ ಹೋರಾಟ ನಿರಂತರ : ಸುನಿಲ್.ಕೆ.ಆರ್
ಪುತ್ತೂರು: ಹಿಂದೂ ಕಾರ್ಯಕರ್ತರ ವಿರುದ್ಧ ಗಡಿಪಾರು ನೊಟೀಸ್ ನೀಡಿರುವ ಪೊಲೀಸ್ ಇಲಾಖೆ ಕ್ರಮವನ್ನು ಖಂಡಿಸಿ ಪುತ್ತೂರಿನ ಅಮರ್ ಜವಾನ್ ಜ್ಯೋತಿ ವೃತ್ತದ ಬಳಿ ಇಂದು ಬೆಳಿಗ್ಗೆ ವಿಶ್ವಹಿಂದೂ ಪರಿಷತ್, ಬಜರಂಗದಳದಿಂದ ಪ್ರತಿಭಟನೆ ನಡೆಯತು.
ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಬಜರಂಗದಳ ಮುಖಂಡ ಸುನಿಲ್.ಕೆ.ಆರ್ ಅವರು, ದೇಶಕ್ಕಾಗಿ ಬಜರಂಗದಳದ ಕಾರ್ಯಕರ್ತರು ರೌಡಿಯಾಗಲು ಯಾವತ್ತೂ ಸಿದ್ಧವಾಗಿದ್ದಾರೆ. ಬಜರಂಗದಳದ ಕಾರ್ಯಕರ್ತರು ಅತ್ಯಾಚಾರ, ದರೋಡೆ ಮಾಡಿ ರೌಡಿ ಪಟ್ಟ ಕಟ್ಟಿಕೊಂಡವರಲ್ಲ, ಗೋ ಮಾತೆ, ನಮ್ಮ ಅಕ್ಕ-ತಂಗಿಯಂದಿರ ರಕ್ಷಣೆಗಾಗಿ ಕೇಸು ಹಾಕಿಸಿಕೊಂಡವರು. ಈ ಹೋರಾಟಗಳು ನಿರಂತರವಾಗಿ ನಡೆಯಲಿದೆ ಎಂದರು.
ಹಿಂದೂ ಕಾರ್ಯಕರ್ತರನ್ನ ಗಡಿಪಾರು ಮಾಡಿದರೆ ಹಿಂದೂ ಸಂಘಟನೆಗಳನ್ನು ವಿಚಲಿತಗೊಳಿಸಬಹುದು ಎನ್ನುವ ಭ್ರಮೆ ಬೇಡ. ಅಲ್ಪಸಂಖ್ಯಾತರ ತುಷ್ಠೀಕರಣಕ್ಕಾಗಿ ಈ ರೀತಿಯ ಕೃತ್ಯ ಮಾಡಬೇಡಿ. ನಮ್ಮ ಕಾರ್ಯಕರ್ತರನ್ನು ಗಡಿಪಾರು ಮಾಡಿದಲ್ಲಿ ಸಂಘಟನೆಯಿಂದ ದೂರ ಉಳಿಯುತ್ತಾರೆ ಎಂದು ಸರಕಾರ, ಪೊಲೀಸ್ ಇಲಾಖೆ ತಿಳಿದುಕೊಂಡಿದೆ. ಆದರೆ ಇದು ಯಾವತ್ತೂ ಸಾಧ್ಯವಿಲ್ಲ. ಕಾರ್ಯಕರ್ತರ ಮೇಲಿನ ಗಡಿಪಾರು ನೊಟೀಸ್ ತಕ್ಷಣ ವಾಪಾಸು ಪಡೆಯಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ದಿಕ್ಕಾರ ಕೂಗಿದರು.
