ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ : ಕುಮಾರಸ್ವಾಮಿ -Vishwanews24

Featured, ರಾಜ್ಯ ನ್ಯೂಸ್

ಹಾಸನ: ದೇಶದ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ದೇಶದ ನಾಗರಿಕರು ದಾರಿ ತಪ್ಪಿ ಹೋಗುತ್ತಿದ್ದಾರೆ.  ಬ್ರಿಟಿಷ್ ಆಳ್ವಿಕೆಯಲ್ಲಿ ಇಂತಹ ಸ್ಥಿತಿ ಇರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಎಲ್ಲ ಅನ್ಯಾಯ, ಅಕ್ರಮಗಳ ವಿರುದ್ಧ ಹೋರಾಡಲು ಯಾರಾದರೂ ನಾಯಕತ್ವ ವಹಿಸಿಕೊಳ್ಳಬೇಕಾಗಿದೆ. ದೇವೇಗೌಡರು ಕರ್ನಾಟಕ ಬಿಡಬೇಕು. ನಾವು ಜೆಪಿ ಮಟ್ಟದಲ್ಲಿ ಇರದಿದ್ದರೂ ಯಾರಾದರೂ ನಾಯಕತ್ವ ಹೊರದಿದ್ದರೆ ಸಾಧ್ಯವಿಲ್ಲ ಎಂದರು.

ನಮ್ಮ ಕುಟುಂಬದವರು ಕೈಗೊಂಡ ಕೆಲವು ನಿರ್ಧಾರಗಳು ತಪ್ಪಾಗಿರಬಹುದು. ಆದರೆ ನಾವು ರಾಜ್ಯಕ್ಕೆ ತೊಂದರೆಯಾಗುವ ನಿರ್ಧಾರ ಮಾಡಿಲ್ಲ. ನಾನು ಹೆದರಿ ಕೂರುವುದಿಲ್ಲ. ಈಗ ಮಾತನಾಡುವುದು ಎಷ್ಟು ಕಷ್ಟಕರ ಎನ್ನುವುದು ಗೊತ್ತಿದೆ. ಒಂದು ಕಾಲದಲ್ಲಿ ರಾಜೀವ್ ಗಾಂಧಿ ೪೨೪ ಸೀಟು ಗೆದ್ದಿರಲಿಲ್ಲವೇ ಎಲ್ಲವೂ ಬದಲಾಗುತ್ತದೆ.