Featured

ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ : ಮಮತಾ ಬ್ಯಾನರ್ಜಿ -Vishwanews24

ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ : ಮಮತಾ ಬ್ಯಾನರ್ಜಿ -Vishwanews24

ನಂದಿಗ್ರಾಮ: ನಂದಿಗ್ರಾಮ ಕ್ಷೇತ್ರದಿಂದ ರಾಜ್ಯ ವಿಧಾನಸಭೆಗೆ ಆಯ್ಕೆ ಬಯಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ತಮ್ಮ ಪ್ರಚಾರ ಅಭಿಯಾನವನ್ನು ಭರ್ಜರಿಯಾಗಿ ಮುಗಿಸಿದರು. ರಾಷ್ಟ್ರಗೀತೆ ಹಾಡುವ ವೇಳೆ ವ್ಹೀಲ್‌ಚೇರ್‌ನಿಂದ ಎದ್ದುನಿಂತು ಗೌರವ ಸೂಚಿಸಿ ಗಮನ ಸೆಳೆದರು.

ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಅವರ ಮಾಜಿ ಸಹವರ್ತಿ ಸುವೇಂಧು ಅಧಿಕಾರಿ ನಡುವಿನ ಹೋರಾಟದಿಂದಾಗಿ ನಂದಿಗ್ರಾಮ ಕ್ಷೇತ್ರ ರಾಷ್ಟ್ರದ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಗುರುವಾರ ಮತದಾನ ನಡೆಯಲಿದ್ದು, ಬಹಿರಂಗ ಪ್ರಚಾರ ಮಂಗಳವಾರ ಸಂಜೆ ಮುಕ್ತಾಯವಾಯಿತು.

ಇದನ್ನೂ ಓದಿ : ಇನ್ಮುಂದೆ ರೈಲಿನಲ್ಲಿ ಮೊಬೈಲ್‌ ಹಾಗೂ ಎಲೆಕ್ಟ್ರಾನಿಕ್‌‌ ಉಪಕರಣಗಳ ಚಾರ್ಜಿಂಗ್ ನಿರ್ಬಂಧ : ಭಾರತೀಯ ರೈಲ್ವೆ -Vishwanews24

ನಾಮಪತ್ರ ಸಲ್ಲಿಕೆ ದಿನ ಕಾಲಿಗೆ ತೀವ್ರ ಗಾಯವಾಗಿದ್ದ ಮಮತಾ ಬ್ಯಾನರ್ಜಿ ವ್ಹೀಲ್‌ಚೇರ್‌ನಲ್ಲಿ ಕುಳಿತೇ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದರು. ತಮ್ಮ ಪ್ರತಿ ಪ್ರಚಾರ ಭಾಷಣದಲ್ಲಿ, “ದೇಶಕ್ಕೆ ಬಿಜೆಪಿ ಆಡಳಿತದಿಂದ ಆಗಿರುವ ನೋವಿಗೆ ಹೋಲಿಸಿದರೆ ನನ್ನ ನೋವು ಏನೂ ಅಲ್ಲ” ಎಂದು ಒತ್ತಿ ಹೇಳಿದ್ದರು.

ಅವರು ರಾಷ್ಟ್ರಗೀತೆ ವೇಳೆ ವ್ಹೀಲ್‌ಚೇರ್‌ನಿಂದ ಎದ್ದು ನಿಲ್ಲುವ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇದನ್ನು ಮಾಸ್ಟರ್‌ಸ್ಟ್ರೋಕ್ ಎಂದು ಬಣ್ಣಿಸಲಾಗಿದೆ.

ಹತ್ತು ವರ್ಷದ ಹಿಂದೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣವಾಗಿದ್ದ ನಂದಿಗ್ರಾಮ, 35 ವರ್ಷಗಳ ಎಡರಂಗ ಸರ್ಕಾರದ ಆಡಳಿತವನ್ನು ಕೊನೆಗೊಳಿಸಿತ್ತು. ಈ ಬಾರಿಯ ಚುನಾವಣೆ ಹೋರಾಟ ಅವರ ವೃತ್ತಿಜೀವನದಲ್ಲೇ ಕಠಿಣ ಹೋರಾಟ ಎಂದು ವಿಶ್ಲೇಷಿಸಲಾಗುತ್ತಿದೆ. ಸುವೇಂಧು ಅಧಿಕಾರಿಗೆ ನಂದಿಗ್ರಾಮವನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿತ್ತು.

ಎಡರಂಗ ಸರ್ಕಾರ ಭೂಮಿಸ್ವಾಧೀನಪಡಿಸಿಕೊಂಡಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ತಳಮಟ್ಟದ ಸಂಘಟನೆ ಮಾಡಿದ್ದ ಸುವೇಂಧು ಅಧಿಕಾರಿ ತೀರಾ ಇತ್ತೀಚಿನವರೆಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ನಿಕಟವರ್ತಿಯಾಗಿದ್ದರು. ಇತ್ತೀಚೆಗೆ ಬಿಜೆಪಿ ಸೇರುವ ಮೂಲಕ ದೀದಿ ವಿರುದ್ಧ ಸಮರ ಸಾರಿದ್ದರು.

ಇದನ್ನೂ ಓದಿ :ಮಂಗಳೂರು:ಎ.1 ರಿಂದ ಕರಾವಳಿಯ ತಲಪಾಡಿ, ಹೆಜಮಾಡಿ, ಸಾಸ್ತಾನ ಟೋಲ್‌ ದರ ಏರಿಕೆ -Vishwanews24

Vishwa News 24

Recent Posts

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ -vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ನೂತನ ಬೆಳ್ಳಿರಥ ಸಮರ್ಪಣೆ ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ಪದ್ಮಶ್ರೀ ಆರ್‌.ಎಂ.ಬಿ. ಆರಾಧ್ಯ…

18 minutes ago

ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ -vishwanews24

ಉಡುಪಿ:ಅಕ್ರಮವಾಗಿ ದಂಪತಿಗೆ ಮಗು ಪೂರೈಕೆ : ವೈದ್ಯ ಸಹಿತ ಮೂವರ ಬಂಧನ ಉಡುಪಿ: ಮಗುವಿಲ್ಲದ ದಂಪತಿಗೆ ಕಾನೂನು ಬಾಹಿರವಾಗಿ ಒಂದು…

37 minutes ago

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

3 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

3 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

3 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

3 days ago