ನಂದಿಗ್ರಾಮ: ನಂದಿಗ್ರಾಮ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆ ಬಯಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ತಮ್ಮ ಪ್ರಚಾರ ಅಭಿಯಾನವನ್ನು ಭರ್ಜರಿಯಾಗಿ ಮುಗಿಸಿದರು. ರಾಷ್ಟ್ರಗೀತೆ ಹಾಡುವ ವೇಳೆ ವ್ಹೀಲ್‌ಚೇರ್‌ನಿಂದ ಎದ್ದುನಿಂತು ಗೌರವ ಸೂಚಿಸಿ ಗಮನ ಸೆಳೆದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಮಾಜಿ ಸಹವರ್ತಿ ಸುವೇಂಧು ಅಧಿಕಾರಿ ನಡುವಿನ ಹೋರಾಟದಿಂದಾಗಿ ನಂದಿಗ್ರಾಮ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಗುರುವಾರ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಮುಕ್ತಾಯವಾಯಿತು.
ಇದನ್ನೂ ಓದಿ : ಇನ್ಮುಂದೆ ರೈಲಿನಲ್ಲಿ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಚಾರ್ಜಿಂಗ್ ನಿರ್ಬಂಧ : ಭಾರತೀಯ ರೈಲ್ವೆ -Vishwanews24
ನಾಮಪತ್ರ ಸಲ್ಲಿಕೆ ದಿನ ಕಾಲಿಗೆ ತೀವ್ರ ಗಾಯವಾಗಿದ್ದ ಮಮತಾ ಬ್ಯಾನರ್ಜಿ ವ್ಹೀಲ್‌ಚೇರ್‌ನಲ್ಲಿ ಕುಳಿತೇ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದರು. ತಮ್ಮ ಪ್ರತಿ ಪ್ರಚಾರ ಭಾಷಣದಲ್ಲಿ, “ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ” ಎಂದು ಒತ್ತಿ ಹೇಳಿದ್ದರು.
ಅವರು ರಾಷ್ಟ್ರಗೀತೆ ವೇಳೆ ವ್ಹೀಲ್‌ಚೇರ್‌ನಿಂದ ಎದ್ದು ನಿಲ್ಲುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದನ್ನು ಮಾಸ್ಟರ್‌ಸ್ಟ್ರೋಕ್ ಎಂದು ಬಣ್ಣಿಸಲಾಗಿದೆ.
ಹತ್ತು ವರ್ಷದ ಹಿಂದೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾಗಿದ್ದ ನಂದಿಗ್ರಾಮ, 35 ವರ್ಷಗಳ ಎಡರಂಗ ಸರ್ಕಾರದ ಆಡಳಿತವನ್ನು ಕೊನೆಗೊಳಿಸಿತ್ತು. ಈ ಬಾರಿಯ ಚುನಾವಣೆ ಹೋರಾಟ ಅವರ ವೃತ್ತಿಜೀವನದಲ್ಲೇ ಕಠಿಣ ಹೋರಾಟ ಎಂದು ವಿಶ್ಲೇಷಿಸಲಾಗುತ್ತಿದೆ. ಸುವೇಂಧು ಅಧಿಕಾರಿಗೆ ನಂದಿಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು.
ಎಡರಂಗ ಸರ್ಕಾರ ಭೂಮಿಸ್ವಾಧೀನಪಡಿಸಿಕೊಂಡಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ತಳಮಟ್ಟದ ಸಂಘಟನೆ ಮಾಡಿದ್ದ ಸುವೇಂಧು ಅಧಿಕಾರಿ ತೀರಾ ಇತ್ತೀಚಿನವರೆಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿಕಟವರ್ತಿಯಾಗಿದ್ದರು. ಇತ್ತೀಚೆಗೆ ಬಿಜೆಪಿ ಸೇರುವ ಮೂಲಕ ದೀದಿ ವಿರುದ್ಧ ಸಮರ ಸಾರಿದ್ದರು.
ಇದನ್ನೂ ಓದಿ :ಮಂಗಳೂರು:ಎ.1 ರಿಂದ ಕರಾವಳಿಯ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್ ದರ ಏರಿಕೆ -Vishwanews24
ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…
ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್ಟ್ರಿಮ್ ಡ್ಯಾನ್ಸ್ ಅಕಾಡೆಮಿ…
ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…
ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…
`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ…