ದೇಶದ ಬೆಳವಣಿಗೆ, ಅಭಿವೃದ್ಧಿ, ಹಾಗೂ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಅತ್ಯಂತ ದೊಡ್ಡ ಕೊಡುಗೆ ನೀಡಿದೆ : ಶತ್ರುಘ್ನ ಸಿನ್ಹಾ – Vishwanews24

Featured, ರಾಷ್ಟ್ರ ನ್ಯೂಸ್

ಮಧ್ಯಪ್ರದೇಶ: ಮಧ್ಯಪ್ರದೇಶದ ಚಿಂದವಾಡದಲ್ಲಿ ಮಾತನಾಡುತ್ತಿದ್ದ ಸಿನ್ಹಾ, ಈ ಕಾಂಗ್ರೆಸ್​​ ಪರಿವಾರದಲ್ಲಿ ಮಹಾತ್ಮಾ ಗಾಂಧಿಯವರಿಂದ ಹಿಡಿದು ಸರ್ದಾರ್ ವಲ್ಲಭ್ ಭಾಯ್ ಪಟೇಲ್​ ವರೆಗೆ, ಮಹಮ್ಮದ್ ಅಲಿ ಜಿನ್ಹಾರಿಂದ ಹಿಡಿದು ಜವಾಹರ್​ಲಾಲ್ ನೆಹರು ತನಕ, ದಿವಂಗತ ಇಂದಿರಾ ಗಾಂಧಿ, ರಾಜೀವ್​ಗಾಂಧಿ, ರಾಹುಲ್​ಗಾಂಧಿಯವರಿಂದ ಹಿಡಿದು ಸುಭಾಷ್ ಚಂದ್ರ ಬೋಸ್​​ ಅವರ ಈ ಕಾಂಗ್ರೆಸ್ ಪಾರ್ಟಿ, ದೇಶದ ಬೆಳವಣಿಗೆಗಾಗಿ, ದೇಶದ ಅಭಿವೃದ್ಧಿಗಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಅತ್ಯಂತ ದೊಡ್ಡ ಕೊಡುಗೆ ನೀಡಿದೆ, ಅದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ ಅಂತಾ ಹೇಳಿದರು.

ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು, ದೇಶಕ್ಕಿಂತ ಯಾವುದೂ ದೊಡ್ಡದಲ್ಲ ಅಂತ ಪ್ರಧಾನಿ ಮೋದಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಜೊತೆಗೆ ಮೋದಿ ಸರ್ಕಾರದ ಜಿಎಸ್​​ಟಿ ಹಾಗೂ ನೋಟ್​​ಬ್ಯಾನ್​ ನಿರ್ಧಾರವನ್ನ ಖಂಡಿಸಿದರು.

ಶತ್ರುಘ್ನ ಸಿನ್ಹಾ, ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಹಾಗೇ ಅವರ ಪತ್ನಿ ಪೂನಂ ಸಿನ್ಹಾ, ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೃಹ ಸಚಿವ ರಾಜನಾಥ್​ ಸಿಂಗ್ ವಿರುದ್ಧ ಲಖನೌ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ.