ದೇಶದಲ್ಲಿ ಕರಾಳ ಸ್ಥಿತಿ ಈಗ ನಿರ್ಮಾಣವಾಗಿದೆ : ಕೇಂದ್ರ ಸರ್ಕಾರದ ವಿರುದ್ಧ ಎಸ್.ಆರ್. ಹಿರೇಮಠ -Vishwanews24
ರಾಯಚೂರು : ದೇಶದಲ್ಲಿ ಇಂದಿರಾ ಗಾಂಧಿ ತಂದಿದ್ದ ತುರ್ತು ಸ್ಥಿತಿಗಿಂತಲೂ ಕರಾಳ ಸ್ಥಿತಿ ಈಗ ನಿರ್ಮಾಣವಾಗಿದೆ ಎಂದು ಭ್ರಷ್ಟಾಚಾರಿ ವಿರೋಧಿ ಹೋರಾಟಗಾರ ಎಸ್.ಆರ್. ಹಿರೇಮಠ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರ ನೇತೃತ್ವದ ಕೇಂದ್ರ ಸರ್ಕಾರದ ಆಡಳಿತದಲ್ಲಿ ತುರ್ತುಸ್ಥಿತಿಗಿಂತಲೂ 20 ಪಟ್ಟು ಹೆಚ್ಚು ಭೀಕರ ಸ್ಥಿತಿ ಇದೆ. ಸಂಘ ಪರಿವಾರದ ಆಡಳಿತದಲ್ಲಿ ನಡೆದಿರುವ ಹಿಂಸಾಚಾರ ಘಟನೆಗಳ ಕುರಿತು 13 ಪುಟಗಳ ಹೊತ್ತಿಗೆಯನ್ನು ರಾಷ್ಟ್ರಪತಿಯವರಿಗೆ ನೀಡಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಜಮ್ಮುಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370 ವಿಧಿ ರದ್ದು ಕಾನೂನು ವಿರೋಧಿಯಾಗಿದೆ. 370 ವಿಧಿ ಜಾರಿ ಇದ್ದಾಗ ಕಾಶ್ಮೀರದಲ್ಲಿ ಸಾಕಷ್ಟು ಕೆಲಸವಾಗಿದೆ. 370 ವಿಧಿ ಹೋಗಬೇಕಿತ್ತು. ಆದರೆ, ಗನ್ ಹಿಡಿದು ಅದನ್ನು ತೆಗೆದುಹಾಕಿದ್ದು ಸರಿಯಲ್ಲ ಎಂದು ಟೀಕಿಸಿದರು. ದೇಶದಲ್ಲಿ ತುರ್ತುಸ್ಥಿತಿಗಿಂತಲೂ ಈಗ ಕರಾಳ ಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರದ ವಿರುದ್ಧ ಎಸ್.ಆರ್. ಹಿರೇಮಠ ವಾಗ್ದಾಳಿ ನಡೆಸಿದ್ದಾರೆ.
