Featured

ದೇಶವು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ; ಅದಕ್ಕೆ, ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಪ್ರಜೆಗಳಿಗೆ ಜಾಗೃತಿಗೊಳಿಸಿ ಅವರ ಉಳಿವಿಗೆ ಶ್ರಮಿಸುತ್ತಿದ್ದೇನೆ : ಸಸಿಕಾಂತ ಸೆಂಥಿಲ್ -Vishwanews24

ರಾಯಚೂರು: ‘ದೇಶದಲ್ಲಿ ಪ್ರಜಾ ಪ್ರಭುತ್ವದ ಮೌಲ್ಯಗಳು ಕುಸಿಯುತ್ತಿವೆ. ಸಹೋದರರಂತೆ ಇದ್ದವರನ್ನು ಕಲಹಕ್ಕೆ ಪ್ರಚೋದಿಸುತ್ತಿದೆ. ಬ್ರಿಟಿಷರ ಆಳ್ವಿಕೆ ಕಾಲದಲ್ಲಿದ್ದ ಸ್ಥಿತಿ ಮತ್ತೆ ಹತ್ತಿರ ಬರುತ್ತಿದೆ’ ಎಂದು ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ಅಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಧರ್ಮ–ಧರ್ಮಗಳ ಜಗಳ ಹಚ್ಚುವ ಕೆಲಸಕ್ಕೆ ಕೇಂದ್ರ ಮುಂದಾಗಿದೆ. ಸಂವಿಧಾನದ ನೀತಿ ನಿಯಮಗಳನ್ನು ಹಾಳು ಮಾಡಿದೆ. ದೇಶವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿನ್ನೆಡೆ ಅನುಭವಿಸುವಂತೆ ಮಾಡಿದೆ’ ಎಂದು ದೂರಿದರು.

ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಪೂರಕ ವಾತಾವರಣ ಸೃಷ್ಟಿಸಬೇಕು. ಶಿಕ್ಷಣ ಸುಧಾರಣೆಗೆ ಮೊದಲು ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಿ, ಶಿಕ್ಷಣ, ಆರೋಗ್ಯದ ಕಡೆ ಗಮನ ಹರಿಸಿ, ಅದಕ್ಕೆ ಹೆಚ್ಚಿನ ಬಜೆಟ್ ಮೀಸಲಿಡುವಂತೆ ತಿಳಿಸಿದರು.

ದೆಹಲಿಯ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದು ಖಂಡನೀಯ. ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ ಅದನ್ನು ಆಡಳಿತದಲ್ಲಿರುವ ಸರ್ಕಾರ ಕಿತ್ತುಕೊಂಡಿದೆ. ಒತ್ತಾಯ ಪೂರ್ವಕ ತಮ್ಮದೇ ಆದ ಸೈದ್ಧಾಂತಿಕ ನಿಲುವುಗಳನ್ನು ಜಾರಿಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ ವಿಧಿಸಿ ದೇಶದಲ್ಲಿ ಕೈಗಾರಿಕ ಕಂಪನಿಗಳು ನಷ್ಟ ಅನುಭವಿಸುವಂತೆ ಮಾಡಿದೆ. ಅನೇಕ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ಖಾಸಗಿಕರಣ ಮಾಡಲು ಹೋರಟಿದ್ದಾರೆ ಇದು ಸರಿಯಾದ ನಿರ್ಧಾರ ಅಲ್ಲ ಎಂದರು.

ದೇಶವು ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ; ಅದಕ್ಕೆ, ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿ ಅಧಿಕಾರದಿಂದ ಹೊರಬಂದು ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಟೀಕಿಸುತ್ತಿದ್ದೇನೆ. ಪ್ರಜೆಗಳಿಗೆ ಜಾಗೃತಿಗೊಳಿಸಿ ಅವರ ಉಳಿವಿಗೆ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.

 

 

Vishwa News 24

Recent Posts

ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ;  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು  -vishwanews24

ಮೂಡುಬಿದಿರೆ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ;  ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು  ಮೂಡುಬಿದಿರೆ : ಚಲಿಸುತ್ತಿದ್ದ ಕಾರಿನ ಫಾಗ್ ಲೈಟ್‌ನಿಂದ ಅಕಸ್ಮಾತ್ತಾಗಿ ಬೆಂಕಿ…

2 hours ago

ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ -vishwanews24

ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ ಕೊಡುತ್ತಾರೆ, ಕೊಡದೆ ಎಲ್ಲಿ ಹೋಗುತ್ತಾರೆ : ಪ್ರಿಯಾಂಕ ಖರ್ಗೆ ಬೆಂಗಳೂರು: ಆರೆಸ್ಸೆಸ್‌ನವರು ಇಂದಲ್ಲ ನಾಳೆ ದಾಖಲೆ…

2 hours ago

ಉಡುಪಿ : ಬಾಲಕಿ ನಾಪತ್ತೆ -vishwanews24

ಉಡುಪಿ : ಬಾಲಕಿ ನಾಪತ್ತೆ ಉಡುಪಿ : ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಪ್ರೀತಿ (16) ಎಂಬ…

16 hours ago

ಮಂಗಳೂರು ವಿಮಾನ ನಿಲ್ದಾಣದಲ್ಲಿ ‘ಉಬರ್’ ಸೇವೆ ಆರಂಭ -vishwanews24

ಮಂಗಳೂರು ವಿಮಾನ ನಿಲ್ದಾಣದಲ್ಲಿ 'ಉಬರ್' ಸೇವೆ ಆರಂಭ ಪ್ರಯಾಣಿಕರಿಗೆ ವೇಗವಾದ ಮತ್ತು ಸುಲಭ ಸಾರಿಗೆ ಸೌಲಭ್ಯ ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ…

19 hours ago

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ -vishwanews24

ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಅತ್ಯಂತ ಖಂಡನೀಯ ಕೃತ್ಯ : ರೆನೋಲ್ಡ್ ಪ್ರವೀಣ್ ಕುಮಾರ್ ಉಡುಪಿ: ಜಿಲ್ಲಾ ನ್ಯಾಯಾಲಯಕ್ಕೆ…

22 hours ago

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ -vishwanews24

ಉಡುಪಿ : ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ;   ಪೊಲೀಸರು, ಶ್ವಾನ ದಳದಿಂದ ಶೋಧ ಕಾರ್ಯಾಚರಣೆ ಉಡುಪಿ: ಉಡುಪಿ…

23 hours ago