ದೇಶದ ಮೂಲ ಮೌಲ್ಯಗಳ ರಕ್ಷಣೆಗಾಗಿ ಎಲ್ಲವನ್ನು ತ್ಯಾಗಮಾಡಲು ಸಿದ್ಧಳಿದ್ದೇನೆ : ಸೋನಿಯಾ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ರಾಯಬರೇಲಿ: ದೇಶದ ಮೂಲ ಮೌಲ್ಯಗಳ ರಕ್ಷಣೆಗಾಗಿ ಎಲ್ಲವನ್ನು ತ್ಯಾಗಮಾಡಲು ಸಿದ್ಧಳಿದ್ದೇನೆ ಎಂದು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದರು. ಪುನರಾಯ್ಕೆ ಮಾಡಿದ ರಾಯಬರೇಲಿ ಕ್ಷೇತ್ರದ ಮತದಾರರಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಈ ಕುರಿತು ಬರೆದಿರುವ ಪತ್ರದಲ್ಲಿ ಅವರು, ಕ್ಷೇತ್ರದಲ್ಲಿ ತಮ್ಮ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದ ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷಕ್ಕೆ ಕೃತಜ್ಞತೆ ಸಲ್ಲಿಸಿದರು.

‘ಕಾಂಗ್ರೆಸ್‌ ಪಕ್ಷದ ಹಿರಿಯರು ಹುಟ್ಟುಹಾಕಿದ ಸಂಪ್ರದಾಯ ಎತ್ತಿಹಿಡಿಯಲು, ಮೌಲ್ಯಗಳ ರಕ್ಷಣೆಗೆ ಬದ್ಧಳಿದ್ದೇನೆ. ಇದಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ’ ಎಂದು ಹೇಳಿದರು.

ಮುಂದಿನ ದಿನಗಳು ಬಹಳ ಕಷ್ಟದ್ದು ಎಂಬುದು ಗೊತ್ತಿದೆ. ಆದರೆ ಮುಂದೆ ಕಾಂಗ್ರೆಸ್ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲಲಿದೆ ಎಂಬ ಆತ್ಮವಿಶ್ವಾಸವನ್ನು ನಿಮ್ಮ ಬೆಂಬಲ ಹಾಗೂ ನಂಬಿಕೆ ನನಗೆ ನೀಡಿದೆ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.