ದೇಶಿಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಿರ್ಮಿಸಲಾಗಿರುವ ವಿಮಾನ ವಾಹಕ ನೌಕೆಯನ್ನು ಮುಂದಿನ ವರ್ಷ ಲೋಕಾರ್ಪಣೆ : ರಾಜನಾಥ್‌ ಸಿಂಗ್‌ -Vishwanews24

Featured, ರಾಷ್ಟ್ರ ನ್ಯೂಸ್

ದೇಶಿಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಿರ್ಮಿಸಲಾಗಿರುವ ವಿಮಾನ ವಾಹಕ ನೌಕೆಯನ್ನು ಮುಂದಿನ ವರ್ಷ ಲೋಕಾರ್ಪಣೆ : ರಾಜನಾಥ್‌ ಸಿಂಗ್‌ -Vishwanews24

ಮುಂದಿನ ವರ್ಷ ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆ ಸಿಗಲಿರುವ ಅತ್ಯಂತ ದೊಡ್ಡ ಉಡುಗೊರೆ ಇದಾಗಿರಲಿದೆ..

ಕೊಚ್ಚಿ: ದೇಶಿಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ನಿರ್ಮಿಸಲಾಗಿರುವ ವಿಮಾನ ವಾಹಕ ನೌಕೆಯನ್ನು ಮುಂದಿನ ವರ್ಷ ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.

ಕೊಚ್ಚಿ ಬಂದರು ಪ್ರದೇಶದ ಹಡಗು ನಿರ್ಮಾಣ ಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ.

ಆತ್ಮನಿರ್ಭರ ಭಾರತ ಪರಿಕಲ್ಪನೆಯ ಅನ್ವಯ ಅದನ್ನು ನಿರ್ಮಿಸಲಾಗುತ್ತಿದೆ. ಎನ್‌ಡಿಎ ಆಡಳಿತದ ಅವಧಿ ಯಲ್ಲಿಯೇ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು.

ಮುಂದಿನ ವರ್ಷ ದೇಶ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆ ಸಿಗಲಿರುವ ಅತ್ಯಂತ ದೊಡ್ಡ ಉಡುಗೊರೆ ಇದಾಗಿರಲಿದೆ ಎಂದು ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ.